ಭಜನೆಯಿಂದ ಬದುಕು ಕಟ್ಟುವ ಕಾರ್ಯ: ಶ್ರೀ ಗುರುದೇವಾನಂದ ಸ್ವಾಮೀಜಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

machinaಪುತ್ತಿಲ: ಯಾವುದೇ ಕೆಲಸ ಮಾಡಲು ನಮ್ಮಲ್ಲಿ ನಿರ್ಮಲವಾದ ಭಕ್ತಿ ಬೇಕು. ಭಜನೆಗೆ ದೇವರು ಒಲಿಯುತ್ತಾನೆ. ಭಜನೆಯಿಂದ ಬದುಕು ಕಟ್ಟುವ ಕಾರ್ಯ ನಡೆಯುತ್ತದೆ. ಗಜಾನನ ಇದು ನಾಲ್ಕು ವೇದದ ಸ್ವರೂಪಗಳಾಗಿವೆ. ಗಣಪತಿ ಜಲತತ್ವಕ್ಕೆ ಅಧಿದೇವತೆ. ಗಣಪತಿಯನ್ನು ನಂಬಿದರೆ ಸಂಕಷ್ಟ ನಿವಾರಣೆಯಾಗಿ ಅಂತರಂಗದ ಶುದ್ದಿಯಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಯತಿಗಳಾದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಶ್ರೀ ವಿಘ್ನೇಶ್ವರ ಭಜನಾ ಮಂದಿರ ಹೇರಾಜೆ ಪುತ್ತಿಲ ಇದರ ವತಿಯಿಂದ ಹೇರಾಜೆಯಲ್ಲಿ ನವೀಕೃತಗೊಳಿಸಿದ ಶ್ರೀ ವಿಘ್ನೇಶ್ವರ ಭಜನಾ ಮಂದಿರದ ಉದ್ಘಾಟನಾ ಉತ್ಸವದ ಪ್ರಯುಕ್ತ ಏ. ೨೦ ರಂದು ನಡೆದ ಧರ್ಮ ಸಭೆಯನ್ನುದ್ಧೇಶಿಸಿ ಅವರು ಆಶೀರ್ವಚನ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಬೆಂಗಳೂ ಉಚ್ಛನ್ಯಾಯಾಲಯದ ನ್ಯಾಯವಾದಿ ಹರೀಶ್ ಪೂಂಜ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಯಕ್ಷಕೂಟದ ಅಧ್ಯಕ್ಷ ರಾಮಣ್ಣ ಪೂಜಾರಿ ಕೋಟೆಗುತ್ತು, ಬಾರ್ಯ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಗೌಡ ಟಿ, ಗುರುಕೃಪಾ ಟ್ರಾವೆಲ್ಸ್‌ನ ಬೊಮ್ಮಣ್ಣ ಶೆಟ್ಟಿ, ಪಾರೆಂಕಿ ಶ್ರೀ ದೇವಳದ ಮಾಜಿ ಆಡಳಿತ ಮೊಕ್ತೇಸರ ಮೂಡಾಯೂರು ವಿಠಲ
ಶೆಟ್ಟಿ, ಸುರ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸದಸ್ಯ ಮನೋಹರ ಶೆಟ್ಟಿ, ಬಳ್ಳಮಂಜ ಶ್ರೀ ವಿದ್ಯಾಸಾಗರ್ ಸನಿವಾಸ ಶಾಲೆಯ ಸಂಚಾಲಕ ವೆಂಕಟ ರೆಡ್ಡಿ, ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಎನ್. ಸಂಜೀವ ರೈ ಬೆಟ್ಟಂಪಾಡಿ, ಜಯರಾಜ್ ಪುತ್ತಿಲ, ಪ್ರಗತಿಪರ ಕೃಷಿಕ ವಿವೇಕಾನಂದ ಶೆಟ್ಟಿ, ಕಣಿಯೂರು ವಲಯದ ಪ್ರಗತಿಬಂಧು ಮೋನಪ್ಪ ಗೌಡ, ಸಮೃದ್ಧಿ ಟ್ರಾವೆಲ್ಸ್‌ನ ಗುಣಶೇಖರ ಕೊಡಂಗೆ, ಇವರು ಗೌರವ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ಪ್ರಶಾಂತ್ ಪೈ ಸ್ವಾಗತಿಸಿ, ತುಳಸಿದಾಸ ಪೈ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಪೂಜಾರಿ ಕುದ್ಕೋಳಿ ಧನ್ಯವಾದವಿತ್ತರು.
ಏ. ೧೯ ರಿಂದಲೇ ಪ್ರಾರಂಭಗೊಂಡಿರುವ ಕಾರ್ಯಕ್ರಮಗಳು ಏ. ೨೨ ರ ವರೆಗೆ ಜರುಗಲಿದೆ.
ಕಾರ್ಯಾಲಯದ ಉದ್ಘಾಟನೆಯನ್ನು ತಣ್ಣೀರುಪಂತ ಶ್ರೀ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ಅಧ್ಯಕ್ಷ ಮಡಪ್ಪಾಡಿ ಸದಾನಂದ ಶೆಟ್ಟಿ ನೆರವೇರಿಸಿದರು. ಪಾಕಶಾಲೆಯನ್ನು ಶಶಿಧರ ಪುತ್ತೂರಾಯ ಬಳ್ಳಮಂಜ ನೆರವೇರಿಸಿದರು. ಹಸರುವಾಣಿ ಹೊರೆ ಕಾಣಿಕೆ ಉಗ್ರಾಣವನ್ನು ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಬೊಲ್ನಡ್ಕ ಉದ್ಘಾಟಿಸಿದರು. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭ ನಡೆಯಿತು.
ಅಧ್ಯಕ್ಷತೆಯನ್ನು ಕಕ್ಕಬೀಡು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ನಾಯಕ್ ಉಳಿ ವಹಿಸಿದ್ದರು. ಉದ್ಘಾಟನೆಯನ್ನು ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ ವಹಿಸಿದ್ದರು. ಪಾರೆಂಕಿ ಮಹಿಷಮರ್ದಿನಿ ಸೇವಾ ಪ್ರತಿಷ್ಠಾನದದ ಅಧ್ಯಕ್ಷ ಜಯಂತ ಶೆಟ್ಟಿ, ಮುಖ್ಯ ಅತಿಥಿಯಾಗಿದ್ದರು. ಸಮಾರಂಭದಲ್ಲಿ ತಾ.ಪಂ ಸದಸ್ಯೆ ಕೇಶವತಿ ಮತ್ತು ಸುಜಾತಾ ರೈ, ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ, ಸದಸ್ಯ ಕಿಶೋರ್ ಶೆಟ್ಟಿ, ವಿಷ್ಣು ಭಟ್ ಆಲಮ್ಮ, ಹೇಮಂತ್ ಕುಮಾರ್, ಮಚ್ಚಿನ ಕ್ಷೇತ್ರದ ಎ.ಪಿ.ಎಂ.ಸಿ. ಸದಸ್ಯ ಸಂತೋಷ್ ಕುಮಾರ್ ಮೊದಲಾದವರು ಗೌರವ ಉಪಸ್ಥಿತರಿದ್ದರು.
ಅಂದು ಸಂಜೆ ವಿಘ್ನೇಶ್ವರ ಭಜನಾಮಂದಿರದ ಸದಸ್ಯರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಾಗೂ “ತೂಪಿನಾಯೆ ಒರಿ ಉಲ್ಲೆ” ನಾಟಕ ಪ್ರದರ್ಶನಗೊಂಡರೆ, ಏ. ೨೦ ರಂದು ಸಂಜೆ ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ಇವರಿಂದ “ಗೀತ-ಸಾಹಿತ್ಯ- ಸಂಭ್ರಮ” ವಿಶೇಷ ಮನೋರಂಜನಾ ಕಾರ್ಯಕ್ರಮ ಸಾದರಗೊಂಡಿತು.
ದೇವತಾ ಸನ್ನಿಧಿಯಲ್ಲಿ ವಿವಿಧ ವೈಧಿಕ ವಿಧಿವಿಧಾನಗಳು ಭಕ್ತಿ ಶ್ರದ್ಧೆಯಿಂದ ನೆರವೇರಿದವು. ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ಭಜನಾ ಕಾರ್ಯಕ್ರಮಗಳೂ ನಡೆದವು. ಎರಡೂ ದಿನಗಳಲ್ಲೂ ಭಕ್ತ ದಾನಿಗಳ ಸಹಕಾರದೊಂದಿಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಭಜನಾ ಮಂದಿರ ಸಮಿತಿಯ ಅಧ್ಯಕ್ಷ ರಘು ಶೆಟ್ಟಿ ಕುಮೆರ‍್ಲಡ್ಡ, ನವೀಕೃತ ಭಜನಾ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ತುಳಸಿದಾಸ್ ಪೈ ಹೇರಾಜೆ, ಭಜನಾ ಮಂದಿರ ಮಹಿಳಾ ಸಮಿತಿ ಅಧ್ಯಕ್ಷೆ ಹೇಮಾವತಿ ಎಸ್ ಸೇರಿದಂತೆ ಮೂರೂ ಸಮಿತಿಗಳ ಗೌರವಾಧ್ಯಕ್ಷರುಗಳು, ಸಂಚಾಲಕರೂ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಉಪಸಮಿತಿಗಳ ಮುಖ್ಯಸ್ಥರುಗಳು ಮತ್ತು ಪದಾಧಿಕಾರಿಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.