ವಿಜಯ ರಾಘವ ಪಟ್ವೆಡ್ನಾಯರಿಗೆ ಅಭಿನಂದನೆ

Padvetnaya abhinandane copyಉಜಿರೆ : ಚಿತ್ಪಾವನ ಬ್ರಾಹ್ಮಣರ ಬಳಗ ಉಜಿರೆ – ಬೆಳ್ತಂಗಡಿ ವತಿಯಿಂದ ಎಪ್ಪತ್ತನೇ ವರುಷ ತುಂಬಿದ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದದ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ದಂಪತಿಗೆ ಅಭಿನಂದನೆ ನಡೆಸುವ ಕಾರ‍್ಯಕ್ರಮ ಅವರ ಸ್ವಗೃಹ ಉಜಿರೆಯ ಪುಡುವೆಟ್ಟುನಲ್ಲಿ ನಡೆಯಿತು.
ಬಳಗದ ಗೌರವಾಧ್ಯಕ್ಷ ಸೋಮನಾಥ ಪಟವರ್ದನ್‌ರವರು ಶಾಲು ಹೊದಿಸಿ ಫಲ, ತಾಂಬೂಲ, ವಸ್ತ್ರ ನೀಡಿ ಗೌರವಿಸಿದರು. ಬಳಗದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಕೇಳ್ಕರ್ ಸ್ವಾಗತಿಸುತ್ತಾ ಶ್ರೀ ಪಡ್ವೆಟ್ನಾಯರು ಬ್ರಾಹ್ಮಣ ಸಮಾಜ ಹಾಗೂ ಸಮಸ್ತ ಸಮುದಾಯಕ್ಕೆ ನೀಡಿದ ಸೇವೆಗೋಸ್ಕರ ಅಭಿನಂದನೆ ಮಾಡಿದರು.
ಸೋಮನಾಥ ಪಟವರ್ದನ್‌ರವರು ವಿಜಯರಾಘವ ಪಡ್ವೆಟ್ನಾಯರ ಬಗ್ಗೆ ಬರೆದ ಅಭಿನಂದನಾ ಕವನವನ್ನು ಶಂಕರ ಪಟವರ್ಧನ್ ವಾಚಿಸಿದರು. ಪಡ್ವೆಟ್ನಾಯ ಅಭಿನಂದನೆಗೆ ಉತ್ತರಿಸುತ್ತಾ ತಮ್ಮ ಮನೆತನಕ್ಕೂ ಚಿತ್ಪಾವನ ಭಾಂದವರಿಗೂ ಪೂರ್ವದಿಂ ದಲೂ ಇದ್ದ ಅವಿನಾಭಾವ ಸಂಬಂಧದ ಬಗ್ಗೆ ನೆನಪಿಸಿದರು. ಕಾರ‍್ಯದರ್ಶಿ ಶ್ರೀಕಾಂತ ಗೋರೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.