HomePage_Banner_
HomePage_Banner_
HomePage_Banner_

ಬೊಳ್ಮಿನಾರ್ ಉರೂಸ್ ಸಮಾರೋಪ ನಮ್ಮೊಳಗಿನ ಧಾರ್ಮಿಕ ಶ್ರದ್ಧೆ ಜಾಗೃತಗೊಳ್ಳಲಿ : ಶಿಹಾಬುದ್ದೀನ್ ತಂಙಳ್ ಕಿಲ್ಲೂರು

bolminar urus copy ಪುದುವೆಟ್ಟು: ಅಲ್ಲಾಹನ ಇಷ್ಟದಾಸರಾದ ಔಲಿಯಾಗಳ ಜೀವನ ಕ್ರಮ ಮತ್ತು ಆರಾಧನಾ ಕ್ರಮಗಳು ಸಾಧನಾ ಬದ್ಧವಾಗಿದ್ದುದರಿಂದ ಇಂದು ಅವರು ಈ ಸ್ಥಾನಕ್ಕೆ ಏರಿದ್ದಾರೆ. ಅವರ ಸ್ಮರಣೆಯ ಉರೂಸ್ ಕಾರ್ಯಕ್ರಮಗಳನ್ನು ವಿಜ್ರಂಭಣೆಯಿಂದ ಆಚರಿಸುವ ನಾವು ಅದಕ್ಕೂ ಮೊದಲು ನಮ್ಮ ಜೀವನಕ್ರಮದಲ್ಲಿ ಧಾರ್ಮಿಕ ಶ್ರದ್ಧೇ ಅಳವಡಿಸಿಕೊಳ್ಳುವವರಾಗೋಣ ಎಂದು ಮುಹ್ಯುದ್ದೀನ್ ಜುಮ್ಮಾ ಮಸೀದಿ ಕಿಲ್ಲೂರು ಇಲ್ಲಿನ ಖತೀಬ್ ಸಯ್ಯಿದ್ ಶಿಹಾಬದ್ದೀನ್ ತಂಙಳ್ ಅಲ್‌ಹೈದ್ರೋಸಿ ಸಖಾಫಿ ಅಭಿಪ್ರಾಯಪಟ್ಟರು.
ಏ.೨ ರಂದು ಪುದುವೆಟ್ಟು ಗ್ರಾಮದ ಬೊಳ್ಮಿನಾರ್ ಶುಹದಾನಗರ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಇಲ್ಲಿನ ಉರೂಸ್ ಸಮಾರೋಪ ಸಮಾರಂಭಕ್ಕೆ ಧಾರ್ಮಿಕ ನೇತೃತ್ವ ನೀಡಿ ಅವರು ಆಶೀರ್ವಚನಗೈಯ್ಯುತ್ತಿದ್ದರು. ಉರೂಸ್ ಕಾರ್ಯಕ್ರಮಗಳ ಪ್ರಯುಕ್ತ ಮಾ.೩೧ ರಿಂದ ಏ.೨ರ ವರೆಗೆ ೩ ದಿನಗಳ ಮತಪ್ರವಚನ ನಡೆಯಿತು.
ಮಾ. ೩೧ ರಂದು ಪೂರ್ವಾಹ್ನ ನಡೆದ ಸಮಾರಂಭದಲ್ಲಿ ಉರೂಸ್ ಧ್ವಜಾರೋಹಣವನ್ನು ಬೊಳ್ಮಿನಾರ್ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಬೆಂಜಾಲ್ ನೆರವೇರಿಸಿದರು. ಅಂದು ರಾತ್ರಿ ಸಯ್ಯಿದ್ ಝೈನುಲ್ ಆಬಿದೀನ್ ಹಂಝ ತಂಙಳ್ ಕರ್ಪಾಡಿ ಅವರ ನೇತೃತ್ವದಲ್ಲಿ ಸ್ವಾಲಾತ್ ಕಾರ್ಯಕ್ರಮ ನಡೆಯಿತು. ಬೊಳ್ಮಿನಾರ್ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ (ಟಿಕ್ಕಾ ಸಾಹೇಬ್) ಸ್ವಾಗತಿಸಿದರು. ಅಂದಿನ ಮತಪ್ರಭಾಷಣವನ್ನ ಬೊಳ್ಮಿನಾರ್ ಮಸೀದಿ ಧರ್ಮಗುರುಗಳಾದ ಮುಹಿಯುದ್ದೀನ್ ಝುಹುರಿ ನಡೆಸಿಕೊಟ್ಟರು. ಏ. ೧ ರಂದು ಪೈವಳಿಕೆ ಪಿಯುಐಎ ಸಂಸ್ಥೆಯ ಪ್ರಾಂಶುಪಾಲ ರಫೀಖ್ ಫಾಝಿಲ್ ಬಾಖವಿಯವರಿಂದ ಪ್ರವಚನ ನಡೆಯಿತು. ಏ.೨ ರಂದು ಕಿಲ್ಲೂರು ತಂಙಳ್ ಅಧ್ಯಕ್ಷತೆಯಲ್ಲಿ ಉರೂಸ್ ಸಮಾರೋಪ ಮತ್ತು ದುಆ ಆಶೀರ್ವಚನ ನಡೆಯಿತು. ಅಂದಿನ ಧಾರ್ಮಿಕ ಪ್ರವಚನವನ್ನು ಮೂಡಬಿದ್ರೆ ಮುಹಿಯುಸ್ಸುನ್ನ ಸಂಸ್ಥೆಯ ಪ್ರಧಾನ ಧರ್ಮಗುರುಗಳಾದ ನೌಫಲ್ ಸಖಾಫಿ ಕಳಸ ಅವರು ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.