ಧರ್ಮಸ್ಥಳ ಶುದ್ಧ ಗಂಗಾ ಯೋಜನೆ: ರೂ. 15 ಕೋಟಿ ವಿನಿಯೋಗ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

sudda ganga yojane copy ಧರ್ಮಸ್ಥಳ : ಹತ್ತಾರು ವರುಷಗಳಿಂದ ಗಡಸುತನ, ಪ್ಲೋರೈಡ್ ಮುಂತಾದ ಲವಣಯುಕ್ತ ನೀರು ಕುಡಿದು ಅನಾರೋಗ್ಯದಿಂದ ನರುಳುತ್ತಿರುವ ರಾಜ್ಯದ ಹಲವು ಗ್ರಾಮೀಣಾ ಪ್ರದೇಶದಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ಘಟಕವನ್ನು ವಿನೋತನ ಮಾದರಿ, ತಂತ್ರಜ್ಞಾನ, ಕಾರ್ಯನಿರ್ವಹಣೆ ಯೊಂದಿಗೆ ೨೨೫ ಕ್ಕೂ ಮಿಕ್ಕಿ ಶುದ್ಧಗಂಗಾ ಶುದ್ಧೀಕರಣ ಘಟಕವನ್ನು ರಾಜ್ಯದ ೧೬ ಜಿಲ್ಲೆಯ ೪೭ ತಾಲೂಕುಗಳಲ್ಲಿ ಸಮಗ್ರ ನಿರ್ವಹಣೆಯನ್ನು ಮಾಡಲಾಗುತ್ತಿದ್ದು, ಶ್ರೀ ಕ್ಷೇತ್ರದಿಂದ ಪ್ರಸ್ತುತ ವರ್ಷದಲ್ಲಿ ರೂ. ೨.೫೧ ಕೋಟಿ ಅನುದಾನವನ್ನು, ಒಟ್ಟು ೯.೩೩ ಕೋಟಿ ಅನುದಾನವನ್ನು ವಿನಿಯೋಗಿಸ ಲಾಗಿದ್ದು, ಶುದ್ಧಗಂಗಾ ಯೋಜನೆಗೆಇತರ ಸಂಘ ಸಂಸ್ಥೆಗಳ ಹಣಕಾಸಿನ ನೆರವಿನೊಂದಿಗೆ ರೂ. ೧೫.೦೩ ಕೋಟಿ ಮೊತ್ತವನ್ನು ವಿನಿಯೋಗಿಸಲಾಗಿದೆ.
ರಾಜ್ಯದ ಎಲ್ಲಾ ಶುದ್ಧಗಂಗಾ ಘಟಕಗಳಲ್ಲಿ ರಾಜ್ಯದಲ್ಲಿರುವ ೨೦೦ ಕ್ಕೂ ಮಿಕ್ಕಿದ ಘಟಕಗಳಲ್ಲಿ ವಿಶ್ವಜಲ ದಿನಾಚರಣೆಯನ್ನು ಆಚರಿಸಲಾಗಿದ್ದು, ಶುದ್ಧನೀರಿನ ಮಹತ್ವ, ಬೀದಿನಾಟಕ, ಮಾಹಿತಿ ಕಾರ್ಯಕ್ರಮ, ದೃಶ್ಯಮಾಧ್ಯಮ, ಕಲಾ ತಂಡಗಳಿಂದ ಮಾಹಿತಿ, ಕಾರ್ಯಾಗಾರ, ಶಾಲಾ ಮಕ್ಕಳ ಜಾಥಾ, ವೀಡಿಯೋ, ಚಿತ್ರ ಪ್ರದರ್ಶನ ಮುಂತಾದ ಕಾರ್ಯಕ್ರಮಗಳ ಮೂಲಕ ೭೫,೦೦೦ಕ್ಕೂ ಮಿಕ್ಕಿ ಜನರು ವಿಶ್ವಜಲ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ ಎಂಬುದಾಗಿ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಬಿ. ಜಯರಾಮ ನೆಲ್ಲಿತ್ತಾಯ, ಶುದ್ಧಗಂಗಾ ಯೋಜನೆಯ ಯೋಜನಾಧಿಕಾರಿ ಜಿ.ನವೀನ್ ಶೆಟ್ಟಿ ಇವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ಶುದ್ಧ ನೀರಿನ ಕ್ಯಾನ್ ಬಳಕೆ: ಶುದ್ಧನೀರನ್ನು ಪಡೆಯುವ ಸಂದರ್ಭದಲ್ಲಿ ಬಳಕೆದಾರ- ಜನರು ಬಳಸುವ ಕ್ಯಾನ್ /ಕೊಡಪಾನಗಳ ಕುರಿತು ಕಾಳಜಿ ವಹಿಸದ ಕಾರಣ ನೀರು ಕೊಂಡೊಯ್ಯೂವ ಕೊಡಪಾನಾ ಉತ್ತಮ ಗುಣಮಟ್ಟ ಆಹಾರ ಶ್ರೇಣಿಯಲ್ಲಿರದ ಕಾರಣ ಬಳಕೆ ಮಾಡುವ ಶುದ್ಧ ನೀರಿಗೆ ಬ್ಯಾಕ್ಟೀರಿಯಾ ಮುಂತಾದ ಕಲುಷಿತಗಳು ಸೇರಿ ಶುದ್ಧ ನೀರನ್ನು ಕೊಂಡೊಯ್ಯುವ ಪಾತ್ರೆಯಲ್ಲಿ ಅತೀ ಬೇಗ ಅಶುದ್ಧತೆಯಾಗುವ ಸಂಭವ ಹೆಚ್ಚಿರುತ್ತದೆ. ಈ ದೃಷ್ಠಿಯಿಂದ ರಾಜ್ಯದಲ್ಲಿ ಇರುವ ಎಲ್ಲಾ ಶುದ್ಧಗಂಗಾ ಘಟಕಗಳಲ್ಲಿ ಒಂದೇ ಮಾದರಿಯ ಆಹಾರ ಶ್ರೇಣಿಯ ಇಲಾಖೆಯಿಂದ ಅಂಗೀಕರಿಸಲ್ಪಟ್ಟಿರುವ ಉತ್ತಮ ಗುಣಮಟ್ಟದ ಕ್ಯಾನ್‌ಗಳನ್ನು ನೀಡಲಾಗುತ್ತಿದ್ದು, ಇದಕ್ಕೆ ಬಳಕೆದಾರರು ನಿಗದಿತ ಮೊತ್ತ ಪಾವತಿಸಿ, ಕ್ಯಾನನ್ನು ಒಯ್ಯುತ್ತಾರೆ. ಇದರಿಂದ ಶುದ್ಧನೀರಿನ ಗುಣಮಟ್ಟದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರದಿರುವುದನ್ನು ಗಮನಿಸಲಾಗಿದೆ. ಇದೇ ಶುದ್ಧಗಂಗಾ ಘಟಕದ ನೀರನ್ನು ಬಳಕೆದಾರರು ಸಂತೋಷದಿಂದ ಒಯ್ಯುತ್ತಿದ್ದಾರೆ.
ಸಹಕಾರ ಸಂಸ್ಥೆಯ ಹೊಣೆಗಾರಿಕೆ:-ಘಟಕ ಸ್ಥಾಪಿಸುವ ಪೂರ್ವದಲ್ಲಿ ಸಹಕಾರ ಸಂಸ್ಥೆಯಾದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್‌ಗಳು ಮೂಲ ಸೌಕರ್ಯಗಳಾದ ವಿದ್ಯುತ್, ನಿವೇಶನ, ಕಚ್ಚಾ ನೀರಿನ ವ್ಯವಸ್ಥೆಯಾದ ನಂತರ ಕಟ್ಟಡ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇದರೊಂದಿಗೆ ಜಂಟಿ ಕರಾರು ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತಿದ್ದು, ಘಟಕ ಪ್ರಾರಂಭವಾದ ನಂತರ ಕಚ್ಚಾ ನೀರಿನ ಸಮಸ್ಯೆ, ಕೊಳವೆ ಬಾವಿ ಸಮಸ್ಯೆ ಮುಂತಾದ ಸಮಸ್ಯೆಗಳು ಬಂದಾಗ ಸಹಕಾರಿ ಸಂಸ್ಥೆಯ ದುರಸ್ಥಿ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.
ಒಂದು ಲಕ್ಷ ಕುಟುಂಬಗಳಿಗೆ ಶುದ್ಧನೀರಿನ ವ್ಯವಸ್ಥೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ| ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವ ಮತ್ತು ಜನರ ವಿಶೇಷ ಕಲ್ಪನೆ-ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಶುದ್ಧೀಕರಣ ಘಟಕವನ್ನು ಸ್ಥಾಪಿಸಿದ ಕೀರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಲ್ಲುತ್ತದೆ. ಹಂತ ಹಂತವಾಗಿ ರಾಜ್ಯದ ೧೬ ಜಿಲ್ಲೆಗಳ ೪೫ ತಾಲೂಕುಗಳಲ್ಲಿ ೨೨೫ ಕ್ಕೂ ಮಿಕ್ಕಿ ಘಟಕಗಳನ್ನು ಸ್ಥಾಪಿಸಿ, ಸಮಗ್ರ ನಿರ್ವಹಣೆಯನ್ನು ನೋಡಿಕೊಳ್ಳ ಲಾಗುತ್ತಿದ್ದು, ಪ್ರತಿನಿತ್ಯ ೧ ಲಕ್ಷಕ್ಕೂ ಮಿಕ್ಕಿ ಕುಟುಂಬಗಳಿಗೆ ೨೦ ಲಕ್ಷ ಲೀಟರ್ ಶುದ್ಧ ನೀರನ್ನು ಪ್ರತಿ ನಿತ್ಯ ವರ್ಷದ ಪ್ರತಿ ದಿನಲೂ ವಿತರಿಸಲಾಗುತ್ತಿದೆ. ಇದರೊಂದಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ೧೦೦ ನೂತನ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವ ಕಾರ್ಯವು ಚಾಲ್ತಿಯಲ್ಲಿರುತ್ತದೆ.
ಅಶುದ್ಧ ನೀರಿನಿಂದ ಬರುವಂತಹ ಸಮಸ್ಯೆಗಳು:- ರಕ್ತದ ಒತ್ತಡ, ಕಿಡ್ನಿತೊಂದರೆ, ಕೀಲು ನೋವು, ಪಾರ್ಶ್ವವಾಯು, ಮಾನಸೀಕ ತೊಂದರೆ, ಚರ್ಮರೋಗ, ಮೂಳೆಸವೆತ, ಗರ್ಭಾಸ್ತ ಶಿಶುವಿನ ನ್ಯೂನತೆ, ನರರೋಗ, ನರಸೆಳೆತ ಮೊದಲಾದ ವಿವಿಧ ಸಾಂಕ್ರಾಮಿಕ ರೋಗಗಳು ಅಶುದ್ಧ ನೀರಿನ ಸೇವನೆಯಿಂದ ಬರುತ್ತಿರುವುದು ಕಂಡುಬರುತ್ತಿದೆ. ಇದರ ಗಂಭೀರತೆಯನ್ನು ಮನಗಂಡ ಧರ್ಮಾಧಿಕಾಯವರು ಶುದ್ಧನೀರಿಗೆ ಪರಿಹಾರವನ್ನು ಶುದ್ಧಗಂಗಾ ಕಾರ್ಯಕ್ರಮ ಜಾರಿಗೆ ತಂದರು. ವಿನೂತನವಾದ ಈ ಯೋಜನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕರಾದ ಡಾ| ಎಲ್.ಎಚ್. ಮಂಜುನಾಥ್‌ರವರು ಕಾರ್ಯಕ್ರಮವನ್ನು ಸಿದ್ಧಪಡಿಸಿದರು.
ಘಟಕದ ಸಹಕಾರ ಸಂಸ್ಥೆಗಳು:-ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಗ್ರಾಮ ಪಂಚಾಯತ್, ನಗರ ಪಂಚಾಯತ್, ಪುರಸಭೆ, ನಗರ ಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ವಿವಿಧ ಸಂಘಸಂಸ್ಥೆಗಳು.
ತಾಂತ್ರೀಕ ಮತ್ತು ಸೇವಾ ನಿರ್ವಹಣೆ:- ಶುದ್ಧೀಕರಣ ಘಟಕವನ್ನು ಸ್ಥಾಪಿಸುವುದು ಎಷ್ಟು ಪ್ರಾಮುಖ್ಯತೆಯೂ ಅಷ್ಟೇ ಪ್ರಾಮುಖ್ಯತೆ ಸ್ಥಾಪಿಸಿದ ನಂತರವೂ ನೀಡುವ ಅವಶ್ಯಕತೆ ಘಟಕಗಳ ಸ್ಥಾಪನೆಯೊಂದಿಗೆ ಸುಸ್ಥಿರತೆ ನಿರ್ವಹಣೆಯು ಅತೀ ಪ್ರಾಮುಖ್ಯತೆ ಆಗಿದ್ದು, ಧರ್ಮಸ್ಥಳದ ಮಾದರಿಯಲ್ಲಿ ನಡೆಸಿರುವ ಎಲ್ಲಾ ಘಟಕಗಳು ಸುಸ್ಥಿರತೆಯಲ್ಲಿ ನಿರ್ವಹಣೆಯಾಗು ತ್ತಿರುವುದರಿಂದ ರಾಜ್ಯದ ವಿವಿಧ ಜಿಲ್ಲಾ ಪಂಚಾಯತ್‌ಗಳು ಧರ್ಮಸ್ಥಳದ ನೆರವನ್ನು ನೀಡುವಂತೆ ಬೇಡಿಕೆ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.