HomePage_Banner_
HomePage_Banner_
HomePage_Banner_

ಚಂದ್ರಹಾಸ ಬಳಂಜರವರ ಅಂತ್ಯ ಆರಂಭಕ್ಕೊಂದು ಮುನ್ನುಡಿ ಕೃತಿ ಅನಾವರಣ

anthya kavana bidugade 3 ಉಜಿರೆ : ಎಸ್.ಡಿ.ಎಂ. ಕಾಲೇಜಿನ ಎಂ.ಕಾಂ. ವಿದ್ಯಾರ್ಥಿ ಯುವ ಸಾಹಿತಿ ಚಂದ್ರಹಾಸ ಬಳಂಜರವರ 2ನೇ ಕೃತಿ ಅಂತ್ಯ ಆರಂಭಕ್ಕೊಂದು ಮುನ್ನುಡಿ ಕೃತಿಯ ಅನಾವರಣ ಕಾರ್ಯಕ್ರಮವು ಸೆಮಿನಾರ್ ಹಾಲ್ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ ಉಜಿರೆಯಲ್ಲಿ ಎ. 20ರಂದು ನಡೆಯಿತು.
ಖ್ಯಾತ ಲೇಖಕ, ಕಾದಂಬರಿಕಾರ ಉಜಿರೆ ಕೆ.ಟಿ. ಗಟ್ಟಿಯವರು ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿ ಪರಿಪೂರ್ಣ ಕವಿಯಾಗಲು ಸುಮಾರು ೫೦೦ ಪುಸ್ತಕಗಳನ್ನು ಓದಿ ಅರ್ಥೈಸಿಕೊಂಡಿರಬೇಕು. ಪದವನ್ನು ಬಳಸಿ ಅವಲೋಕಿಸಿ ಆ ಪದಕ್ಕೆ ಅರ್ಥ ಕೊಡಬೇಕಾದರೆ ತಪಸ್ಸು ಮಾಡಿದಂತ ಅನುಭವವಾಗುತ್ತದೆ. ಚಂದ್ರಹಾಸ ಬಳಂಜರವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ. ಕೆ.ಎಸ್. ಮೋಹನ ನಾರಾಯಣ ವಹಿಸಿ ಮಾತನಾಡಿ ಚಂದ್ರಹಾಸ ಬಳಂಜರವರು ಬಹುಮುಖ ಪ್ರತಿಭೆಯಾಗಿದ್ದು ಎಲ್ಲಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಸೈ ಎನಿಸಿಕೊಂಡಿರುವವರು. ಸಮಾಜದ ಪರಿವರ್ತನೆಗೆ ಇಂತಹ ಕವನ ಕೃತಿಯಿಂದ ಕೂಡ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಎಸ್.ಡಿ.ಎಂ. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎನ್. ಉದಯಚಂದ್ರ ಮಾತನಾಡಿ ಇಂದಿನ ಮಕ್ಕಳು ಪೇಸ್‌ಬುಕ್, ವಾಟ್ಸ್‌ಆಪ್ ಅಂತ ಸಮಯವನ್ನು ಕಳೆದುಕೊಳ್ಳುತ್ತಿದ್ದು, ಚಂದ್ರಹಾಸ ಬಳಂಜರವರು ವಾಣಿಜ್ಯದ ವಿದ್ಯಾರ್ಥಿಯಾಗಿದ್ದುಕೊಂಡು, ಸಾಹಿತ್ಯದ ಬಗ್ಗೆ ಒಲವನ್ನು ತೋರಿಸಿ ತನ್ನ ಎಳೆಯ ಪ್ರಾಯದಲ್ಲಿ ಇಂಥಹ ಸಾಧನೆ ಮಾಡಿದ್ದಾರೆ. ಚಂದ್ರಹಾಸ ಬಳಂಜರವರು ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಎಸ್.ಡಿ.ಎಂ. ಪಿ.ಜಿ. ವಿಭಾಗ ಮುಖ್ಯಸ್ಥೆ ಡಾ. ಎಂ. ವೈ. ಮಂಜುಳಾ, ಚಂದ್ರಹಾಸರವರ ಮಾತೃಶ್ರೀ ಶ್ರೀಮತಿ ಸುಶೀಲ ನಾಲ್ಕೂರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಚಂದ್ರಹಾಸ ಬಳಂಜರವರು ಮಾತನಾಡಿ ನಾ ಕಂಡಿದ್ದು, ನಾ ಕೇಳಿದ್ದು, ನಾ ಯೋಚಿಸಿದ್ದು ಪದವಾಗಿ ಹೊರ ಹೊಮ್ಮಿದೆ. ಆ ಪದಗಳನ್ನು ಸಾಲಾಗಿ ಮಾಡಿ ಈ ಸಂಕಲನವನ್ನು ಹೊರ ಜಗತ್ತಿಗೆ ಇಂದು ಪರಿಚಯಿಸಿದೆ. ಇದೊಂದು ವಿಶಿಷ್ಟ ವಿನೂತನ ಮಾದರಿಯ ಕೃತಿಯಾಗಿದ್ದು, ಸಹಕರಿಸಿದ ಎಲ್ಲರನ್ನು ಸ್ಮರಿಸಿದರು ಹಾಗೂ ಸಹಕಾರವನ್ನು ಕೋರಿದರು. ಚಂದ್ರಹಾಸ ಬಳಂಜರವರು ಬಹುಮುಖ ಪ್ರತಿಭೆಯಾಗಿದ್ದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಮಂಗಳೂರು ಕೇಂದ್ರ ಯುವ ವಾಹಿನಿ ಘಟಕ ಕೊಡಮಾಡುವ ಪ್ರಭಾಕರ ನೀರುಮಾರ್ಗ ಯುವ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದ್ದಲ್ಲದೆ ಬೆಳ್ತಂಗಡಿ ಮಂಜುಶ್ರೀ ಜೇಸೀಸ್‌ನ ಸಾಧನಾ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಅವರ ಸಾಧನೆಯನ್ನು ಗುರುತಿಸಿ ಗೌರವಿಸಿದ್ದಾರೆ. ಅವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಉದಯೋ ನ್ಮುಖ ಬರಹಗಾರರಾ ಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.