ಪೆರಾಡಿ: ಸಂಬಂಧಿ ಸದಸ್ಯರಿಂದಲೇ ವ್ಯಕ್ತಿಯ ಕೊಲೆ ಪತ್ತೆಯಾಗದ ಆರೋಪಿಗಳು; ತನಿಖಾ ತಂಡ ರಚನೆ

2304VNR investigation copy

2304VNR sujatha investigation copy

2304VNR SUJATHA

2304VNR SUNDARA MOOLYAಪೆರಾಡಿ: ಜಮೀನು ಹಾಗೂ ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದ ಆರೋಪಿಗಳು ಚಿಕ್ಕಪ್ಪನನ್ನೇ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಡಿ ಗ್ರಾಮದ ಕುರೆದ್ದುವಿನಲ್ಲಿ ಎ. 22ರ ರಾತ್ರಿ ಸಂಭವಿಸಿದ್ದು, ಆರೋಪಿಗಳು ತಲೆ ಮರೆಮರೆಸಿಕೊಂಡಿದ್ದಾರೆ.
ಪೆರಾಡಿಯ ಕುರೆದ್ದು ನಿವಾಸಿ ಸುಂದರ ಮೂಲ್ಯ (55) ಮೃತಪಟ್ಟ ದುದೈವಿ.
ಸುಂದರ ಮೂಲ್ಯರ ಮನೆ ಸಮೀಪವೇ ವಾಸವಾಗಿರುವ ಇವರ ಸಹೋದರ ಅಣ್ಣಿ ಮೂಲ್ಯರ ಪುತ್ರರಾದ ದಯಾನಂದ (32) ಹಾಗೂ ಸತೀಶ (37) ಆರೋಪಿಗಳು.
ನಡೆದದ್ದೇನು?: ಎ.೨೨ರ ಸಂಜೆ ಪೆರಾಡಿ ಸಮೀಪದ ಅಂಗಡಿಗೆ ಆಗಮಿಸಿದ್ದ ಸುಂದರ ಮೂಲ್ಯರನ್ನು ಭೇಟಿಯಾಗಿದ್ದ ಸತೀಶ ಸಾಲದ ರೂಪದಲ್ಲಿ ಹಣದ ಬೇಡಿಕೆ ಇರಿಸಿದ್ದ ಎನ್ನಲಾಗಿದೆ. ಇದಕ್ಕೆ ನಯವಾಗಿಯೇ ತಿರಸ್ಕರಿಸಿದ ಸುಂದರ ಮೂಲ್ಯರೊಂದಿಗೆ ಮಾತಿಗೆ ಮಾತು ಬೆಳೆಸಿ ಹಲ್ಲೆಗೆ ಮುಂದಾಗಿದ್ದಾರೆ. ಇಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದ ಸುಂದರ ಮೂಲ್ಯರ ಮನೆಗೂ ಆಗಮಿಸಿ ಸಹೋದರ ಸತೀಶನನ್ನು ಕರೆಸಿದ ದಯಾನಂದ ಜಮೀನು ವಿವಾದವನ್ನೂ ಮುಂದಿಟ್ಟು ಯದ್ವತದ್ವಾ ಹಲ್ಲೆ ನಡೆಸಿದ್ದು, ಕೆನ್ನೆಗೆ ಬಿದ್ದ ಬಲವಾದ ಏಟಿನಿಂದ ನೆಲಕ್ಕುರುಳಿದ ಸುಂದರ ಮೂಲ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಂತರ ಮನೆಯನ್ನು ಜಾಲಾಡಿದ ಆರೋಪಿಗಳು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆಂದು ಮನೆ ಮಂದಿ ಆರೋಪಿಸಿದ್ದಾರೆ.
ಪತ್ನಿ, ಮಕ್ಕಳು ಮನೆಯಲ್ಲಿರಲಿಲ್ಲ: ಮೃತರ ಪತ್ನಿ ಸುಜಾತರವರು ಇಬ್ಬರು ಪುಟ್ಟ ಮಕ್ಕಳೊಂದಿಗೆ ಮುದ್ದಾಡಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ತವರು ಮನೆಯಾದ ವೇಣೂರಿನ ಕಾಂತಿಬೆಟ್ಟುವಿಗೆ ಆಗಮಿಸಿದ್ದರು. ರಾತ್ರಿ ಸುಮಾರು ೯.೧೫ರ ಸುಮಾರಿಗೆ ಸುಜಾತರವರ ಮೊಬೈಲ್‌ಗೆ ಕರೆ ಮಾಡಿದ ದಯಾನಂದ ಚಿಕ್ಕಪ್ಪ ದಾರಿ ಬದಿಯಲ್ಲಿ ಬಿದ್ದಿದ್ದು, ಎಬ್ಬಿಸಿ ಮನೆಗೆ ತಲುಪಿಸಿದಾಗ ಮನೆಯಂಗಳದಲ್ಲೂ ಬಿದ್ದಿದ್ದಾರೆಂದು ಮೊಬೈಲ್‌ಗೆ ಕರೆ ಮಾಡಿ ತಿಳಿಸಿದ್ದಾನೆ. ಪತ್ನಿ ಸುಜಾತರವರು ಮನೆಗೆ ಬಂದು ನೋಡುವಷ್ಟರಲ್ಲಿ ಗಂಡ ಸುಂದರ ಮೂಲ್ಯರವರ ಮೃತದೇಹ ಮನೆಯಂಗಳದಲ್ಲಿ ಪತ್ತೆಯಾಗಿದೆ.
ಸ್ಥಳದಲ್ಲಿದ್ದ ಆರೋಪಿಗಳು: ರಾತ್ರಿ ಹಾಗೂ ಮರುದಿನ ಬೆಳಿಗ್ಗೆ ಸಂಬಂಧಿಕರೆಲ್ಲ ಮೃತದೇಹವನ್ನು ಬಂದು ಗಮನಿಸುತ್ತಿದ್ದಂತೆ ಸ್ಥಳದಲ್ಲಿದ್ದ ದಯಾನಂದ ಮತ್ತು ಸತೀಶ ವೇಣೂರು ಪೊಲೀಸರ ಆಗಮನವಾಗುತ್ತಿದ್ದಂತೆ ಕಾಲ್ಕಿತ್ತಿದ್ದಾರೆ.
ಬೆದರಿಕೆಯೊಡ್ಡಿದ್ದ ಆರೋಪಿಗಳು: ಜಾಮೀನು, ಹಣ ಹಾಗೂ ಬಾವಿಯಿಂದ ನೀರು ತೆಗೆಯುವ ವಿಷಯದಲ್ಲಿ ಸುಂದರ ಮೂಲ್ಯರೊಂದಿಗೆ ದಯಾನಂದ ನಿರಂತರವಾಗಿ ಗಲಾಟೆ ನಡೆಸುತ್ತಿದ್ದುದ್ದಲ್ಲದೆ ಹಲವಾರು ಬಾರಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿರುವುದಾಗಿ ಮೃತರ ಪತ್ನಿ ಸುಜಾತರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.