ಏ.30 : ಲಾಯಿಲದಲ್ಲಿ ರಕ್ತದಾನ ಶಿಬಿರ, ಸಾಂಸ್ಕೃತಿಕ ವೈಭವ, ತಾಲೂಕಿನಲ್ಲಿ ಮೊತ್ತ ಮೊದಲ ಬಾರಿಗೆ ಮ್ಯಾಟ್ ಕಬಡ್ಡಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

laila kabaddi press meet copyಬೆಳ್ತಂಗಡಿ : ಉತ್ಸಾಹಿ ಯುವಕ ಮಂಡಲ ಲಾಯಿಲ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ. ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ದ. ಕ, ಉಡುಪಿ, ಕೊಡಗು ಅಂತರ್‌ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ, ಬೃಹತ್ ರಕ್ತದಾನ ಶಿಬಿರ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಏ. 30ರಂದು ಪಡ್ಲಾಡಿ ಶಾಲಾ ವಠಾರದಲ್ಲಿ ಜರುಗಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕೆ ಗಿರೀಶ್ ಡೋಂಗ್ರೆ, ಕಬಡ್ಡಿ ತೀರ್ಪುಗಾರರ ಮಂಡಳಿಯ ಪದಾಧಿಕಾರಿ ಫ್ರಾನ್ಸಿಸ್ ವಿ. ವಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅಂದು ಪೂರ್ವಾಹ್ನ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಪ್ರಭಾಕರ ಬಂಗೇರ ನೆರವೇರಿಸಲಿದ್ದು ಗ್ರಾ.ಪಂ ಅಧ್ಯಕ್ಷೆ ವೀಣಾ ರಾವ್ ಸೇರಿದಂತೆ ಕಾರ್ಯಕ್ರಮಕ್ಕೆ ಸಹಯೋಗ ನೀಡುತ್ತಿರುವ ಸಂಘ ಸಂಸ್ಥೆಗಳ ಪ್ರಮುಖ ಗಣ್ಯರುಗಳು ಭಾಗವಹಿಲಿದ್ದಾರೆ. ಈ ಸಭೆಯಲ್ಲಿ ಜನಪದ ಕಲಾವಿದ ಹೆಚ್ ಕೃಷ್ಣಯ್ಯ ಲಾಲ, ಸಮಾಜ ಸೇವಕ ರುಕ್ಮಯ್ಯ ಕನ್ನಾಜೆ, ಉರಗಪ್ರೇಮಿ ಅಶೋಕ ನಿನ್ನಿಕಲ್ಲು, ಹಿರಿಯ ಕಬಡ್ಡಿ ಆಟಗಾರ ಡ್ಯಾನಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಉದಯ ಚೌಟ ಸೇರಿದಂತೆ ನ್ಯಾಷನಲ್ ಕಬಡ್ಡಿ ಆಟಗಾರರಾದ ಮುಹಮ್ಮದ್ ಅಕ್ರಂ, ಮುಹಮ್ಮದ್ ಸಿನಾನ್, ನಶಾದುದ್ದೀನ್ ಅವರನ್ನು ಸನ್ಮಾನಿಸಲಾಗುವುದು. ಸಂಜೆ ೬ ರಿಂದ ಸ್ಥಳೀಯ ಪ್ರತಿಭೆ ಕು| ಅನನ್ಯಾ ಭಟ್ ಉಜಿರೆ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ, ಸಂಜೆ ೭ ಗಂಟೆಯಿಂದ ಉಮೇಶ್ ಮಿಜಾರು ಅಭಿನಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ “ನೆಟ್‌ವರ್ಕ್ ತಿಕ್ಕುಜಿ” ನಾಟಕ ಪ್ರದರ್ಶನ ನಡೆಯಲಿದೆ. ರಾತ್ರಿ ೯ ಗಂಟೆಯ ನಂತರ ಕಬಡ್ಡಿ ಪಂದ್ಯಾಟ ಪ್ರಾರಂಭಗೊಳ್ಳಲಿದೆ. ವಿಶೇಷ ಆಕರ್ಷಣೆಯಾಗಿ ತುಳು ಚಲನಚಿತ್ರ ನಟ ಚೇತನ್ ರೈ ಮಾಣಿ ಮತ್ತು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ರಾಜಶೇಖರ ಶೆಟ್ಟಿ ಮಡಂತ್ಯಾರು, ವಿಲ್ಸನ್ ಸೋನ್ಸ್ ಪಡ್ಲಾಡಿ, ಶೇಖರ್ ಲಾಲ, ಜಯರಾಜ್ ಜೈನ್, ಹರೀಶ್ ಎಲ್, ವಿಜಯ ಫೆರ್ನಾಂಡಿಸ್, ಮಹೇಶ್ ಶೆಟ್ಟಿ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.