HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎ. 8ರಂದು ಮದ್ದಡ್ಕ ತಾಯಿ ಪಿಲಿಚಾಮು೦ಡಿ ದೈವದ ವರ್ಷಾವಧಿ ನೇಮೋತ್ಸವ

 ಕುವೆಟ್ಟು: ಮದ್ದಡ್ಕ ತಾಯಿ ಪಿಲಿಚಾಮು೦ಡಿ ದೈವದ ವರ್ಷಾವಧಿ ನಡೆಯುವ ನೇಮೋತ್ಸವವು ಹಾಗೂ ಧಾರ್ಮಿಕ ಸಭೆ ಸಾ೦ಸ್ಕ್ರತಿಕ ಕಾರ್ಯಕ್ರಮ ಎ. 8ರ ಚಂದ್ರಮಾನ ಯುಗಾದಿಯಂದು ನಡೆಯಲಿದೆ. ಸಂಜೆ ಗಂಟ್ಟೆ ೬ಕ್ಕೆ ರಘುರಾಮ ಭಟ್ ಮಠ ಅವರ ಮನೆಯಿ೦ದ ಭಜರಂಗದಳ ಮದ್ದಡ್ಕ ಘಟಕ ಇವರ ಸುಡುಮದ್ದ ಪ್ರದರ್ಶನದೊ೦ದಿಗೆ ಭಂಡಾರದೊ೦ದಿಗೆ ಮೆರವಣಿಗೆ ಬಂದು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ನಂತರ ಮದ್ದಡ್ಕತಾಯಿ ಪಿಲಿಚಾಮು೦ಡಿ ದೈವದ ನೇಮೋತ್ಸವ ಜರಗಲಿದೆ. ಸಾ೦ಸ್ಕ್ರತಿಕ ಕಾರ್ಯಕ್ರಮದಲ್ಲಿ ಶ್ರಿಮತಿ ವತ್ಸಲ ಬಡಕ್ಕಿಲ್ಲಾಯ ಮತ್ತು ಬಳಗದವರಿ೦ದ ಸಂಗೀತ ರಸಮಂಜರಿ, ತುಳು ಶಿವಳ್ಳಿ ಬ್ರಾಹ್ಮಣ ಸಂಘದ ವತಿಯಿ೦ದ ಮೇದಿನಿ ನಿರ್ಮಾಣ ಮತ್ತು ಮಹಿಷ ಮರ್ದಿನಿ ಎ೦ಬ ಪೌರಾಣಿಕ ಯಕ್ಷಗಾನ ಹಾಗೂ ವಿಷ್ಣು ಕಲಾವಿದರು ಮದ್ದಡ್ಕ ಅನಂತ ಎಸ್. ಇರ್ವತ್ರಾಯ ತಂಗೋಯಿ ವಿರಚಿತ ನಾಟಕ ( ನಾಲೆಕ್ ನಾಲ್ ) ಎ೦ಬ ನಾಟಕ ಪ್ರದರ್ಶನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.