HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಅಂಡಿಂಜೆಯಲ್ಲಿ ನೀರಿಗಾಗಿ ಪರದಾಟ

 ಅಂಡಿಂಜೆ : ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದಲ್ಲಿ ನೀರಿನ ಅಭಾವ ಉಂಟಾಗಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ.
ಈ ಪ್ರದೇಶಕ್ಕೆ ೮ ವರ್ಷಗಳ ಹಿಂದೆಯೇ ಸರಕಾರದಿಂದ ನೀರಿನ ಟ್ಯಾಂಕ್ ಮಂಜೂರುಗೊಂಡಿದೆ ಆದರೆ ಅದರ ಕಾಮಗಾರಿ ಪೂರ್ಣಗೊಂಡರೂ ಕೂಡ ಇನ್ನೂ ಉದ್ಘಾಟನೆಯಾಗದಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ಪಂಚಾಯತ್ ಅಧ್ಯಕ್ಷರಾಗಲಿ, ಅಭಿವೃದ್ಧಿ ಅಧಿಕಾರಿಯಾಗಲಿ ಗಮನ ಹರಿಸದಿರುವುದು ಬೇಸರದ ಸಂಗತಿಯಾಗಿದೆ. ಚುನಾವಣೆಯ ಸಂದರ್ಭ ಭರವಸೆ ನೀಡಿದ್ದ ಜನಪ್ರತಿನಿದಿಗಳು ಕೂಡಾ ಈಗ ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಸು ಮಾಡುತ್ತಿಲ್ಲ. ಇನ್ನಾದರೂ ಪಂಚಾಯತ್ ಆಡಳಿತ ಹಾಗೂ ಅಧಿಕಾರಿವರ್ಗ ಎಚ್ಚೆತ್ತುಕೊಂಡು ಕೂಡಲೇ ಅಂಡಿಂಜೆ ಪರಿಸರಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟು ಗ್ರಾಮಸ್ಥರ ೮ ವರ್ಷಗಳ ಕುಡಿಯುವ ನೀರಿನ ಬೇಡಿಕೆಯನ್ನು ಈಡೇರಿಸಿ ಕೊಡಬೇಕಾಗಿದೆ. ಆ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.