HomePage_Banner_
HomePage_Banner_
HomePage_Banner_

ಸುವರ್ಣ ಆರ್ಕೆಡ್‌ನ ಸುದ್ದಿ ಸೆಂಟರ್‌ನಲ್ಲಿ ಡಿಜಿಟಲ್ ಸಮಾಲೋಚನೆ ಮತ್ತು ಮಾಹಿತಿ ಕಾರ್ಯಕ್ರಮ

Advt_NewsUnder_1

 ಬೆಳ್ತಂಗಡಿ : ಬೆಳ್ತಂಗಡಿಯ ಸಂತೆಕಟ್ಟೆ ಸುವರ್ಣ ಆರ್ಕೆಡ್‌ನ ಸುದ್ದಿ ಸೆಂಟರ್‌ನಲ್ಲಿ ಕಾರ್ಯಾಚರಿಸುತ್ತಿರುವ ಕೆ.ಎಂ.ಸಿ. ಮಾಹಿತಿ ಕೇಂದ್ರದಲ್ಲಿ ಏ. 8ರ0ದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತಜ್ಞ ವೈದ್ಯರೊಂದಿಗೆ ಡಿಜಿಟಲ್ ಸಮಾಲೋಚನೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯುತ್ತಿದೆ.
ಈ ಮಾಹಿತಿ ಕೇಂದ್ರದಲ್ಲಿ ಈಗಾಗಲೇ ಲ್ಯಾಬ್ ಇದ್ದು ರಕ್ತದ ಮಾದರಿಯನ್ನು ಸಂಗ್ರಹಿಸಿ ಆಧುನಿಕ ತಂತ್ರಜ್ಞಾನದ ಮೂಲಕ ಮಂಗಳೂರು ಕೆ.ಎಂ.ಸಿ.ಗೆ ಕಳುಹಿಸಿ ಅದರ ರಿಪೋರ್ಟ್ ನೀಡುವ ವ್ಯವಸ್ಥೆ ಜಾರಿಯಲ್ಲಿದೆ.
ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಗಳೊಂದಿಗೆ ಮುಖಾಮುಖಿ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಮತ್ತು ಪರಿಹಾರ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಏ. 8 ರಂದು ಬೆಳಿಗ್ಗೆ 10 ರಿಂದ 1 ಗಂಟೆವರೆಗೆ (ಇ.ಎನ್.ಟಿ) ಕಿವಿ, ಮೂಗು ಮತ್ತು ಗಂಟಲು ತಜ್ಞರು, ಅಪರಾಹ್ನ 2 ರಿಂದ 4 ರ ವರೆಗೆ ಕಣ್ಣಿನ ತಜ್ಞರ ಜೊತೆ ಸಮಾಲೋಚನೆ ನಡೆಯಲಿದೆ.
ಹೆಚ್ಚಿನ ವಿವರ ಬೇಕಾಗಿದ್ದಲ್ಲಿ ಸುದ್ದಿ ಸೆಂಟರ್ ಕೆ.ಎಂ.ಸಿ. ಮಾಹಿತಿ ಕೇಂದ್ರ. ಸುವರ್ಣ ಆರ್ಕೆಡ್ ಬೆಳ್ತಂಗಡಿ 918494893354, 9901907786ನಂಬರನ್ನು ಸಂಪರ್ಕಿಸಬಹುದಾಗಿದೆ. ನಾಳೆ ಚರ್ಮರೋಗ ತಜ್ಞರ ಜೊತೆ ಸಮಾಲೋಚನೆ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.