HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶ್ರೀ ಮೂಕಾಂಬಿಕೆ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

  ಉಜಿರೆ: ಶ್ರೀ ಮೂಕಾಂಬಿಕೆ ಕ್ಷೇತ್ರ ಅರಳಿ-ಅಲ್ಯೊಟ್ಟು ಇದರ ನೂತನ ಶಿಲಾಮಯ ದೇಗುಲದಲ್ಲಿ ಶ್ರೀ ಮೂಕಾಂಬಿಕೆ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಸಾಂತ್ಯಾರು ಲಕ್ಷ್ಮೀಪ್ರಸಾದ ತಂತ್ರಿಗಳು ಹಾಗೂ ಕಾರಿಂಜ ರಾಘವೇಂದ್ರ ಭಟ್ ಇವರುಗಳ ನೇತೃತ್ವದಲ್ಲಿ ಎ. 20ರಿಂದ ಆರಂಭಗೊಂಡಿದ್ದು, ಎ. 22ರವರೆಗೆ ನಡೆಯಲಿದೆ.
ಎ. ೨೦ ಪೂರ್ವಾಹ್ನ ನಂದಿ ಸ್ಥಾಪನೆ, ನಾಗದೇವರ ಸಾನಿಧ್ಯದಲ್ಲಿ ಉಗ್ರಾಣ ಮೂಹೂರ್ತ, ಆದ್ಯಗಣ ಯಾಗ, ಮಹಾಪೂಜೆ, ನವಗ್ರಹ ಹೋಮ, ನವಕ ಕಲಶ ಅಭಿಷೇಕ, ಅನ್ನ ಸಂತರ್ಪಣೆ ಹಾಗೂ ಸಂಜೆ ಗೇಹಾ ಪ್ರತಿಗ್ರಹ, ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ವಿಧಾನ ಹಾಗೂ ಪೆರ್ಡೂರು ವೇದಮೂರ್ತಿ ರಾಮಚಂದ್ರತಾಯರಿಂದ ನಾಗದರ್ಶನ ಸೇವೆ ಜರಗಿತು. ಎ. ೨೧ರಂದು ಬೆಳಿಗ್ಗೆ ಬಿಂಬ ಶುದ್ಧಿ ಪ್ರಕ್ರಿಯೆ, ಭೂವರಾಹ ಹೋಮ, ಸಂಜೆ ದೇವಿ ಬಿಂಬ ಶುದ್ಧಿ, ಮಂಡಲ ರಚನೆ, ಕಲಶ ಆದಿವಾಸ ಹೋಮ, ಬ್ರಹ್ಮಕಲಶ ನಡೆಯಲಿದೆ. ಎ. ೨೨ರಂದು ಬೆಳಿಗ್ಗೆ ಗಣಯಾಗ ಪ್ರತಿಷ್ಠಾ ಹೋಮ, ದೇವಿ ಬಿಂಬ ಪ್ರತಿಷ್ಠೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಬ್ರಹ್ಮ ಕಳಶ ಅಭಿಷೇಕ ಹಾಗೂ ಮಹಾ ಚಂಡಿಕಾಯಾಗ, ಪ್ರಸನ್ನ ಪೂಜೆ, ಸಂಜೆ ದೀಪಾರಾಧನೆ ಪೂರಕ ರಂಗ ಪೂಜೆ, ಮಹೋತ್ಸವ, ದೈವಗಳಿಗೆ ಕೋಲ ನಡೆಯಲಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.