ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ವಿವಿಧ ತಜ್ಞರೊಂದಿಗೆ ಏ. 8,9 : ಬೆಳ್ತಂಗಡಿಯ ಕೆ.ಎಂ.ಸಿ. ಸೆಂಟರ್‌ನಲ್ಲಿ

 ಬೆಳ್ತಂಗಡಿ : ಬೆಳ್ತಂಗಡಿಯ ಸಂತೆಕಟ್ಟೆ ಸುವರ್ಣ ಆರ್ಕೆಡ್‌ನ ಸುದ್ದಿ ಸೆಂಟರ್‌ನಲ್ಲಿ ಈಗಾಗಲೇ ಪ್ರಾರಂಭ ಗೊಂಡು ಕಾರ್ಯಾಚರಿಸುತ್ತಿರುವ ಕೆ.ಎಂ.ಸಿ. ಮಾಹಿತಿ ಕೇಂದ್ರದಲ್ಲಿ ಇದೇ ಏ. 8 ಮತ್ತು 9 ರಂದು ಎರಡು ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತಜ್ಞ ವೈದ್ಯರೊಂದಿಗೆ ಡಿಜಿಟಲ್ ಸಮಾಲೋಚನೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಈ ಮಾಹಿತಿ ಕೇಂದ್ರದಲ್ಲಿ ಈಗಾಗಲೇ ಲ್ಯಾಬ್ ಇದ್ದು ರಕ್ತದ ಮಾದರಿಯನ್ನು ಸಂಗ್ರಹಿಸಿ ಆಧುನಿಕ ತಂತ್ರಜ್ಞಾನದ ಮೂಲಕ ಮಂಗಳೂರು ಕೆ.ಎಂ.ಸಿ.ಗೆ ಕಳುಹಿಸಿ ಅದರ ರಿಪೋರ್ಟ್ ನೀಡುವ ವ್ಯವಸ್ಥೆ ಜಾರಿಯಲ್ಲಿದೆ.
ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಗಳೊಂದಿಗೆ ಮುಖಾಮುಖಿ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಮತ್ತು ಪರಿಹಾರ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಏ. ೮ ರಂದು ಬೆಳಿಗ್ಗೆ ೧೦ ರಿಂದ ೧ ಗಂಟೆವರೆಗೆ (ಇ.ಎನ್.ಟಿ) ಕಿವಿ, ಮೂಗು ಮತ್ತು ಗಂಟಲು ತಜ್ಞರು, ಅಪರಾಹ್ನ ೨ ರಿಂದ ೪ ರ ವರೆಗೆ ಕಣ್ಣಿನ ತಜ್ಞರ ಜೊತೆ ಸಮಾಲೋಚನೆ ನಡೆಯಲಿದೆ.
ಏ. ೯ ರಂದು ಬೆಳಿಗ್ಗೆ ೧೦ ರಿಂದ ೧ರ ವರೆಗೆ ಚರ್ಮರೋಗ ತಜ್ಞರು, ಅಪರಾಹ್ನ ೨ ರಿಂದ ೪ರ ವರೆಗೆ ಹೃದಯ ಸಂಬಂಧಿ ಕಾಯಿಲೆಗೆಳ ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಯಲಿದೆ.
ತಾಲೂಕಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ. ಹೆಚ್ಚಿನ ವಿವರ ಬೇಕಾಗಿದ್ದಲ್ಲಿ ಸುದ್ದಿ ಸೆಂಟರ್ ಕೆ.ಎಂ.ಸಿ. ಮಾಹಿತಿ ಕೇಂದ್ರ. ಸುವರ್ಣ ಆರ್ಕೆಡ್ ಬೆಳ್ತಂಗಡಿ ೯೧೮೪೯೪೮೯೩೩೫೪, ೯೯೦೧೯೦೭೭೮೬ ನಂಬರನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.