ಇಲೆಕ್ಟ್ರಿಕಲ್, ಗೃಹೋಪಯೋಗಿ ಉಪಕರಣಗಳ ದುರಸ್ಥಿ ಉಚಿತ ತರಬೇತಿ

  ಬೆಳ್ತಂಗಡಿ: ಶ್ರೀ ವಿಶ್ವೇಶ್ವರಯ್ಯ ಟ್ಯುಟೋರಿಯಲ್ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ತರಬೇತಿ ಸಂಸ್ಥೆ ಬೆಳ್ತಂಗಡಿ ವತಿಯಿಂದ ಎ. ೨೫ರಿಂದ ೨೧ ದಿನಗಳ ಅವಧಿಯ ಇಲೆಕ್ಟ್ರಿಕಲ್ ಮತ್ತು ಗೃಹೋಪಯೋಗಿ ವಸ್ತುಗಳ ದುರಸ್ಥಿ ಮತ್ತು ನಿರ್ವಹಣೆಯ ಕುರಿತು ಉಚಿತ ತರಬೇತಿ ನಡೆಯಲಿದೆ.
ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ೧೮ ವರ್ಷ ಮೇಲ್ಪಟ್ಟ ಪುರುಷ, ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು. ತರಬೇತಿಯಲ್ಲಿ ಸ್ವಉದ್ಯೋಗದ ಕುರಿತು ಮಾಹಿತಿ, ಬ್ಯಾಂಕ್‌ಲೋನ್, ಸಹಾಯ ಧನಗಳ ಕುರಿತು ಮಾಹಿತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಸ್ಪ ಅಕ್ಷರದಿಂದ ಬರೆದ ಅರ್ಜಿಯನ್ನು ಏಪ್ರಿಲ್ ೧೮ರ ಒಳಗೆ ಶ್ರೀ ವಿಶ್ವೇಶ್ವರಯ್ಯ ಟ್ಯುಟೋರಿಯಲ್ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ತರಬೇತಿ ಸಂಸ್ಥೆ, ದಾಮೋದರ ಹಾಸ್ಪಿಟಲ್ ಬಳಿ ಬೆಳ್ತಂಗಡಿ ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಸ್ವತಃ ಕಚೇರಿಗೆ ತಲುಪಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ- ೯೪೪೮೨೫೧೮೩೯ ಯನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.