HomePage_Banner_
HomePage_Banner_
HomePage_Banner_

ಶಿಶಿಲದಲ್ಲಿ ಅಭಿನಂದನಾ ಕಾರ್ಯಕ್ರಮ ಶಾಲಾಭಿವೃದ್ಧಿಗೆ ನೆರವು : ಜನಪ್ರತಿನಿಧಿಗಳ ಭರವಸೆ

shishila abhinandane copyಶಿಶಿಲ : ಶಿಶಿಲ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಎ.೫ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ ಹಾಗೂ ಅಭಿನಂದನಾ ಸಭೆಯನ್ನು ನಡೆಸಲಾಯಿತು. ಚುನಾವಣೆಯಲ್ಲಿ ವಿಜೇತರಾದ ತಾ.ಪಂ. ಹಾಗೂ ಜಿ.ಪಂ. ಸದಸ್ಯರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಕೆ.ಎಂ. ಹಾಗೂ ಉಪಾಧ್ಯಕ್ಷೆ ನಳಿನಿ ಅವರು ಅಭಿನಂದಿಸಿದರು. ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಹಾಗೂ ಕುಶಾಲಪ್ಪ ಗೌಡ ಬದ್ರಿಜಾಲು ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಶೌಚಾಲಯ ನಿರ್ಮಾಣ, ದುರಸ್ಥಿ ಹಾಗೂ ಕೈ ತೊಳೆಯುವ ಘಟಕ ಸ್ಥಾಪನೆಗೆ ನೆರವು ಕೋರಿ ಮನವಿ ಸಲ್ಲಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಧರ್ಮಸ್ಥಳ ಕ್ಷೇತ್ರದ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಮಾತನಾಡಿ ಮಕ್ಕಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸುವಂತೆ ಕರೆಯಿತ್ತರು. ಹಾಗೂ ಶಾಲಾ ಮೂಲಭೂತ ಸೌಕರ್ಯಕ್ಕೆ ನೆರವು ನೀಡುವುದಾಗಿ ಹೇಳಿದರು. ತಾ.ಪಂ. ಸದಸ್ಯೆ ಶ್ರೀಮತಿ ದಿವ್ಯಜ್ಯೋತಿ ಮಾತನಾಡಿ ವಿದ್ಯಾಭ್ಯಾಸ ನಡೆಸುವಾಗ ವಿದ್ಯಾರ್ಥಿಗಳು ಶಿಸ್ತು ಹಾಗೂ ಶ್ರದ್ಧೆಯಿಂದ ಅಧ್ಯಯನ ನಡೆಸಬೇಕೆಂದರು. ಪ್ರಸ್ತಾವನೆಗೈದ ಮುಖ್ಯ ಶಿಕ್ಷಕ ಜೋಸೆಫ್ ಪಿರೇರಾ ಮಾತನಾಡಿ ಈಗಾಗಲೇ ಶಾಲೆಯನ್ನು ಸಾಮರ್ಥ್ಯ ಸಾಧಿಸಿದ ಶಾಲೆಯೆಂದು ಘೋಷಿಸಲಾಗಿದೆ. ೨೦೧೬-೧೭ನೇ ಸಾಲಿನಲ್ಲಿಯೂ ಸಾಮರ್ಥ್ಯ ಆಧಾರಿತ ಕಲಿಕೆಗೆ ಶ್ರಮಿಸಿದ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಅಭಿನಂದಿಸಲಾಗುವುದು ಎಂದರು. ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕ ಅಧಿಕಾರಿ ಯರ್ರಿ ಸ್ವಾಮಿ ಹಿತವಚನವನಿತ್ತರು. ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಗೀತಾ, ಸದಸ್ಯರಾದ ಸೂರಜ್ ನೆಲ್ಲಿತ್ತಾಯ, ಶ್ರೀಮತಿ ಅಮ್ಮು ಉಪಸ್ಥಿತರಿದ್ದರು. ಗಣ್ಯರಾದ ಸೂರ್ಯನಾರಾಯಣ ರಾವ್, ಕೊರಗಪ್ಪ ಗೌಡ ಪಡ್ಪು, ರಾಮಚಂದ್ರ ವೈಕುಂಠಪುರ, ಶಿಕ್ಷಕಿಯರಾದ ರೇಖಾ ಕುಮಾರಿ, ತೀರ್ಥ ದೇನೋಡಿ ಸಹಕರಿಸಿದರು. ಟಿ.ಜಿ.ಟಿ ಶಿಕ್ಷಕರಾದ ಕೃಷ್ಣ ಕೆ.ಸಿ. ವಾರ್ಷಿಕ ಫಲಿತಾಂಶ ಪ್ರಕಟಿಸಿದರು. ೮ನೇ ತರಗತಿ ಮಕ್ಕಳು ಶಾಲಾ ಗ್ರಂಥಾಲಯಕ್ಕೆ ಫ್ಯಾನ್ ಕೊಡುಗೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕಿ ರತ್ನಾ ಬಿ. ವಂದಿಸಿದರು. ಸಹ ಶಿಕ್ಷಕ ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.