ಧರ್ಮಸ್ಥಳ, ಮುಂಡಾಜೆಯಲ್ಲಿ ಇಬ್ಬರು ಅಸಹಜ ಸಾವು

 ಬೆಳ್ತಂಗಡಿ: ಧರ್ಮಸ್ಥಳ ಮತ್ತು ಮುಂಡಾಜೆಯಲ್ಲಿ ನದಿ ನೀರಿನಲ್ಲಿ ಮುಳುಗಿ ಇಬ್ಬರು ಅಸಹವಾಗಿ ಸಾವನ್ನಪ್ಪಿದ ಘಟನೆ ಏ. 13 ರಂದು ಬೆಳಕಿಗೆ ಬಂದಿದೆ. ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ಕುಂದಾಪುರ ನಿವಾಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಸತೀಶ್ ನಾಯ್ಕ(40ವ.) ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಮುಂಡಾಜೆ ಗ್ರಾಮದ ಕಾಪು ರಕ್ಷಿತಾರಣ್ಯ ಸಮೀಪದ ಮುಂಡಾಜೆ ಅಣೆಕಟ್ಟಿನ ಬಳಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಅಪರಿಚಿತರೊಬ್ಬರ ಮೃತದೇಹವೊಂದು ಇದೆ ಎಂದು ಸಂಜೆಯ ವೇಳೆ ಠಾಣೆಗೆ ಮಾಹಿತಿ ಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಇದು ಆಕಸ್ಮಿಕ ಘಟನೆಯೇ? ಅಥವಾ ಕೊಲೆಯೇ ಎಂಬ ಕುತೂಹಲ ಮೂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.