ಮೇಲಂತಬೆಟ್ಟು ಪಂಚಾಯತ್ ಸದಸ್ಯ ನಾರಾಯಣ ಪೂಜಾರಿ ಕತ್ತಿಯಿಂದ ಹಲ್ಲೆ; ಆರೋಪಿ ಅನಿಲ್ ಬಂಧನ

 ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾ. ಪಂ ಸದಸ್ಯ ಬರಮೇಲು ನಿವಾಸಿ ನಾರಾಯಣ ಪೂಜಾರಿ ಅವರಿಗೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಬಗ್ಗೆ ಗ್ರಾಮಸ್ಥರಾದ ಅನಿಲ್ ಎಂಬವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.
ಏ.೪ ರಂದು ತಾ. ಪಂ ಕಚೇರಿಯಲ್ಲಿ ನಡೆಯುತ್ತಿದ್ದ ಗ್ರಾ.ಪಂ ಸದಸ್ಯರ ತರಭೇತಿಯಲ್ಲಿ ಭಾಗವಹಿಸಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಪಂದಿಸಲು ಅವರು ಮೇಲಂತಬೆಟ್ಟುವಿಗೆ ಆಗಮಿಸಿದ್ದರು. ಗ್ರಾಮದ ಕರ್ಕಮೆ ಸನಿಹದ ಗೋಳಿದಕಟ್ಟೆ ಎಂಬಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದಾಗ ಅಲ್ಲಿದ್ದ ನಾರಾಯಣ ಪೂಜಾರಿ ಅವರಿಗೆ ಮತ್ತು ಅನಿಲ್‌ರಿಗೆ, ಪೈಪ್‌ಲೈನಿನ ಮಣ್ಣು ರಸ್ತೆಗೆ ಬಿದ್ದಿದೆ ಎಂಬ ವಿಷಯದಲ್ಲಿ ಪರಸ್ಪರ ಜಗಳವಾಗಿ ಬಳಿಕ ಶೈಲೇಶ್ ಪೂಜಾರಿ, ಅಣ್ಣಿ ಪೂಜಾರಿ ಅವರು ಜೊತೆಗಿರುವಂತೆ ಆರೋಪಿ ಅನಿಲ್ ನಾರಾಯಣ ಪೂಜಾರಿ ಅವರ ಮೇಲರಗಿ ಕತ್ತಿಯಿಂದ ಹಲ್ಲೆ ನಡೆಸಿದ್ದರು. ಈ ಸಂದರ್ಭ ಕತ್ತಿ ಏಟಿನಿಂದ ತಪ್ಪಿಸಿಕೊಂಡ ನಾರಾಯಣ ಪೂಜಾರಿ ಅವರ ಭುಜಕ್ಕೆ ಗಂಭೀರ ಸ್ವರೂಪದ ಗಾಯಾವಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.