ಧರ್ಮದ ಆಚರಣೆ ಅಧರ್ಮದ ಪರಿತ್ಯಾಗದಿಂದ ಇಚ್ಛೆ ನೆರವೇರುವುದು: ಶ್ರೀ ಭಾರತೀತೀರ್ಥ ಶ್ರೀಗಳು

swamiji 1

swamiji

swamiji 3

swamiji 4 swamiji 6ಬೆಳ್ತಂಗಡಿ : ಧರ್ಮದ ಆಚರಣೆಯಿಂದ ಸುಖ ಪ್ರಾಪ್ತಿಯಾಗುತ್ತದೆ ಅಧರ್ಮದ ಆಚರಣೆಯಿಂದ ದುಃಖ ಯಾವತ್ತೂ ತಪ್ಪುವುದಲ್ಲ. ಆದರೂ ಕೂಡಾ ಅಧರ್ಮವನ್ನು ತೊರೆಯಲು ಯಾರೂ ಮನಃ ಮಾಡುವುದಿಲ್ಲ ಇದು ವಿಪರ್ಯಾಸ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶೃಂಗೇರಿ ಶ್ರೀ ಶಂಕರದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಶ್ರೀ ಶ್ರಿಮದ್ ಭಾರತೀತೀರ್ಥ ಮಹಾ ಸ್ವಾಮಿಗಳು ನುಡಿದರು.
ಶೃಂಗೇರಿ ಜಗದ್ಗುರುಗಳಾದ ಶ್ರೀಮದ್ ಭಾರತೀತೀರ್ಥ ಮಹಾಸ್ವಾಮೀಜಿಗಳವರು ಮತ್ತು ಅವರ ಪರಮಶಿಷ್ಯರಾದ ಶ್ರೀಮದ್ ವಿಧುಶೇಖರಭಾರತೀ ಮಹಾಸ್ವಾಮೀಜಿಯವರು ಏ.೨೦ ರಂದು ಬೆಳ್ತಂಗಡಿ ಹಳೆಕೋಟೆಯಲ್ಲಿರುವ ಶಾಸಕ ಕೆ. ವಸಂತ ಬಂಗೇರರ ಮನೆಗೆ ಆಗಮಿಸಿ, ನಂತರ ಶ್ರೀ ಶಾರದಾ ಮಂಟಪಕ್ಕೆ ಚಿತ್ರೈಸಿ ಗುರುವಂದನೆ ಸ್ವೀಕರಿಸಿ ದಿವ್ಯ ಆಶೀರ್ವಚನ ನೀಡಿದರು.
ಸುಖ ಬೇಕು ದುಃಖ ಬೇಡ ಎಂಬ ಇಚ್ಛೆ ಬಡವ ಶ್ರೀಮಂತನೆಂಬ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬನಿಗೂ ಸಮಾನವಾಗಿರುತ್ತದೆ. ಹೀಗಿರುವಾಗ ಇಚ್ಛೆ ನೆರವೇರಲು ಸಾಧ್ಯವೇ ಇಲ್ಲ. ಯಾರಿಗೆ ತೃಪ್ತಿ ಎನ್ನುವುದು ಇಲ್ಲವೋ ಅಂತವರಿಗೆ ಸೌಖ್ಯವೂ ಇರುವುದಿಲ್ಲ. ಇನ್ನೂ ಬೇಕು ಎಂಬ ಆಸೆ ಏರುತ್ತಾ ಹೋದರೆ ಅದರ ತುದಿ ಮುಟ್ಟಿದವರು ಯಾರೂ ಇಲ್ಲ ಆದ್ದರಿಂದ ಇರುವುದರಲ್ಲಿ ತೃಪ್ತಿಯಿಂದ ಬಾಳುವವನೇ ಉತ್ತಮ ಎಂದರು.
ಭಾರತ ಪವಿತ್ರವಾದ ದೇಶ ಇಲ್ಲಿನ ಸನಾತನ ಧರ್ಮ ಅನಾದಿಕಾಲದಿಂದಲೂ ಇದ್ದುದು. ಅದನ್ನು ಈಗ ಹಿಂದೂ ಧರ್ಮ ಎಂತಲೂ ಕರೆಯುತ್ತೇವೆ. ಇದರ ಉದಯ ಯಾವಾಗ ಎಂಬುದು ಯಾರಿಗೂ ತಿಳಿದಿಲ್ಲ. ಸೃಷ್ಠಿ ಎಂದಿನಿಂದ ಇದೆಯೋ ಅಂದಿನಿಂದಲೂ ಈ ಸನಾತನ ಧರ್ಮ ಆಚರಣೆಯಲ್ಲಿದೆ ಎಂದರು.
ಪಂಚೇಂದ್ರೀಯಗಳ ನಿಯಂತ್ರಣ, ಧರ್ಮ ಆಚರಣೆ ಮಾಡು, ಪರೋಪಕಾರ ಮಾಡು, ಇನ್ನೊಬ್ಬರಿಗೆ ತೊಂದರೆಯಾಗದಂತೆ ಜೀವಿಸು ಎಂಬ ಸಂದೇಶವನ್ನು ಶಂಕರಾಚಾರ್ಯರು ನಮಗೆ ತಿಳಿಸಿಕೊಟ್ಟಿದ್ದಾರೆ. ಶ್ರೀ ಶಂಕರಾಚಾರ್ಯರು ೪ ಕಡೆ ಅಮ್ನಾಯ ಪೀಠಗಳನ್ನು ಸ್ಥಾಪಿಸಿದ್ದು ಅದರಲ್ಲಿ ಒಂದು ಪೀಠವನ್ನು ಕರ್ನಾಟಕದ ಶೃಂಗೇರಿಯಲ್ಲಿ ಸ್ಥಾಪಿಸಿರುವುದು ನಿಮ್ಮೆಲ್ಲರ ಭಾಗ್ಯ ಎಂದರು.
ಶೃಂಗೇರಿ ಪೀಠಾಧಿಪತಿಗಳನ್ನು ತಾಲೂಕಿಗೆ ಕರೆಸಬೇಕು ಎಂಬ ಇಚ್ಛೆ ಹೊಂದಿ ಅದನ್ನು ಸಾಧಿಸಿದ ಶಾಸಕ ವಸಂತ ಬಂಗೇರರ ಈ ಪರಿಯ ಗೌರವಕ್ಕೆ, ತಾಲೂಕಿನ ಜನತೆಗೆ ನಾನು ಮತ್ತು ಕಿರಿಯ ಸ್ವಾಮೀಜಿಗಳು ಸಂತುಷ್ಟರಾಗಿ ಆಶೀರ್ವದಿಸುತ್ತೇವೆ ಎಂದರು.
ಆಧಿ ಶಂಕರರ ತತ್ವ ತಿಳಿದು ಜೀವನ ಸಾರ್ಥಕ್ಯಗೊಳಿಸಿ : ವಿಧುಶೇಖರ ಶ್ರೀ
ಸಮಾರಂಭದಲ್ಲಿ ಧಿವ್ಯ ಆಶೀರ್ವಚನ ನೀಡಿದ ಮಹಾ ಸ್ವಾಮಿಗಳ ತತ್ಕರಕಮಲ ಸಂಜಾತರಾದ ಪರಮ ಶಿಷ್ಯ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು, ೧೨೦೦ ವರ್ಷಗಳ ಹಿಂದೆ ಧರ್ಮದ ಅನುಷ್ಠಾನವಿಲ್ಲದೆ ಜೀವನ ನಡೆಸುತ್ತಾ ಅಮೂಲ್ಯ ಮನುಷ್ಯ ಜನ್ಮವನ್ನು ಕಳೆಯುತ್ತಿದ್ದ ಜನತೆಗೆ ಆಗ ಉದಯಿಸಿದ ಆಧಿಶಂಕರಾಚಾರ್ಯರು ಧರ್ಮ ಮತ್ತು ಒಂದು ಭಾಷ್ಯವನ್ನು ಬರೆದಿದ್ದಾರೆ. ದೊಡ್ಡ ದೊಡ್ಡ ವಿಧ್ವಾಂಸರಾಗಿದ್ದವರೆಲ್ಲರೂ ಅವರ ಭಾಷ್ಯಗಳನ್ನು ಓದಿ ಅದಕ್ಕೆ ವ್ಯಾಖ್ಯಾನಗಳನ್ನು ಬರೆದು ಪಾಂಡಿತ್ಯವನ್ನು ಮೆರೆದಿದ್ದಾರೆ. ಮನುಷ್ಯರಲ್ಲಿ ಉತ್ತಮಾಧಿಕಾರಿ, ಮಧ್ಯಮಾಧಿಕಾರಿ, ಮಂದಾಧಿಕಾರಿ ಎಂಬ ಮೂರು ವರ್ಗದವರಿರುತ್ತಾರೆ. ಪ್ರತಿಯೊಬ್ಬರೂ ಎಲ್ಲವನ್ನೂ ತಿಳಿದು ಅರಗಿಸಿಕೊಳ್ಳುವ ಉತ್ತಮಾಧಿಕಾರಿಗಳಾಗಿರಲು ಸಾಧ್ಯವಿಲ್ಲ. ಅಂತಹ ಶಾಸ್ತ್ರ ತಿಳಿಯುವ ಶಕ್ತಿಯೂ ಅವರಲ್ಲಿ ಇರಬೇಕೆಂದಿಲ್ಲ. ಅವರ ಶ್ಲೋಕಗಳನ್ನು ದೇವರ ಮುಂದೆ ಪಠಿಸಿದರೆ ಅದರ ತತ್ವವನ್ನು ತಿಳಿಯುವ ಶಕ್ತಿ ನಿಧಾನಕ್ಕೆ ಬರುತ್ತದೆ ಅಂತಹ ಆದಿಶಂಕರರ ತತ್ವಗಳನ್ನು ತಿಳಿದು ಜೀವನವನ್ನು ಸಾರ್ಥಕ್ಯಗೊಳಿಸೋಣ ಎಂದರು.
ಪ್ರಾರಂಭದಲ್ಲಿ ಮಂತ್ರಘೋಷಗಳನ್ನು ಮೊಳಗಿಸಿದ ಉಜಿರೆ ಶ್ರೀ ಧ.ಮಂ. ಕಾಲೇಜಿನ ಸಂಸ್ಕೃತ ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ಈ. ಮಹಾಬಲ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಗುರುದೇವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿಯವರು ವಸಂತ ಬಂಗೇರ ದಂಪತಿ ಪರವಾಗಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಮಹಾದೇವ ತಾಮ್ಹಣ್‌ಕರ್ ಭಿನ್ನಹವತ್ತಳೆಯನ್ನು ವಾಚಿಸಿದರು.
ಗೌರವಾರ್ಪಣೆ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಹೆಚ್. ಪದ್ಮಗೌಡ ಮತ್ತು ಬಳಗದವರು, ಬಿ. ನಾರಾಯಣ ಭಟ್ ಇಳಂತಿಲ ಅವರ ವತಿಯಿಂದ ಕುತ್ಯಾರು ಶ್ರೀ ಸೋಮನಾಥೇಶ್ವರ ವತಿಯಿಂದ ಸುಬ್ರಾಯ ಡೋಂಗ್ರೆ, ರಾಮಕ್ಷತ್ರೀಯ ಸಂಘದ ವತಿಯಿಂದ ವಿ.ಆರ್. ನಾಯಕ್ ಮತ್ತು ಬಳಗ, ಬ್ರಾಹ್ಮಣ ಸಮಾಜದ ವತಿಯಿಂದ ಅಶೋಕ್ ಕುಮಾರ್ ಬಿ.ಪಿ., ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ವತಿಯಿಂದ ನಿವೃತ್ತ ಎಸ್.ಪಿ. ಪೀತಾಂಬರ ಹೆರಾಜೆ, ನಾನಾಡಿ ಸುರೇಶ್ ನಾಯಕ್, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಆರ್. ನರೇಂದ್ರ, ಜಿ.ಎಸ್.ಬಿ. ಸಮಾಜದ ಪರವಾಗಿ ಚಂದ್ರಕಾಂತ ಕಾಮತ್, ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮತ್ತು ಮನೆಯವರು, ಬಡಕೋಡಿ ಶ್ರೀ ಮಹಮ್ಮಾಯಿ ದೇವಸ್ಥಾನದ ಪದಾಧಿಕಾರಿಗಳು, ನಾರಾವಿಯ ಹೃಷಿಕೇಶ್ ಕಿಣಿ ಮತ್ತು ಶ್ರೀನಿವಾಸ್ ವಿ. ಕಿಣಿ, ಮಾಜಿ ಶಾಸಕ ಪ್ರಭಾಕರ ಬಂಗೇರ ಮೊದಲಾದವರು ಪೂಜ್ಯ ಉಭಯ ಸ್ವಾಮೀಜಿಗಳಿಗೆ ಗೌರವಾರ್ಪಣೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವಸಂತ ಬಂಗೇರ, ಧರ್ಮಪತ್ನಿ ಶ್ರೀಮತಿ ಸುಜಿತಾ ವಿ. ಬಂಗೇರ, ಪುತ್ರಿಯರಾದ ಪ್ರೀತಿತಾ ಮತ್ತು ಬಬಿತಾ, ಅಳಿಯ ವಿಜೇತ್ ಹಾಗೂ ಮೊಮ್ಮಕ್ಕಳು ಶ್ರೀ ಸ್ವಾಮೀಜಿಯವರ ಪಾದುಕಾ ಪೂಜೆ ನೆರವೇರಿಸಿದರು. ಬಳಿಕ ಬಿನ್ನಹವತ್ತಳೆಯನ್ನು ಸಮರ್ಪಿಸಿದರು.
ಕಾರ್ಯಕ್ರಮದ ಪೂರ್ವವಾಗಿ ನಡೆದ ಮೆರವಣಿಗೆ ಮತ್ತು ಕಾರ್ಯಕ್ರಮದಲ್ಲಿ ಉಜಿರೆ ದೇವಸ್ಥಾನ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಬಂಗೇರ ಸಹೋದರರಾದ ಮಾಜಿ ಶಾಸಕರಾದ ಕೆ.ಪ್ರಭಾಕರ ಬಂಗೇರ, ರಮೇಶ್ ಬಂಗೇರ, ಜಯರಾಮ್ ಬಂಗೇರ, ನೇಮಿರಾಜ ಬಂಗೇರ, ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.