HomePage_Banner_
HomePage_Banner_
HomePage_Banner_

ವೇಣೂರು: ಸಹಕಾರಿ ಸಂಘದ ಸ್ಮಾರ್ಟ್ ಬ್ಯಾಂಕಿಂಗ್ ಸೇವೆ ಉದ್ಘಾಟನೆ ರೈತರ ಹಿತ ಕಾಪಾಡುವುದು ಸಹಕಾರಿ ಸಂಘಗಳ ಜವಾಬ್ದಾರಿ: ಬಿ.ಕೆ. ಸಲೀಂ

venur ca bank copyವೇಣೂರು: ಗ್ರಾಮೀಣ ಭಾಗದ ಜನರ ಹಣಕಾಸಿನ ಅವಶ್ಯಕತೆಯನ್ನು ಪೂರೈಸುವುದರ ಜೊತೆಗೆ ರೈತರ ಹಿತ ಕಾಪಾಡುವುದು ಸಹಕಾರಿ ಸಂಘಗಳ ಜವಾಬ್ದಾರಿ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಧುನಿಕತೆಗೆ ಒಳಗೊಂಡಿರುವುದು ಶ್ಲಾಘನೀಯ. ಇದರಿಂದ ಗ್ರಾಹಕರು ಹೆಚ್ಚಿನ ಸೌಲಭ್ಯ ಹಾಗೂ ಅನುಕೂಲ ಪಡೆಯಲಿದ್ದಾರೆ ಎಂದು ದ.ಕ. ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕರಾದ ಬಿ.ಕೆ. ಸಲೀಂ ಹೇಳಿದರು.
ಅವರು ಎ.೨೦ರಂದು ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ಗಣಕೀಕೃತ ವ್ಯವಹಾರದ ಸ್ಮಾರ್ಟ್ ಬ್ಯಾಂಕಿಂಗ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘಗಳು ರೈತರ ಪರ, ಗ್ರಾಹಕರ ಚಿಂತನೆಗೆ ಸ್ಪಂಧಿಸಿದಾಗ ಮಾತ್ರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಆ ಕೆಲಸ ವೇಣೂರಿನ ಸಹಕಾರಿ ಸಂಘದಲ್ಲಿ ನಡೆಯುತ್ತಿದೆ. ಸಂಘದ ವ್ಯವಹಾರವನ್ನು ಅತ್ಯಾಧುನಿಕ ಗಣಕೀಕೃತ ವ್ಯವಹಾರದಡಿ ತರಲಾಗಿರುವುದರಿಂದ ಸೇವೆಗಳು ಇನ್ನಷ್ಟು ವೇಗ ಹಾಗೂ ಪಾರದರ್ಶಕವಾಗಿ ನಡೆಯಲಿದೆ. ಆಡಳಿತ ಮಂಡಳಿಯ ಸಾಧನೆ ಮೆಚ್ಚುವಂಥದ್ದು ಎಂದು ಅವರು ಹೇಳಿದರು. ಬೇರೆ ಜಿಲ್ಲೆಯಂತೆ ದ.ಕ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಸಾಲ ನೀಡದ ಆರೋಪಗಳಿಲ್ಲ. ಶೇ. ೩ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲು ರಾಜ್ಯ ಸರ್ಕಾರವೂ ಪ್ರೋತ್ಸಾಹ ನೀಡುತ್ತಿದೆ. ಬಡ ರೈತರಿಗೆ ಸಾಲ ನೀಡುವ ಮೂಲಕ ಸಮಾಜದ ಅಭಿವೃದ್ಧಿ ಸಹಕಾರಿ ಸಂಘಗಳ ಧ್ಯೇಯವಾಗಬೇಕು ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.