HomePage_Banner_
HomePage_Banner_
HomePage_Banner_

ಮರಾಠಿ ಸಮಾಜ ಸೇವಾ ಸಂಘ: ವಿಶೇಷ ಸಮಾಲೋಚನಾ ಸಭೆ

Advt_NewsUnder_1

marati sabhe copy ಉಜಿರೆ: ಬೆಳ್ತಂಗಡಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಇದರ ಸಮಾಲೋಚನಾ ಸಭೆಯು ಎ.೩ರಂದು ತಾಲೂಕು ಸಂಘದ ಅಧ್ಯಕ್ಷ ಐ.ಎಸ್. ವೆಂಕಪ್ಪ ನಾಯ್ಕರವರ ಅಧ್ಯಕ್ಷತೆಯಲ್ಲಿ ಉಜಿರೆಯ ತಾಲೂಕು ಮರಾಠಿ ಸಂಘದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ತಾಲೂಕು ಸಮಿತಿ ಮತ್ತು ಪ್ರತಿ ಗ್ರಾಮವಾರು, ವಲಯ ಸಮಿತಿಗಳ ಬಲವರ್ಧನೆ ಮಾಡುವುದು, ಸ್ವಜಾತಿ ಭಾಂದವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಸಾಧಕರನ್ನು ಗುರುತಿಸುವ ಬಗ್ಗೆ, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅಗತ್ಯತೆಯನ್ನು ನೀಡುವುದರ ಬಗ್ಗೆ, ಸರಕಾರಿ ಸೌಲಭ್ಯಗಳ ಸದುಪಯೋಗ ಮಾಡುವ ಬಗ್ಗೆ ಹಾಗೂ ಧಾರ್ಮಿಕವಾಗಿ ಜಾಗೃತಿಗೊಳಿಸವುದರ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ತಾ.ಪಂ. ಸದಸ್ಯರಾದ ಲೀಲಾವತಿ, ಪಂಚಾಯತ್ ಸದಸ್ಯರಾದ ನೀಲಮ್ಮ, ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷ ಲಿಂಗಪ್ಪ ನಾಯ್ಕ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಕುಮಾರಿ ದೀಪಾಶ್ರೀ ಪ್ರಾರ್ಥಸಿ ಕಾರ‍್ಯದರ್ಶಿ ಸೀತಾರಾಮ ಬಿ. ಎಸ್ಸಿ ಸ್ವಾಗತಿಸಿದರು. ಸಂಘದ ತಾಲೂಕು ಉಪಾಧ್ಯಕ್ಷ ಸತೀಶ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೆನ್ನಕೇಶವ ನಾಯ್ಕರವರು ನಿರೂಪಿಸಿ ಬಾಲಕೃಷ್ಣ ನಾಯ್ಕ ವಂದಿಸಿದರು. ಗಣ್ಯರು, ಸಮಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.