ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ಜಾನಪದ ಸಾಂಸ್ಕೃತಿಕ ಉತ್ಸವ – ಬೆಳ್ತಂಗಡಿ ಸುದ್ದಿ ವ್ಯವಸ್ಥಾಪಕ ಮಂಜುನಾಥ ರೈ ಗೆ “ವಿಶ್ವಕನ್ನಡ ಕಣ್ಮಣಿ” ರಾಜ್ಯಮಟ್ಟದ ಪುರಸ್ಕಾರ

VISHVA_KANNADA_KANMANI__3_ copy

VISHVA_KANNADA_KANMANI__1_ copy

VISHVA_KANNADA_KANMANI__2_ copy

VISHVA_KANNADA_KANMANI copy

ಬೆಳ್ತಂಗಡಿ: ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ೧೧ ನೇ ರಾಜ್ಯಮಟ್ಟದ ಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಸಾಧಕರಿಗೆ ಪುರಸ್ಕಾರ ಸಮಾರಂಭ ಏ. ೧೦ ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ನಡೆದು ಬೆಳ್ತಂಗಡಿ ಸುದ್ದಿ ಬಿಡುಗಡೆ ವ್ಯವಸ್ಥಾಪಕ ಹಾಗೂ ಸ್ಥಾನೀಯ ಸಂಪಾಕದ ಮಂಜುನಾಥ ರೈ ಯವರಿಗೆ ರಾಜ್ಯಮಟ್ಟದ ಕನ್ನಡ ಕಣ್ಮಣಿ ಪುರಸ್ಕಾರ ನಡೆಯಿತು.
ಏ. ೧೦ ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮಾರಂಭದ ಅಗ್ರಗಣ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಮಂಜುನಾಥ ರೈ ಅವರಿಗೆ ಈ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್‌ನ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ ವಹಿಸಿದ್ದರು. ಅಲ್ಲದೆ ಈ ಸಮಾರಂಭದಲ್ಲಿ ದ. ಕ ಜಿಲ್ಲೆಯ ಪರವಾಗಿ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಸಂಘಟಕ ಅಶೋಕ ಭಟ್ಟ ಉಜಿರೆ, ಜಿಲ್ಲಾ ಕಸಾಪ ಸಂಘಟಕ ಡಾ| ಎಂ.ಪಿ ಶ್ರೀನಾಥ್ ಸೇರಿದಂತೆ ರಾಜ್ಯದ ನಾನಾ ಕಡೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು ೪೩ ಮಂದಿ ಸಾಧಕನ್ನು ಪುರಸ್ಕರಿಸಲಾಯಿತು.
ಎಸ್‌ಡಿಎಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಎಸ್ ಮೋಹನ್ ನಾರಾಯಣ್,ಯುವ ನೇತಾರ ಎನ್ ವೇಣುಗೋಪಾಲ್ ಬೆಂಗಳೂರು, ಅಂತಾರಾಷ್ಟ್ರೀಯ ಯೋಗ ತಜ್ಞ ಡಾ. ನಿರಂಜನಮೂರ್ತಿ, ಕವಿ ಡಾ. ಯಲ್ಲಪ್ಪ ಕೆ. ಕೆ ಪುರ, ವೀರಗಾಸೆ ಕಲಾವಿದ ಎಂ. ಅರ್ ಬಸಪ್ಪ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ| ಬಿ.ಪಿ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಪತ್ರಕರ್ತ ಅಚ್ಚು ಮುಂಡಾಜೆ ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.