HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಯಕ್ಷಗಾನ ಕಲಾವಿದ ಕೊಕ್ಕಡ ಈಶ್ವರ ಭಟ್ 75ರ ಸಂಭ್ರಮ-ಸನ್ಮಾನ, ಯಕ್ಷಗಾನ

prashasti ಕೊಕ್ಕಡ: ತೆಂಕುತಿಟ್ಟು ಯಕ್ಷ ಗಾನದ ಪ್ರಸಿದ್ದ ಸ್ತ್ರೀ ವೇಷಧಾರಿ ಕೊಕ್ಕಡ ಈಶ್ವರ ಭಟ್ ಇವರ ೭೫ ವರ್ಷ ಸಂಭ್ರಮ ದ ನಿಮಿತ್ತ ಎಪ್ರಿಲ್ 26ರಂದು ಸಂಜೆ ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ೭೫ರ ಸಂಭ್ರಮ, ಕೊಕ್ಕಡದವರ ಯಕ್ಷಗುರುಗಳಿಗೆ ಸನ್ಮಾನ, ಒಡನಾಡಿ ಕಲಾವಿದರಿಗೆ ಗೌರವಾರ್ಪಣೆ, ಹೊಸನಗರ ಮೇಳದವರಿಂದ ವಿಶೇಷ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ.ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದು ಅಭ್ಯಾಗತರಾಗಿ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ , ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ಎಂ. ವೆಂಕಟರಮಣ ರಾವ್, ಹಿರಿಯ ಯಕ್ಷಗಾನ ಕಲಾವಿದ ಕೊಕ್ಕಡ ಈಶ್ವರ ಭಟ್, ಪಟ್ರಮೆ ಗ್ರಾ.ಪಂ. ಅಧ್ಯಕ್ಷ ನವೀನ್ ಕಜೆ, ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ, ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಳದ ಆಡಳಿತ ಮೊಕ್ತೇಸರ ಎಂ. ಎಸ್. ತ್ರಿವಿಕ್ರಮ ಶಬರಾಯ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೊಕ್ಕಡ ಈಶ್ವರ ಭಟ್ಟರ ಯಕ್ಷಗಾನ ಗುರುಗಳಾದ ಕುಡಾನ ಗೋಪಾಲಕೃಷ್ ಭಟ್ ಮತ್ತು ಒಡನಾಡಿ ಕಲಾವಿದ ಖ್ಯಾತ ಸ್ತ್ರೀ ವೇಷಧಾರಿ ಎಂ. ಕೆ. ರಮೇಶ್ ಆಚಾರ್ಯ ಇವರಿಗೆ ಸನ್ಮಾನ ಮತ್ತು ಒಡನಾಡಿ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದ್ದು ಖ್ಯಾತ ಯಕ್ಷಗಾನ ಅರ್ಥದಾರಿ ವಾಸುದೇವ ರಂಗಾಭಟ್ ಮಧೂರು ಇವರು ನಿರ್ವಹಣೆ ನಡೆಸಲಿದ್ದಾರೆ. ಹೊಸನಗರ ಮೇಳದ ಪ್ರಸಿದ್ದ ಕಲಾವಿದರಿಂದ ವೀರ ಅಭಿಮನ್ಯು-ದಮಯಂತಿ ಪುನರ್ ಸ್ವಯಂವರ ಯಕ್ಷಗಾನ ಬಯಲಾಟವೂ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.