ಮುಂಡಾಜೆ “ಎಂ. ಡಿ. ಸಿ” ಗಲ್ಫ್ ಸಮಿತಿಯಿಂದ 1 ಲಕ್ಷ ರೂ. ದೇಣಿಗೆ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

mdc 1 lakhsa denige chekk copy ಮುಂಡಾಜೆ: ಮಸ್‌ಲಕು ಸುನ್ನೀ ಸಮಿತಿ ಮುಂಡಾಜೆ ಇದರ ವತಿಯಿಂದ ನಿರ್ಮಾಣಗೊಂಡ ಸುಮಾರು ೧೪ ಲಕ್ಷ ರೂ. ಗಳ ನೂತನ ಅರೆಬಿಕ್ ಸ್ಕೂಲ್ ಕಟ್ಟಡಕ್ಕೆ ಪೂರಕ ಅನುದಾನವಾಗಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಮುಂಡಾಜೆ ಜಮಾತ್ ಬಾಂಧವರ ಕ್ರಿಯಾ ಸಮಿತಿ “ಎಂ.ಡಿ.ಸಿ” (ಮುಂಡಾಜೆ ಡೆವಲಪ್‌ಮೆಂಟ್ ಕಮಿಟಿ) ವತಿಯಿಂದ ೧ ಲಕ್ಷ ರೂ. ಗಳ ದೇಣಿಗೆಯನ್ನು ಏ. ೧ ರಂದು ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಮಸ್‌ಲಕ್ ಸಮಿತಿಯ ಅಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ಅವರ ಸಮ್ಮುಖ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಸಮಿತಿ ಸಂಪರ್ಕ ಪ್ರಮುಖರಾದ ಶಬೀರ್ ಬಿ. ಕೆ. ಹೆಚ್, ಇಬ್ರಾಹಿಂ ಸಖಾಫಿ ಕಬಕ, ಇವರು ಹಸ್ತಾಂತರ ಕಾರ್ಯ ನಡೆಸಿದರು. ಕಾರ್ಯಾಧ್ಯಕ್ಷ ಹಾಜಬ್ಬ, ಕಾರ್ಯದರ್ಶಿ ಲ| ಅಶ್ರಫ್ ಆಲಿಕುಂಞಿ, ಕೋಶಾಧಿಕಾರಿ ಎಸ್ ಅಬ್ದುಲ್ಲ ರೋಝ, ಹಮೀದ್ ನೆಕ್ಕರೆ, ಕೆರೀಮ್ ಕೆ. ಎಸ್., ಅಬ್ಬಾಸ್ ಸಿ, ಎಸ್ಸೆಸ್ಸೆಫ್ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಅಲಿ ಕುಕ್ಕಾವು, ಡಿವಿಷನ್ ಎಕ್ಸ್‌ಗ್ಯೂಟಿವ್ ಶರೀಫ್ ಬೆರ್ಕಳ, ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ಮಜೀದ್, ಸದಸ್ಯ ಇಬ್ರಾಹಿ ದರ್ಕಾಸು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.