ಕಾಜೂರಿನಲ್ಲಿ 43ನೇ ವಾರ್ಷಿಕ ರಿಫಾಯಿ ರಾತೀಬು, ಮತ ಪ್ರಭಾಷಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

kajuru rifayi daffu proogremm copy ಕಾಜೂರು : ದರ್ಗಾ ಶರೀಫ್ ಕಾಜೂರು, ರಿಫಾಯಿ ದಫ್ಫು ಸಮಿತಿ ಕಾಜೂರು ಇದರ ೪೩ನೇ ವಾರ್ಷಿಕ ರಿಫಾಯಿ ರಾತೀಬು ಮತ್ತು ಧಾರ್ಮಿಕ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಏ.೧೭ ರಂದು ಉದ್ಘಾಟನೆಗೊಂಡಿತು. ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅವರ ಘನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆದವು. ಏ. ೧೭ ರಂದು ಕಾಜೂರು ಮುದರ್ರಿಸ್ ಮುಹಮ್ಮದ್ ಬಶೀರ್ ಆಹ್‌ಸನಿ ಮುಖ್ಯಪ್ರಭಾಷಣ ನಡೆಸಿಕೊಟ್ಟರು. ಏ. ೧೮ ರಂದು ಸಯ್ಯಿದ್ ಮುಹ್ಸಿನ್ ತಂಙಳ್ ಕಲ್ಲೇರಿ ದುಆ ಆಶೀರ್ವಚನಗೈದರು. ಈ ದಿನ ಅಲ್‌ಮದೀನತುಲ್ ಮುನವ್ವರ ಸಂಸ್ಥೆ ಮೂಡಡ್ಕ ಇದರ ಮೇನೇಜರ್ ಅಶ್ರಫ್ ಸಖಾಫಿ ಮಾಡಾವು ಮುಖ್ಯ ಪ್ರಭಾಷಣ ನಡೆಸಿಕೊಟ್ಟರು. ಏ. ೧೯ ರಂದು ಕೇರಳದ ಪೊಸೋಟ್ ಮಳ್‌ಹರ್ ಶಿಕ್ಷಣ ಸಂಸ್ಥೆಯ ಪ್ರೊಫೆಸರ್ ಅನಸ್ ಸಿದ್ದೀಖ್ ಸಖಾಫಿ ಪ್ರಭಾಷಣಗೈದರು.
ಏ.೨೦ ರಂದು ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ಮತಪ್ರಭಾಷಣ ನಡೆಸಿಕೊಟ್ಟರು. ಏ. ೨೧ ಇಂದು ಖತಮುಲ್ ಕುರ್‌ಆನ್, ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಮಗ್ರಿಬ್ ನಮಾಝ್ ಬಳಿಕ ಸಾಮೂಹಿಕ ಪ್ರಾರ್ಥನೆ ಹಾಗೂ ರಾತೀಬು ಮಜ್ಲಿಸ್ ನಡೆಯಲಿದೆ. ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ನೀಡಲಿದ್ದು ಹಾಜಿ ಎಂ. ಅಬ್ದುಲ್ಲ ಉಸ್ತಾದ್ ಅವರ ಸುಪುತ್ರ ಮುಹಮ್ಮದ್ ಕುಂಞಿ ಮಂಡೆಕೋಲು ಭಾಗವಹಿಸಲಿದ್ದಾರೆ.
ಏ. ೨೨ ರಂದು ನಡೆಯುವ ಸಮಾರೋಪದಲ್ಲಿ ಕೇರಳದ ಖ್ಯಾತ ವಾಗ್ಮಿ ರಾಫೀಹ್ ಅಹ್‌ಸನಿ ಕಾಂದಪುರಂ ಮುಖ್ಯಪ್ರಭಾಷಣ ನಡೆಸಿಕೊಡಲಿದ್ದು ಎಸ್‌ವೈಎಸ್, ಎಸ್ಸೆಸ್ಸೆಫ್, ಕೆಡಿಸಿ ಘಟಕದ ಪದಾಧಿಕಾರಿಗಳು, ದರ್ಗಾದ ಆಡಳಿತಾಧಿಕಾರಿ ಮತ್ತು ಸಿಬ್ಬಂದಿಗಳು ಸೇರಿದಂತೆ ನಾಡಿನ ಅನೇಕ ಗಣ್ಯ ಮಹನೀಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.