ಕರಾವಳಿ ಕರ್ನಾಟಕದ ಪ್ರಖ್ಯಾತ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಟೈಮ್ & ಟೈಡ್ ಆಯೋಜಿಸುತ್ತಿದೆ. ಸನ್‌ಫ್ಯೂರ್ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಪ್ರಸ್ತುತಪಡಿಸುತ್ತಿದೆ

 ಪುತ್ತೂರು : ಪುತ್ತೂರಿನ ಪ್ರಖ್ಯಾತ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಲುವಾಗಿ ಸನ್‌ಫ್ಯೂರ್ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಪ್ರಸ್ತುತಪಡಿಸುತ್ತಿದೆ ‘ಪುತ್ತೂರ ಹಬ್ಬ ಎಂಬ ಬೃಹತ್ ಮನರಂಜನಾ ಕಾರ್ಯಕ್ರಮವನ್ನು ಎ.೧೬ರಂದು ಟೈಮ್ & ಟೈಡ್ ಸಂಸ್ಥೆಯು ಆಯೋಜಿಸಲಿದೆ. ಸುದ್ದಿ ಬಿಡುಗಡೆ ಪತ್ರಿಕೆ ಮೀಡಿಯಾ ಪ್ರಾಯೋಜಕರಾಗಿರುತ್ತದೆ.
ಪುತ್ತೂರು ನಗರದ ಇತಿಹಾಸದಲ್ಲಿಯೇ ಇಂತಹ ಬೃಹತ್ ಮಟ್ಟದ ಪ್ರಥಮ ಕಾರ್ಯಕ್ರಮ ಇದಾಗಿದ್ದು ಆ ದಿನ ಸಂಜೆ ೭ರಿಂದ ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ಸರಕಾರಿ ಜೂನಿಯರ್ ಕಾಲೇಜು ಸಮೀಪದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
ತಾರಾಕರ್ಷಣೆಯ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಹಾಗೂ ತುಳು ಚಿತ್ರರಂಗದ ಜನಪ್ರಿಯ ನಟ. ನಟಿಯರು, ಟಿವಿ ಧಾರಾವಾಹಿಯ ಖ್ಯಾತನಾಮರೂ ಸೇರಿದಂತೆ ಹಲವು ಪ್ರತಿಭಾವಂತ ಯುವ ಗಾಯಕ ಗಾಯಕಿಯರು ಭಾಗವಹಿಸಲಿದ್ದು ಲೈವ್ ಕಾನ್ಸರ್ಟ್, ಮ್ಯಾಜಿಕ್, ನೃತ್ಯ, ಹಾಡುಗಳು, ಕಾಮಿಡಿ, ಆಕರ್ಷಕ ಸುಡುಮದ್ದು ಪ್ರದರ್ಶನ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಭಾಗವಹಿಸುವ ಪ್ರಮುಖರು: ಲೈಫು ಇಷ್ಟೇನೆ ಖ್ಯಾತಿಯ ನಟಿ ಸಿಂಧು ಲೋಕನಾಥ್, ಅಗ್ನಿ ಸಾಕ್ಷಿ ಧಾರಾವಾಹಿಯ ಸನ್ನಿಧಿ- ನಟಿ ವೈಷ್ಣವಿ, ಅಶ್ವಿನಿ ನಕ್ಷತ್ರ ಧಾರಾವಾಹಿಯ ಸಿಲ್ವರ್ ಸ್ಟಾರ್ ಜೆಕೆ, ನಮ್ಮ ಕುಡ್ಲ ಹೊಸ ತುಳು ಚಿತ್ರದ ತಾರೆಯರು ಹಾಗೂ ಧಬಕ್ ಧಬಾ ಐಸಾ ಹೊಸ ತುಳು ಚಿತ್ರ ತಂಡದ ತಾರಾಮಣಿಗಳು ಹಾಗೂ ಇನ್ನಿತರ ಚಲನಚಿತ್ರ ಮತ್ತು ಧಾರಾವಾಹಿಯ ನಟ ನಟಿಯರು ಭಾಗವಹಿಸಲಿದ್ದಾರೆ.
ವಿಶೇಷ ಆಕರ್ಷನೆಯಾಗಿ ಝೀ ಟಿವಿ ಹಿಂದಿ-ಸ ರಿ ಗ ಮ ಪ ಲಿಟ್ಟಲ್ ಚಾಂಪ್ಸ್ ವಿಜೇತರಾದ ಗಗನ್ ಗಾಂವ್‌ಕರ್, ಝೀ ಕನ್ನಡ ಸ ರಿ ಗ ಮ ಪ ಲಿಟ್ಟಲ್ ಚಾಂಪ್ಸ್ (ಸೀಝನ್ ೧೦) ವಿಜೇತೆ ಸುಪ್ರಿಯಾ ಜೋಷಿ, ಝೀ ಕನ್ನಡ ಸ ರಿ ಗ ಮ ಪ ಲಿಟ್ಟಲ್ ಚಾಂಪ್ಸ್‌ನ ಉದಯೋನ್ಮುಖ ಗಾಯಕಿ ನಿಹಾರಿಕಾ, ಝೀ ಕನ್ನಡ ಸ ರಿ ಗ ಮ ಪ ಲಿಟ್ಟಲ್ ಚಾಂಪ್ಸ್ (ಸೀಝನ್ ೮) ವಿಜೇತೆ ಒಹಿಲೇಶ್ವರಿ ಎಂ.ಕೆ, ಹಾಗೂ ೧,೫೦೦ಕ್ಕೂ ಮಿಕ್ಕಿ ಹಲವಾರು ಟಿ.ವಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಮಿಂಚಿದ ನಿಶಾನ್ ರೈ ಮುಂತಾದ ಪ್ರತಿಭಾವಂತ ಯುವ ಕೋಗಿಲೆಗಳು ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ.
ಅಲ್ಲದೆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಆಟಗಾರ ಚಲನಚಿತ್ರದ ‘ತಾರಾಮಯ್ಯ ಹಾಡಿನ ಖ್ಯಾತಿಯ ಬೆಂಗಳೂರಿನ ಸುಪ್ರಿಯಾ ಲೋಹಿತ್, ಬೆಂಗಳೂರಿನ ಪ್ರತಿಭಾನ್ವಿತ ಹಾಡುಗಾರ ಹಾಗೂ ಚಲನಚಿತ್ರ ನಟ ಯುವರಾಜ್, ತೀರ್ಥಹಳ್ಳಿಯ ಸಂಗೀತ ಸುಧೆ ದಿವ್ಯಾ ರಾಮಚಂದ್ರ, ಕೇರಳದ ಪ್ರಸಿದ್ಧ ಗಾಯಕ ಪೊಲ್ಲಾಚ್ಚಿ ಮುತ್ತು, ಕೇರಳದ ಮೈಕೆಲ್ ಜಾಕ್ಸನ್ ಎಂದೇ ಜನಜನಿತರಾದ ಸಿಬಿಲ್ ಜಾನ್ಸನ್‌ರಿಂದ ಮನಸೆಳೆಯುವ ನೃತ್ಯ ಪ್ರದರ್ಶನದೊಂದಿಗೆ ಹಾಡುಗಾರಿಕೆ, ಪ್ರತಿಭಾವಂತ ಗಾಯಕರಾದ ಪ್ರಕಾಶ್ ಮಹದೇವನ್ ಹಾಗೂ ರೂಪಾ ಪ್ರಕಾಶ್, ಮಂಗಳೂರಿನ ಹಿರಿಯ ಹಾಗೂ ಮೆಲೋಡಿಯಸ್ ಸ್ಟಾರ್ ಗಾಯಕ ಮೊಹಮ್ಮದ್ ಇಕ್ಬಾಲ್, ತಮ್ಮ ಮಧುರ ಕಂಠದಿಂದ ಪ್ರೇಕ್ಷಕರ ಮನ ತಣಿಸಲಿದ್ದಾರೆ.
ವಿವಿಧ ವಿನೋದಾವಳಿ : ಬಲೆ ತೆಲಿಪಾಲೆಯಿಂದ ಜನಪ್ರಿಯರಾದ ಉಮೇಶ್ ಮಿಜಾರ್ ಹಾಗೂ ಬಳಗ ಮತ್ತು ಬೆಂಗಳೂರಿನ ಚಲನಚಿತ್ರ ನಟ ಮಿಮಿಕ್ರಿ ಗೋಪಿ ಇವರಿಂದ ಅತ್ಯದ್ಭುತ ಕಾಮಿಡಿ ಶೋಗಳು, ತ್ರಿಶ್ಶೂರಿನ ಸೌಂಡ್ ಮ್ಯಾಜಿಕ್ ಕಲಾವಿದ ಪ್ರತಿಜ್ಞನ್ ಹಾಗೂ ತ್ರಿಶ್ಶೂರಿನವರೇ ಆದ ಶ್ರೀನಾದ್‌ಇವರಿಂದ ಅಭೂತಪೂರ್ವ ಜಗ್ಲರ‍್ಸ್ ಹಾಗೂ ಅಪಾಯಕಾರಿ ಅಗ್ನಿ ಸಾಹಸ ಪ್ರದರ್ಶನ ಹಾಗೂ ಮಂಗಳೂರಿನ ಪ್ರಖ್ಯಾತ ನೃತ್ಯ ತಂಡ ವೆಲೋಸಿಟಿ ಸುಮಾರು ೬೦ಕ್ಕೂ ಹೆಚ್ಚು ನೃತ್ಯಗಾರರಿಂದ ಅದ್ಭುತ ನೃತ್ಯ ಪ್ರದರ್ಶನ, ದೇಶ ವಿದೇಶಗಳಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ನೀಡಿದ ಸಂಗೀತ ತಂಡವಾದ ಸ್ಟ್ರಿಂಗ್ ಇದರ ಮುಖ್ಯ ರುವಾರಿ ರಾಜ್‌ಗೋಪಾಲ್ ಮತ್ತು ಸಂಗಡಿಗರಿಂದ ಸಂಗೀತದ ರಸದೌತಣ ಈ ಕಾರ್ಯಕ್ರಮದ ವಿಶೇಷತೆಯಾಗಿದೆ.
ಈ ಕಾರ್ಯಕ್ರಮವನ್ನು ಪ್ರಸಿದ್ಧ ತುಳು ಚಲನಚಿತ್ರ ನಟ ಹಾಗೂ ಹೆಸರಾಂತ ವಿ.ಜೆ ರೂಪೇಶ್.ಟಿ ಶೆಟ್ಟಿ, ಪ್ರಖ್ಯಾತ ೯೩.೫ ರೆಡ್ ಎಫ್.ಎಂ ಇದರ ರೇಡಿಯೋ ಜಾಕಿ ಆರ್.ಜೆ ಅನುರಾಗ್ ಮತ್ತು ಹೆಸರಾಂತ ವಿ.ಜೆ ಅನುಷಾ ಕುಂಬ್ಲೆ ಪುತ್ತೂರ ಹಬ್ಬ ಶೋನ ನಿರೂಪಕರಾಗಿದ್ದಾರೆ.
ಸುಮಾರು ೫೦,೦೦೦ ಕಲಾರಸಿಕರು ಈ ಶೋದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಚಿತ್ತಾಕರ್ಷಕ ಸುಡುಮದ್ದು ಪ್ರದರ್ಶನ, ಬೆಂಗಳೂರಿನ ಪ್ರಸಿದ್ಧ ಕ್ರೀಯೆಟಿವ್ ಸ್ಟೇಜ್ ಲೈಟಿಂಗ್ಸ್ (ಶಾಂತಲಾ) ಇವರಿಂದ ಅತ್ಯುತ್ತಮ ಧ್ವನಿ ಹಾಗೂ ಸೈಖೆಡೆಲಿಕ್ ಲೈಟಿಂಗ್ ವ್ಯವಸ್ಥೆ, ಬೆಂಗಳೂರಿನ ಎಲೆಕ್ಟ್ರೋ ಬ್ಲಾಸ್ಟ್ ರವರ ಪೈರೋಟೆಕ್ನಿಕ್ ಸ್ಪೆಶಲ್ ಎಫೆಕ್ಟ್ಸ್ ಹಾಗೂ ರೋಜ್ಹ್ ಡಿಸೈನ್ಸ್ ಇವರಿಂದ ಅತ್ಯಾಧುನಿಕ ವೇದಿಕೆ ಮತ್ತು ಮಿಂಚುವ ಸ್ಟೇಜ್ ಬ್ಯಾಕ್‌ಡ್ರಾಪ್ ಇತ್ಯಾದಿ ವಿಶೇಷಗಳು ಈ ಕಾರ್ಯಕ್ರಮವನ್ನು ಮತ್ತಷ್ಟೂ ಚಂದಗಾಣಿಸಲಿದೆ.
ಕಲಾರಸಿಕರಿಗೆ ವಿವಿಧ ರೀತಿಯ ಆಹಾರ ಉತ್ಪನ್ನಗಳು ಹಾಗೂ ಪ್ರಾಯೋಜಕರ ವಿವಿಧ ರೀತಿಯ ಸ್ಟಾಲ್‌ಗಳು ಈ ವೇದಿಕೆಯ ಸುತ್ತಮುತ್ತ ಆಯೋಜಿಸಲಾಗಿದೆ.
ಪುತ್ತೂರ ಹಬ್ಬದ ಸಂಪೂರ್ಣ ವೀಡಿಯೋ ರೆಕಾರ್ಡಿಂಗ್, ಮಂಗಳೂರು, ಉಡುಪಿ, ಕೇರಳ, ಉತ್ತರ ಕರ್ನಾಟಕ ಹಾಗೂ ಮುಂಬೈಯಲ್ಲಿ ಅಲ್ಲದೆ ದೇಶ ವಿದೇಶಗಳಲ್ಲಿ ಟಿ.ವಿ ಹಾಗೂ ವೆಬ್‌ಸೈಟ್ ಇಂಡಸ್ಟ್ರಿಯಲ್ಲಿ ಪ್ರಸಿದ್ದಿ ಪಡೆದ ಡೈಜಿವರ್ಲ್ಡ್ ೨೪x೭ ಟಿವಿಯಲ್ಲಿ ಮುಂದಿನ ದಿನಗಳಲ್ಲಿ ಸರಣಿ ಮೂಲಕ ಪ್ರಸಾರ ಮಾಡಲಾಗುವುದು.
ಪ್ರೇಕ್ಷಕರು ವಿವಿಐಪಿ, ವಿ.ಐ.ಪಿ, ಸ್ಟ್ಯಾಂಡ್-೧, ಸ್ಟ್ಯಾಂಡ್-೨, ಸ್ಟ್ಯಾಂಡ್-೩, ಗ್ಯಾಲರಿಗಳಲ್ಲಿ ತಮ್ಮ ಸೀಟುಗಳನ್ನು ಮುಂಗಡವಾಗಿ ಕಾದಿರಿಸುವ ಅವಕಾಶ ಲಭ್ಯವಿದೆ. ಈ ಗ್ಯಾಲರಿಗಳು ಹಾಗೂ ಕ್ರೀಡಾಂಗಣದ ಆವರಣದಲ್ಲಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಮಾಡಲಾಗುವುದು
ಪುತ್ತೂರ ಹಬ್ಬ ಈ ಮೆಗಾ ಕಾರ್ಯಕ್ರಮವನ್ನು ಜಗತ್ತಿನೆಲ್ಲೆಡೆ ಇರುವ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಓದುಗರ ಅತ್ಯಧಿಕ ಪ್ರಸಾರದ ಕನ್ನಡ ಪತ್ರಿಕೆ ಸುದ್ದಿಬಿಡುಗಡೆ ಮೀಡಿಯಾ ಪ್ರಾಯೋಜಕರಾಗಿರುತ್ತದೆ.
ಕರಾವಳಿ ಕರ್ನಾಟಕದ ಕಲಾರಸಿಕರು, ಗ್ರಾಹಕರು ಬೆಂಬಲ ಸೂಚಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಟೈಮ್ & ಟೈಡ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಸುರೇಶ್ ರಾವ್ ಕೊಕ್ಕಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಂಪರ್ಕಿಸಿ: +೯೧ ೯೮೪೪೦ ೪೫೫೪೩ / +೯೧ ೯೬೧೧೫ ೮೬೨೯೩)

ಈ ಕಾರ್ಯಕ್ರಮದ ಟಿಕೇಟು ಹಾಗೂ ಮಾಹಿತಿಗಾಗಿ ಸಂಪರ್ಕಿಸಿರಿ
ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿ, ಪುತ್ತೂರು ೯೯೮೬೪ ೧೬೮೦೨, ೦೮೨೫೧-೨೩೧೯೪೯
ಸುದ್ದಿ ಸೆಂಟರ್, ಹೂವಿನ ಮಾರುಕಟ್ಟೆ ಬಳಿ, ನಗರಸಭೆ ಕಟ್ಟಡ, ಪುತ್ತೂರು ೮೦೯೫೮ ೮೨೦೧೧
ಸುದ್ದಿ ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರ, ದಿನೇಶ್ ಭವನ, ಪುತ್ತೂರು ೯೯೮೬೪ ೧೬೫೩೭
ಸುದ್ದಿ ಸೆಂಟರ್, ಜ್ಯೋತಿಕಾ ಡಿಜಿಟಲ್ ಸ್ಟುಡಿಯೋ, ವಿಟ್ಲ ೦೮೨೫೫-೨೩೮೮೩೬, ೯೯೦೦೬ ೬೧೭೮೨
ಸುದ್ದಿ ಸೆಂಟರ್, ಬಸ್‌ಸ್ಟ್ಯಾಂಡ್ ಬಳಿ, ಉಪ್ಪಿನಂಗಡಿ ೭೩೫೩೩ ೮೦೬೧೯
ಸುದ್ದಿ ಸೆಂಟರ್, ಬಸ್‌ಸ್ಟ್ಯಾಂಡ್ ಹತ್ತಿರ, ಕಡಬ ೦೮೨೫೧-೨೬೦೯೪೯, ೯೪೮೧೩ ೪೨೨೯೬
ಸುದ್ದಿ ಸೆಂಟರ್, ಬಸ್‌ಸ್ಟ್ಯಾಂಡ್ ಬಳಿ, ನೆಲ್ಯಾಡಿ ೦೮೨೫೧-೨೫೪೯೪೯
ಸುದ್ದಿ ಸೆಂಟರ್, ಶ್ರೀಹರಿ ಕಾಂಪ್ಲೆಕ್ಸ್, ಸುಳ್ಯ ೯೬೨೦೫ ೧೬೭೬೮, ೦೮೨೫೭-೨೩೦೨೩೦
ಸುದ್ದಿ ಸೆಂಟರ್, ಬಸ್‌ಸ್ಟ್ಯಾಂಡ್ ಬಳಿ, ಬೆಳ್ತಂಗಡಿ ೯೭೩೯೮ ೬೦೧೯೨, ೦೮೨೫೬-೨೩೨೨೧೧

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.