ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕುರಿಯ ಎಲ್ನಾಡುಗುತ್ತು ಮನೆತನದಿಂದ ೧ ಲಕ್ಷ ರೂ. ದೇಣಿಗೆ

kuriy_1_lksha_denige copy

ಪುತ್ತೂರು: ಪುತ್ತೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಏ. ೧೦ ರಂದು ನಡೆದ ಧ್ವಜಾರೋಹಣ ಶುಭದಿನದಂದು ಪೂರ್ವಶಿಷ್ಠ ಪದ್ಧತಿಯಂತೆ ಕುರಿಯ ಎಳ್ನಾಡುಗುತ್ತು ಮನೆತನದ ಶ್ರೇಯಸ್ಸು ಮತ್ತು ಗೌರವಾರ್ಥವಾಗಿ ಕ್ಷೇತ್ರದಲ್ಲಿ ಮಹಾಪೂಜೆ ಸಮಾರಾದನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಸೇವೆ ಸಮರ್ಪಿತವಾಯಿತು. ಇದೇ ಸಂದರ್ಭ ಇಡೀ ಮನೆತನದ ಪರವಾಗಿ ದೇವಳಕ್ಕೆ ೧ಲಕ್ಷ ರೂ. ಗಳ ದೇಣಿಗೆ ಚೆಕ್ಕನ್ನು ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಕುರಿಯ ಎಲ್ನಾಡುಗುತ್ತಿನ ಹಿರಿಯರಾದ ಕೆ. ಎಂ ಬಾಲಕೃಷ್ಣ ರೈ, ಆರಾಧನಾ ಸಮಿತಿ ಅಧ್ಯಕ್ಷ ಸುರೇಂದ್ರನಾಥ ಆಳ್ವ, ಕೆ.ಎಂ ವಿಶ್ವನಾಥ ರೈ ಮಾಡಾವು, ಸೀತಾರಾಮ ರೈ ಕುರಿಯ, ರಾಧಾಕೃಷ್ಣ ರೈ ಕುರಿಯ, ಕೆ. ಎಂ ಮೋಹನ್ ರೈ ಮಾಡಾವು, ಎಂ.ಬಿ. ಚೆನ್ನಪ್ಪ ರೈ, ನಂಜೆ ಸಂಕಪ್ಪ ರೈ, ಎಸ್. ಬಿ ಜಯರಾಮ ರೈ, ಚಂದ್ರಶೇಖರ್ ನಂಜೆ, ಮೋಹನ ರೈ ಮಾಡಾವು, ವಿನೋದ್ ರೈ ಕುರಿಯ, ಶ್ರೀಮತಿ ಶಶಿಕಲಾ ರೈ ಕುರಿಯ, ಪ್ರತಾಪಚಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.