ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

 ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 2 ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರ ಹಾಗೂ 7 ಅಂಗನವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಶಿಶಿಲದ ದೊನೋಡಿ, ಪಡಂಗಡಿಯ ಓಡೀಲು ಎರಡು ಸಾಮಾನ್ಯರಿಗೆ ಮೀಸಲು, ಸಹಾಯಕಿಯರು ಕುವೆಟ್ಟುವಿನ ಗುರುವಾಯನಕೆರೆ, ಇಳಂತಿಲದ ಕಡವಿನಬಾಗಿಲು, ಪೆರಾಡಿಯ ಪೆರಾಡಿ, ಪಾರೆಂಕಿಯ ಅಕ್ಷರ ಕರಾವಳಿ, ಇಂದಬೆಟ್ಟುವಿನ ಕಲ್ಲಾಜೆ, ತಣ್ಣೀರುಪಂತದ ಕಲ್ಲಕಟಣಿ ಮತ್ತು ಕೊಡಂಗೆ ಎಲ್ಲಾ ಹುದ್ದೆಗಳು ಸಾಮಾನ್ಯರಿಗೆ ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಎ.18 ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಬೆಳ್ತಂಗಡಿ (232134) ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.