ಹಾರದಲ್ಲಿ ಮದ್ಯಪಾನ ನಿಷೇಧ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಪ್ರಶಂಸೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  ಧರ್ಮಸ್ಥಳ: ಬಿಹಾರವು ಎ. 5ರಿಂದ ಸಂಪೂರ್ಣ ಪಾನ ನಿಷೇಧಿತ ರಾಜ್ಯವಾಗಿದೆ. ಐ.ಎಮ್.ಎಫ್.ಎಲ್. ಸೇರಿದಂತೆ ಎಲ್ಲಾ ಬಗೆಯ ಮದ್ಯಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ನಿತೇಶ್ ಕುಮಾರ್ ಪ್ರಕಟಿಸಿರುತ್ತಾರೆ. ಬಿಹಾರದ ಮಹಿಳೆಯರು ಈ ಪಿಡುಗಿನಿಂದ ನಿಟ್ಟಿಸಿರು ಬಿಡುವಂತಾಗಿದೆ. ಈ ದಿಟ್ಟ ನಿಲುವು ಕೈಗೊಂಡ ಬಿಹಾರ ಸರಕಾರಕ್ಕೆ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಪ್ರಶಂಸೆ ವ್ಯಕ್ತಪಡಿಸಿದೆ.
ಇದಕ್ಕಾಗಿ ಬಿಹಾರ ಸರಕಾರವು ವಿಶೇಷ ಕಾನೂನನ್ನು ಜಾರಿಗೊಳಿಸಿದ್ದು, ಈ ಆದೇಶದ ವಿರುದ್ದ ವರ್ತಿಸಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿದೆ. ದೇಶದ ಅಭಿವೃದ್ಧಿಗೆ ಪಾನ ನಿಷೇಧವೇ ಮೊದಲ ಪರಿಹಾರ. ಸಾವಿರಾರು ಕುಟುಂಬಗಳು ಅಭಿವೃದಿಯನ್ನು ಕಾಣದೆ ಪತನಗೊಳ್ಳುವುದು ಸಾಮಾನ್ಯವಾಗಿದೆ. ಇದನ್ನರಿತು ಕರ್ನಾಟಕ ರಾಜ್ಯದಲ್ಲಿಯೂ ಪಾನ ನಿಷೇಧ ಜಾರಿಗೊಳಿಸಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಸತೀಶ್ ಹೊನ್ನವಳ್ಳಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಕರ್ನಾಟಕ ರಾಜ್ಯದಲ್ಲಿ ೬.೫ ಕೋಟಿ ಜನಸಂಖ್ಯೆಯಿದ್ದು, ಇದರಲ್ಲಿ ೧.೭೫ ಕೋಟಿ ಜನರು ಮದ್ಯ ವ್ಯಸನಿಗಳಾಗಿರುತ್ತಾರೆ. ಇದಕ್ಕೆ ಪ್ರಮುಖ ಕಾರಣವೇ ಸರಕಾರಿ ಪ್ರಾಯೋಜಿತ ಮದ್ಯಮಾರಾಟ. ಲೈಸನ್ಸ್ ಇದ್ದೂ ಮದ್ಯ ಮಾರಾಟ ಮಾಡುವ ವ್ಯವಸ್ಥೆಗಿಂತ ಲೈಸನ್ಸ್ ಇಲ್ಲದೆ ಮಾರುವವರ ಸಂಖ್ಯೆ ರಾಜ್ಯದಲ್ಲಿ ವ್ಯಾಪಕವಾಗಿ ಕಂಡು ಬರುತ್ತಿದೆ. ಅಬಕಾರಿ ಟಾರ್ಗೆಟ್ ವ್ಯವಸ್ಥೆಯೇ ಈ ದುರಾವಸ್ಥೆಗೆ ಕಾರಣ. ಇದಕ್ಕೆ ಸೂಕ್ತ ಪರಿಹಾರವೇ ಸಂಪೂರ್ಣ ಪಾನ ನಿಷೇಧವಾಗಿದೆ. ಬಿಹಾರ ಸರಕಾರ ಪಾನ ನಿಷೇಧ ಮಾಡಿದರೂ ವ್ಯಸನಿಗಳಿಗೆ ಅದರಿಂದ ಹೊರಬರಲು ಸೂಕ್ತ ಮಾರ್ಗದರ್ಶನ ನೀಡಲಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ರಾಜ್ಯಾದ್ಯಂತ ಶಿಬಿರಗಳನ್ನು ನಡೆಸಿ ವ್ಯಸನಮುಕ್ತರಾಗಲು ಅವಕಾಶವಿದೆ. ಇಂತಹ ನಿರ್ಧಾರವನ್ನು ಕೈಗೊಂಡಲ್ಲಿ ಸರಕಾರದ ಜೊತೆಗೆ ಕೈಜೋಡಿಸಿ ವ್ಯಸನಮುಕ್ತ ಕರ್ನಾಟಕವನ್ನು ಮಾಡುವಲ್ಲಿ ವೇದಿಕೆ ಸದಾ ಸಿದ್ದವಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿಗಳಾದ ವಿವೇಕ್ ವಿ.ಪಾಸ್ ಅಭಿಪ್ರಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.