ವಿಕೇಂದ್ರಿಕರಣದ ವ್ಯವಸ್ಥೆಯನ್ನು ಕೇಂದ್ರಿಕರಿಸಿದ ಕಾಂಗ್ರೆಸ್ ಸರ್ಕಾರ: ಕೊರಗಪ್ಪ ನಾಯ್ಕ

Advt_NewsUnder_1
Advt_NewsUnder_1
Advt_NewsUnder_1

 ಬೆಳ್ತಂಗಡಿ: ಆಡಳಿತ ವಿಕೇಂದ್ರಿಕರಣ, ಸುಧಾರಣೆ, ರಮೇಶ ಕುಮಾರ್ ವರದಿ, ಎಂದು ತನ್ನ ಬೆನ್ನ ತಾನೇ ತಟ್ಟಿ ಶಹಭಾಷ್‌ಗಿರಿ ಗಿಟ್ಟಿಸುತ್ತಿದ್ದು, ಕಾಂಗ್ರೆಸ್ ಸರ್ಕಾರದ ನಿಜ ಬಣ್ಣ ಇದೀಗ ಪ್ರಕಟಗೊಂಡ ಜಿ.ಪಂ ತಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯಿಂದ ಬಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಜನಾದೇಶವನ್ನು ಸಂಪೂರ್ಣ ತಿರುಚಿದ್ದು ರಾಜಕೀಯ ಲಾಭಕೋಸ್ಕರ ಮೀಸಲಾತಿಯನ್ನು ಬೇಕೆಂದೆಡೆ ಬಳಸಿಕೊಂಡಿದೆ ಸಾಮಾಜಿಕ ನ್ಯಾಯ ಅಹಿಂದದ ಹರಿಕಾರೆಂದು ಘೋಷಿಸುತ್ತಿರುವ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಆಡಳಿತಕ್ಕೆ ಬಂದ ಜಿ.ಪಂ ತಾ.ಪಂಗಳಲ್ಲಿ ಎಷ್ಟು ಕಡೆ ಪ.ಜಾತಿ ಪ.ಪಂಗಡಕ್ಕೆ ಮೀಸಲಾತಿ ನೀಡಿದೆ ಎಂದು ಸ್ಪಷ್ಟ ಪಡಿಸಬೇಕು ವಿರೋದ ಪಕ್ಷಗಳು ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಮೀಸಲಾತಿಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ ವಿನಹ ಸಾಮಾಜಿಕ ನ್ಯಾಯಕ್ಕಾಗಿ ಅಲ್ಲ ಪ.ಜಾತಿ ಪ.ಪಂಗಡದವರು ಅಧ್ಯಕ್ಷರಾಗಿರುವ ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ನಾಯಕರುಗಳು ಅನಗತ್ಯ ಹಸ್ತಕ್ಷೇಪ ಮಾಡಿ ಕಿರಿಕುಳ ನೀಡುತ್ತೀರುವ ಮಾಹಿತಿ ಬರುತ್ತಿದ್ದು, ಈ ಪ್ರವೃತ್ತಿಯನ್ನು ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದೆಂದು ಕೊರಗಪ್ಪ ನಾಕ್ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.