ಭಾರತ್ ಸೇವಾ ದಳದಿಂದ ಉಚಿತ ಯೋಗ ತರಬೇತಿ ಮುಗುಳಿ ನಾರಾಯಣ್ ರಾವ್ ಅವರಿಗೆ ಸನ್ಮಾನ

YOGA copyಬೆಳ್ತಂಗಡಿ : ಭಾರತ ಸೇವಾ ದಳ ಇದರ ವತಿಯಿಂದ ಬೆಳ್ತಂಗಡಿ ಸರಕಾರಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿಗಳಿಗೆ ಯಶಸ್ವಿ ಯಾಗಿ 1 ವಾರಗಳ ಉಚಿತ ಯೋಗಾ ಭ್ಯಾಸ ಶಿಬಿರ ನಡೆಸಿದ ಬೆನ್ನಿಗೇ ಇದೀಗ ಎರಡನೇ ಸುತ್ತಿನ ಉಳಿಕೆ ಸಿಬ್ಬಂದಿಗಳಿಗೆ ಮತ್ತು ಗಣ್ಯರಿಗೆ ಉಚಿತ ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಳಾಗಿತ್ತು.
ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿದ್ದರು. ಆಸ್ಪತ್ರೆಯ ವೈದ್ಯರಾದ ಡಾ| ಚಂದ್ರಕಾಂತ್ ಮುಖ್ಯ ಅತಿಥಿಯಾಗಿದ್ದರು. ಭಾರತ ಸೇವಾ ದಳದ ಕೇಂದ್ರ ಮತ್ತು ಸ್ಥಾಯಿ ಸಮಿತಿ ಸದಸ್ಯ, ಸೋಜಾ ಎಲೆಕ್ಟ್ರಾನಿಕ್ಸ್ ಪಾಲುದಾರ ಆಲ್ಫೋನ್ಸ್ ಫ್ರಾಂಕೋ ಕಾರ್ಯಕ್ರಮ ಸಂಯೋಜನೆಯ ಉದ್ಧೇಶ ತಿಳಿಸಿದರು. ಭಾರತ್ ಸೇವಾ ದಳದ ಉಡುಪಿ ಜಿಲ್ಲಾ ಸಂಘಟಕ ಹಾಗೂ ಯೋಗ ಶಿಕ್ಷಕ ಮಹೇಶ್ ಪತ್ತರ್ ಉಪಸ್ಥಿತರಿದ್ದರು. ಈ ಸಂದರ್ಭ ಪಟ್ಟಣ ಪಂಚಾಯತ್‌ಗೆ ನೂತನ ಅಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾ ಗಿರುವ ಮುಗುಳಿ ನಾರಾಯಣ ರಾವ್ ಅವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.