ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಮಹೋತ್ಸವ ಸಂಪನ್ನ

venurವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಮಹಾರಥೋತ್ಸವ, ದೈವ-ದೇವರ ಭೇಟಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿ ಎ.೨೧ರಂದು ಸಂಪನ್ನಗೊಂಡಿತು.
ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ಜರಗಿತು. ರಾತ್ರಿ ಸನಾತನ ನಾಟ್ಯಾಲಯ ಮಂಗಳೂರು ಇವರು ಪ್ರಸ್ತುತ ಪಡಿಸಿದ ಶಾರದಾ ಮಣಿ ಶೇಖರ್ ಹಾಗೂ ಬಜಿರೆ ಹಲ್ಲಂದೋಡಿಯ ಶಶಿಕುಮಾರ್ ಇಂದ್ರ ದಂಪತಿ ಹಾಗೂ ಮಕ್ಕಳ ಸಹಕಾರದೊಂದಿಗೆ ನೃತ್ಯಾಂಜಲಿ ಕಾರ್ಯಕ್ರಮ ಜರಗಿತು. ಎ. ೨೫ರಂದು ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವವು ಜರಗಿತು. ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.