ಆಂಬುಲೆನ್ಸ್ ಚಾಲಕ ಅಯೂಬ್ ಆಲಿಕುಂಞಿಯವರಿಗೆ ಇಂಡಿಯಾನ ಆಸ್ಪತ್ರೆ ವತಿಯಿಂದ ಸಮಾಜ ಸೇವಾ ಪುರಸ್ಕಾರ

AYUB ALIKNHI AVARD copy ಬೆಳ್ತಂಗಡಿ : ಸುಮಾರು 20 ವರ್ಷಗಳಿಂದ ಕರ್ನಾಟಕ ಮತ್ತು ಕೇರಳದ ಪ್ರಖ್ಯಾತ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್ ಚಾಲಕರಾಗಿ ದಕ್ಷತೆಯಿಂದ ಕರ್ತವ್ಯ ಸಲ್ಲಿಸುತ್ತಾ ಹಲವಾರು ಜೀವ ರಕ್ಷಣೆಗೆ ಪರೋಕ್ಷವಾಗಿ ಕಾರಣರಾಗಿರುವ, ಪ್ರಸ್ತುತ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನುರಿತ ಆಂಬುಲೆನ್ಸ್ ಚಾಲಕರಾಗಿರುವ ಮುಂಡಾಜೆಯ ಅಯೂಬ್ ಆಲಿಕುಂಞಿ ಅವರಿಗೆ ಮಂಗಳೂರಿನ ಇನ್ನೊಂದು ಹೆಸರಾಂತ ಸಂಸ್ಥೆ ಇಂಡಿಯಾನಾ ಆಸ್ಪತ್ರೆ ಸಮೂಹದ ವತಿಯಿಂದ “ಸಮಾಜ ಸೇವಾ ಪುರಸ್ಕಾರ” ದೊರೆತಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಂಸ್ಥೆಯ ಚೇರ್‌ಮೆನ್ ಡಾ| ಅಲಿ ಕುಂಬ್ಲೆ, ಮೆನೇಜಿಂಗ್ ಡೈರೆಕ್ಟರ್ ಡಾ| ಯೂಸುಫ್ ಕುಂಬ್ಲೆ ಅವರು ಗಣ್ಯರ ಸಮ್ಮುಖ ವಿಶೇಷ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಿದರು.
ಆಂಬುಲೆನ್ಸ್ ಚಾಲನೆಯ ಜೊತೆಗೆ ಅವರು ತುರ್ತು ಅಪಘಾತ ಚಿಕಿತ್ಸೆಯಲ್ಲೂ ಪರಿಣತಿ ಹೊಂದಿದ್ದು, ಸ್ವತಹ ರಕ್ತದಾನಿಯೂ ಅಲ್ಲದೆ ರಕ್ತದಾನಾಸಕ್ತರ ಬಳಗವನ್ನು ಕಟ್ಟಿಕೊಂಡು ಅನೇಕ ರೋಗಿಗಳಿಗೆ ತುರ್ತು ರಕ್ತದ ಅವಶ್ಯಕತೆಯನ್ನು ಪೂರೈಸಿ ತನ್ನದೇ ಶೈಲಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.