ಮಾಜಿ ಸೈನಿಕರ ಸಂಘ: ಅಧಕ್ಷರಾಗಿ ಕಾಂಚೋಡು ಗೋಪಾಲಕೃಷ್ಣ ಭಟ್ ಆಯ್ಕೆ

gopalakrishna kanchooduಬೆಳ್ತಂಗಡಿ : ಮಾಜಿ ಸೈನಿಕರ ಸಂಘದ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಏ. ೧೦ ರಂದು ಉಜಿರೆಯಲ್ಲಿ ನಡೆದ ಸಂಘದ ವಾರ್ಷಿಕ ಸಮಾವೇಶದಲ್ಲಿ ನಡೆದಿದ್ದು ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ಕಾಂಚೋಡು, ಪ್ರ. ಕಾರ್ಯದರ್ಶಿಯಾಗಿ ಶಿವಪ್ರಸಾದ್, ಕೋಶಾಧಿಕಾರಿಯಾಗಿ ಕುಮಾರ್ ಪಡುವೆಟ್ನಾಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಗೌರವಾಧ್ಯಕ್ಷರಾಗಿ ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್, ಉಪಾಧ್ಯಕ್ಷರಾಗಿ ವಾಲ್ಟರ್ ಸಿಕ್ವೇರಾ, ಜೊತೆ ಕಾರ್ಯದರ್ಶಿಯಾಗಿ ದಯಾನಂದ, ಸಹಾಯಕ ಕೋಶಾಧಿಕಾರಿಯಾಗಿ ಸುರೇಂದ್ರ ಪಿ, ನಿರ್ದೇಶಕರುಗಳಾಗಿ ಸುನಿಲ್ ಶೆಣೈ, ಎಂ.ಆರ್. ಜೈನ್ ಗುರುವಾಯನಕೆರೆ, ಜಗನ್ನಾಥ ಶೆಟ್ಟಿ, ಶ್ರೀಕಾಂತ್ ಗೋರೆ, ಸಲಹೆಗಾರರಾಗಿ ಕಾಂತಪ್ಪ ಗೌಡ, ಎಂ.ವಿ. ಪಿಂಟೋ, ಥೋಮಸ್ ಜೆ., ಆಂತರಿಕ ಲೆಕ್ಕಪರಿಶೋಧಕರಾಗಿ ರಾಮ ಭಟ್, ಮಹೇಶ್ ಕುಂದರ್ ಮತ್ತು ಶ್ರೀ ಕೃಷ್ಣ ಶೆಣೈ ಇವರುಗಳು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.