HomePage_Banner_
HomePage_Banner_
HomePage_Banner_

ಅಪಾಯಕ್ಕೆಡೆ ಮಾಡಿದ ವಿದ್ಯುತ್ ತಂತಿ

balanja problem copy

balanja prbblm 1 copy ಬೆಳ್ತಂಗಡಿ: ವಿದ್ಯುತ್ ಬಿಲ್ ಕಟ್ಟದಿದ್ದರೆ ಕೂಡಲೇ ಬಂದು ಫ್ಯೂಸ್ ತೆಗೆಯುವ ಮೆಸ್ಕಾಂ ಸಿಬ್ಬಂದಿ ಪ್ರಾಣಾಪಾಯಕ್ಕೆ ಕಾರಣವಾಗಲು ಸಿದ್ದವಾಗಿರುವ ವಿದ್ಯುತ್ ತಂತಿಗಳ ಬಗ್ಗೆ ದಿವ್ಯ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಬಳೆಂಜ ಗ್ರಾಮಸ್ಥರು ದೂರುತ್ತಿದ್ದಾರೆ.
ಬಳೆಂಜ ಗ್ರಾ.ಪಂ. ವ್ಯಾಪ್ತಿಯ ನಾಲ್ಕೂರು ಗ್ರಾಮದ ಸಾಲ್‌ಬೊಟ್ಟು-ತೋಟದಪಲ್ಕೆ ಎಂಬಲ್ಲಿರುವ ಫಲ್ಗುಣಿ ನದಿಯ ಮಧ್ಯೆ ನಾಲ್ಕು ವಿದ್ಯುತ್ ತಂತಿಗಳು ಹಾದು ಹೋಗಿವೆ. ದಡದಿಂದ ದಡಕ್ಕೆ ಹಾದು ಹೋಗಿರುವ ತಂತಿಗಳಲ್ಲಿ ಎರಡು ತಂತಿಗಳು ಕೈಗೆ ಸಿಗುವಷ್ಟು ಅಂತರದಲ್ಲಿ ನೇತಾಡುತ್ತಿವೆ. ಬೇಸಗೆಯಲ್ಲಿ ನದಿಯಲ್ಲಿ ನೀರಿಲ್ಲದ ಕಾರಣ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ತಂತಿಗಳ ಕೆಳಗಡೆ ಇರುವ ಕಾಲುದಾರಿಯನ್ನು ಬಳಸುತ್ತಾರೆ. ಜಾನುವಾರುಗಳು ಮೆಯುತ್ತಿರುತ್ತವೆ. ಸ್ಥಳಿಯರು ಹಲವು ಬಾರಿ ನೇತಾಡುವ ತಂತಿಗಳ ಬಗ್ಗೆ ಮೆಸ್ಕಾಂಗೆ ತಿಳಿಸಿದ್ದಾ ರಾದರೂ ಸಿಬ್ಬಂದಿಗಳು ಸ್ಪಂದಿಸಿಲ್ಲ.
ಕೈಗೆಟಕುವಷ್ಟು ಮಟ್ಟಿಗೆ ಜೋತಾಡುತ್ತಿರುವ ಅಪಾಯಕಾರಿ ತಂತಿಗಳನ್ನು ದಿನಾಲು ನೋಡುತ್ತಿರುವ ಸ್ಥಳೀಯ ನಿವಾಸಿಯೋರ್ವರು ತನ್ನೆದುರಿಗೆ ಯಾರ ಪ್ರಾಣವೂ ಹೋಗಬಾರದು ಎಂಬ ಮಾನವೀಯತೆಯಿಂದ ಅಡಿಕೆ ಸಲಾಕೆ, ರೀಪುಗಳನ್ನು ಉಪಯೋಗಿಸಿ ತಂತಿಗಳನ್ನು ಮೇಲಕ್ಕೆ ಇರುವಂತೆ ಮಾಡಿದ್ದಾರೆ. ಮೇಲಕ್ಕೆ ಎತ್ತಿ ಕಟ್ಟಿದ ವ್ಯವಸ್ಥೆ ತಾತ್ಕಾಲಿಕವಾಗಿದ್ದು ಜೋರಾಗಿ ಗಾಳಿ ಬೀಸಿದಲ್ಲಿ ಅದು ಬೀಳುವುದು ಖಂಡಿತ. ಇನ್ನಾದರೂ ಮೆಸ್ಕಾಂನವರು ಜನ-ಜಾನುವಾರುಗಳ ಪ್ರಾಣಗಳನ್ನು ಹೋಗುವಲ್ಲಿಯವರೆಗೆ ಕಾಯದೆ ಮಳೆಗಾಲಕ್ಕೆ ಮೊದಲು ತಂತಿಗಳನ್ನು ಸಮರ್ಪಕವಾಗಿ ಜೋಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.