ಹದಿಹರೆಯದ ಇಬ್ಬರು ಮುಸ್ಲಿಂ ಯುವಕರು ತಮ್ಮ ಶಿಕ್ಷಕಿಯ ಕೈಕುಲುಕಲು ನಿರಾಕರಿಸಿದ್ದನ್ನೇ ನೆಪ ಮಾಡಿಕೊಂಡು ಎರಡು ಮುಸ್ಲಿಂ ಕುಟುಂಬಗಳ ನಾಗರಿಕತ್ವ ಪ್ರಕ್ರಿಯೆಯನ್ನು ಸ್ವಿಟ್ಝರ್ಲ್ಯಾಂಡ್ ಸರ್ಕಾರ ಸದ್ಯಕ್ಕೆ ತಡೆಹಿಡಿದಿದೆ. ಸ್ವಿಟ್ಝರ್ಲ್ಯಾಂಡ್ನ ಉತ್ತರ ಭಾಗದ ಥರ್ವಿಲ್ ಪಾಲಿಕೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ೧೪ ಮತ್ತು ೧೫ ವರ್ಷದ ಇಬ್ಬರು ವಿದ್ಯಾರ್ಥಿಗಳು, ಧಾರ್ಮಿಕ ಕಾರಣಗಳಿಗಾಗಿ ತಾವು ಕುಟುಂಬಕ್ಕೆ ಸೇರದ ಮಹಿಳೆಯರನ್ನು ಸ್ಪರ್ಶಿಸುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇ ಈ ಕಠಿಣ ನಿರ್ಧಾರಕ್ಕೆ ಕಾರಣ.