ಕುವೆಟ್ಟು ಬಯಲು ಗದ್ದೆಯಲ್ಲಿ ಸಾರ್ವಜನಿಕ ಶನಿ ಪೂಜೆ ಹಾಗೂ ಗುರು ಪೂಜೆ

kuvettu samuhika shani pooje copyಕುವೆಟ್ಟು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆ ಇವರ ವತಿಯಿಂದ ೧೬೨ನೇ ಗುರುಪೂಜೆ ಪ್ರಯುಕ್ತ ಸಾರ್ವಜನಿಕ ಶನಿ ಪೂಜೆ ಹಾಗೂ ಗುರು ಪೂಜೆ ಎ. 16ರಂದು ಕುವೆಟ್ಟು ಬಯಲು ಗದ್ದೆಯಲ್ಲಿ ಗೋಪಾಲಕೃಷ್ಣ ತಂತ್ರಿ ಮಡಂತ್ಯಾರು ಇವರ ಪೂಜಾವಿಧಿ ವಿಧಾನಗಳೊಂದಿಗೆ ಜರಗಿತು.
ಮಧ್ಯಾಹ್ನ ಸಭಾ ಕಾರ್ಯಕ್ರಮ ಜರಗಿತು. ಸಭಾದ್ಯಕ್ಷತೆಯನ್ನು ಕುವೆಟ್ಟು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಬಂಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ., ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಶ್ರೀಮತಿ ತನುಜಾ ಶೇಖರ್, ಸಂಪತ್ ಬಿ. ಸುವರ್ಣ ಅಧ್ಯಕ್ಷರು ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಆಗಮಿಸಿದ್ದರು.
ವೇದಿಕೆಯಲ್ಲಿ ಕುವೆಟ್ಟು ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಜಗನ್ನಾಥ ಹೇರಾಜೆ ಕುವೆಟ್ಟು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಚಂದ್ರಶೇಖರ್ ಕೋಟ್ಯಾನ್ ಸಬರಬೈಲು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಲೋಚನ ರಾಮಚಂದ್ರ ನ್ಯಾಯದಕಲ ಉಪಸ್ಥಿತರಿದ್ದರು. ಚಂದ್ರಶೇಖರ್ ಕೋಟ್ಯಾನ್ ಸ್ವಾಗತಿಸಿದರು. ಆನಂದ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕುಶಾಲಪ್ಪ ಪೂಜಾರಿ ಧನ್ಯವಾದಗೈದರು. ಸಾರ್ವಜನಿಕ ಆನ್ನಸಂತರ್ಪಣೆ ಜರಗಿತು.
(ಚಿತ್ರ ವರದಿ ಮನು ಮದ್ದಡ್ಕ)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.