ಏ. 10: ಉಜಿರೆಯಲ್ಲಿ ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ಜಾನಪದ ಸಾಂಸ್ಕೃತಿಕ ಉತ್ಸವ: 40 ಮಂದಿ ಸಾಧಕರಿಗೆ ಪುರಸ್ಕಾರ

  ಉಜಿರೆ: ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ವತಿಯಿಂದ ಸಂಘದ 11 ನೇ ರಾಜ್ಯಮಟ್ಟದ ಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಸಾಧಕರಿಗೆ ಪುರಸ್ಕಾರ ಸಮಾರಂಭ ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ ಹಾಗೂ ಕಾರ್ಯಕ್ರಮದ ಸಹ ಸಂಘಟಕರಾಗಿರುವ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಕೆ. ಎಸ್ ಮೋಹನ್ ನಾರಾಯಣ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ರಾಜ್ಯದ ೪೦ ಮಂದಿ ವಿವಿಧ ಕ್ಷೇತ್ರಗಳ ಸಾಧಕರಿಗೆ “ಕನ್ನಡ ಕಣ್ಮಣಿ” ಪುರಸ್ಕಾರ ಮತ್ತು ರಾಜ್ಯದ ಪ್ರಖ್ಯಾತ ಕಲಾವಿದರಿಂದ ಕರ್ನಾಟಕ ಜಾನಪದ ಸಾಂಸ್ಕೃತಿಕ ಉತ್ಸವ ನಡೆಯಲಿದೆ.
ಈ ಸಮಾರಂಭದಲ್ಲಿ ದ. ಕ ಜಿಲ್ಲೆಯಿಂದ ಖ್ಯಾತ ಯಕ್ಷಗಾನ ಸಂಘಟಕ ಹಾಗೂ ಕಲಾವಿದ ಅಶೋಕ ಭಟ್ಟ ಉಜಿರೆ, ಕನ್ನಡಪರ ಸಂಘಟಕ ಡಾ|| ಎಂ. ಪಿ ಶ್ರೀನಾಥ್, ಗ್ರಾಮೀಣ ಪತ್ರಿಕೋಧ್ಯಮ ಸೇವೆಗಾಗಿ ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ ಅವರೂ ಸೇರಿದಂತೆ ಉಳಿದ ಸಾಧಕರಿಗೆ ಏ. ೧೦ ರಂದು ನಡೆಯುವ ಕಾರ್ಯಕ್ರಮದಲ್ಲಿ ಸಮಾರಂಭದ ಅಗ್ರಗಣ್ಯ ಅತಿಥಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಪುರಸ್ಕಾರ ಮಾಡಲಿದ್ದಾರೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|| ಬಿ ಯಶೋವರ್ಮ, ಎನ್ ವೇಣುಗೋಪಾಲ್, ಅಂತಾರಾಷ್ಟ್ರೀಯ ಯೋಗ ತಜ್ಞ ಡಾ. ನಿರಂಜನಮೂರ್ತಿ, ಕವಿ ಡಾ. ಯಲ್ಲಪ್ಪ ಕೆ. ಕೆ ಪುರ, ವೀರಗಾಸೆ ಕಲಾವಿದ ಎಂ. ಅರ್ ಬಸಪ್ಪ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.