HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬಳಂಜ : ಎ.8ರಿಂದ 15ರ ವರೆಗೆ ಶ್ರೀ ಪಂಚಲಿಂಗೇಶ್ವರ – ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

balanja temple copy ಬಳೆಂಜ : ಇತಿಹಾಸ ಪ್ರಸಿದ್ಧ ಬಳಂಜ ಶ್ರೀ ಪಂಚಲಿಂಗೇಶ್ವರ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವವು ವೇದಮೂರ್ತಿ ನಡ್ವಂತಾಡಿ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ. ೮ ರಿಂದ ೧೫ರ ವರೆಗೆ ವಿಜೃಂಭಣೆಯಿಂದ ಜರಗಲಿರುವುದು.
ತಾ.೮ ರಿಂದ, ತೋರಣ ಮುಹೂರ್ತ, ನವಕ ಕಲಶಾರಾಧನೆ, ಪ್ರಧಾನಹೋಮ, ಹೊರೆಕಾಣಿಕೆ ಸಮರ್ಪಣೆ, ಉತ್ಸವ ಬಲಿ, ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ಕಲಶಾಭಿಷೇಕ, ವಸಂತಕಟ್ಟೆ ಪೂಜೆ, ಶಯನೋತ್ಸವ, ಕವಾಟ ಬಂಧನ ಮಾಹಾಪೂಜೆ, ಹಾಗೂ ಪತ್ರಿನಿತ್ಯ ಅನ್ನಸಂತರ್ಪಣೆ ನಡೆಯಲಿದ್ದು, ತಾ. ೧೧ ರಂದು ಶ್ರೀ ಕ್ಷೇತ್ರ ದ.ಗ್ರಾ.ಅ.ಯೋಜನೆ ಪ್ರಗತಿಬಂಧು ಒಕ್ಕೂಟ ಎ ಮತ್ತು ಬಿ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ,
ತಾ. ೧೪ ರಂದು ಕವಾಟೋದ್ಘಾನೆ, ದಿವ್ಯ ದರ್ಶನ, ದಶವಿಧಸ್ನಾನ ಪಂಚಮೃತಾಭಿಷೇಕ, ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವರ ಶ್ರೀಮನ್ಮ ಮಹಾರಥೋತ್ಸವ, ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ವಹಿಸಲಿದ್ದಾರೆ, ಧಾರ್ಮಿಕ ಉಪನ್ಯಾಸವನ್ನು ಡಾ| ಪ್ರದೀಪ್ ನಾವುರು ನೀಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ಹರೀಶ್ ಪೂಂಜ ಭಾಗವಹಿಸಲಿದ್ದಾರೆ, ಸುಂದರ ದೇವಾಡಿಗ ಬ್ಯಾಂಡ್ ಮಾಸ್ಟರ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಯಲಿದೆ. ಬಳಿಕ ಪಂಚಲಿಂಗೇಶ್ವರ ಭಜನಾ ಮಂಡಳಿ ಇವರಿಂದ ಗಳಿಗೆದ ಉಳಾಯಿ ತುಳು ನಾಟಕ ಜರಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.