ಕಲ್ಮಂಜ ಗ್ರಾ.ಪಂನಲ್ಲಿ ವಿವಿಧ ಸೌಲಭ್ಯಗಳ ವಿತರಣೆ

Advt_NewsUnder_1
Advt_NewsUnder_1

 ಕಲ್ಮಂಜ: ಗ್ರಾ. ಪಂಚಾಯತ್‌ನ ಶೇ. 3 ಅನುದಾನದಲ್ಲಿ ಬರುವ ಸೌಲಭ್ಯಗಳನ್ನು ಗ್ರಾಮ ಸಭೆಯಲ್ಲೇ ವಿತರಣೆ ಮಾಡುವ ಮೂಲಕ ಕಲ್ಮಂಜ ಗ್ರಾಮ ಸಭೆಯಲ್ಲಿ ಮಾದರಿಯಾಗಲಾಯಿತು. ಮಾ. ೨೨ ರಂದು ನಡೆದ ಸಭೆಯಲ್ಲಿ ಇಬ್ಬರು ಶ್ರವಣದೋಶ ಹೊಂದಿರುವವ ಫಲಾನುಭವಿಗಳಾದ ಕೃಷ್ಣಪ್ಪ ದೇವಾಡಿಗ ಅಕ್ಷಯ ನಗರ ಮತ್ತು ಚನನ ಪೂಜಾರಿ ಅವರಿಗೆ ಶ್ರವಣ ಸಾಧನ, ತೀವ್ರ ರೋಗಗ್ರಸ್ತರಾಗಿ ಹಾಸಿಗೆಯಲ್ಲೇ ಮಲಗಿರುವ ೩ ಮಂದಿ ಫಲಾನುಭವಿಗಳಾದ ಉಮೇಶ್ ಆಚಾರ್ಯ, ಮೋಹನ ಪೂಜಾರಿ ಮತ್ತು ಚಂದ್ರಾವತಿ ಅವರಿಗೆ ವಾಟರ್ ಬೆಡ್ಡನ್ನು ಗ್ರಾ. ಪಂ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ದಿನೇಶ್ ಗೌಡ ಮತ್ತು ಸದಸ್ಯರುಗಳು ನೀಡಿದರು. ಈ ಸಂದರ್ಭ ತಾ.ಪಂ ಸದಸ್ಯರಾದ ಶಶಿಧರ ಎಂ, ಲೀಲಾವತಿ ಯಾನೆ ಧರ್ಣಮ್ಮ, ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ, ಮಾರ್ಗದರ್ಶಿ ಅಧಿಕಾರಿ ಸಿಡಿಪಿಒ ಸರಸ್ವತಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ಕಳೆದ ಬಾರಿಯ ಗ್ರಾಮ ಸಭೆಯಲ್ಲೂ ಇದೇ ಮಾದರಿ ಅನುಸರಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.