ಇಂದಬೆಟ್ಟು ಬಸ್ಟ್ಯಾಂಡ್‌ನಲ್ಲಿ ಆಧಾರ್ ಕಾರ್ಡ್‌ಗಳನ್ನಿಟ್ಟು ಹೋದ ಪೋಸ್ಟ್‌ಮ್ಯಾನ್…. ಬೇಜವಾಬ್ಧಾರಿ ವರ್ತನೆಗೆ ನಾಗರಿಕರ ಖಂಡನೆ

adhar card 1

adhar card 2

adhar card 4

adhar card 5ಇಂದಬೆಟ್ಟು: ಜನರಿಗೆ ಸರಕಾರಿ ಸವಲತ್ತುಗಳನ್ನು ಪಡೆಯಲು ಪ್ರಮುಖ ಗುರುತಿನ ಚೀಟಿಯಾಗಿ ಇತ್ತೀಚೆಗೆ ಸುಪ್ರೀ ಕೋರ್ಟ್ ಕೂಡ ಮಾನ್ಯಮಾಡಿರುವ ಪ್ರಮುಖ ಗುರುತಿನ ದಾಖಲೆಯಾಗಿರುವ ಆಧಾರ್ ಕಾರ್ಡ್ ಗಳನ್ನು ವಿಳಾಸದಾರರಿಗೆ ಹಂಚಬೇಕಾದ ಪೋಸ್ಟ್ ಮ್ಯಾನ್ ಬಾಬು ಎಂಬವರು ಅದನ್ನು ಇಂದಬೆಟ್ಟು ಸಾರ್ವಜನಿಕ ಪ್ರಯಾಣಿಕರ ತಂಗುದಾಣದಲ್ಲಿ ಎಸೆದುಹೋದ ಘಟನೆ ಏ. 2 ರಂದು ಬೆಳಕಿಗೆ ಬಂದಿದೆ.
ಈ ಸಂಬಂಧ ನಾಗರಿಕರು ಚಿತ್ರ ಸಹಿತ ಮಾಹಿತಿಯನ್ನು ಸುದ್ದಿ ಪತ್ರಿಕೆಗೆ ನೀಡಿದ್ದಾರೆ. ಇಂದಬೆಟ್ಟು ಗ್ರಾ. ಪಂ ಅಧ್ಯಕ್ಷೆಯ ಪತಿಯೂ ಆಗಿರುವ ಅಂಚೆ ವಿತರಕರು ಇದೇ ಮೊದಲೇನಲ್ಲ ಈ ರೀತಿ ವರ್ತಿಸುವುದು ಎಂದು ನಾಗರಿಕರು ಆರೋಪಿಸಿದ್ದು, ಈ ಹಿಂದೆಯೂ ಹಲವೆಡೆ ಅವರು ಜನರಿಗೆ ತಲುಪಬೇಕಾಗಿರುವ ಅಗತ್ಯ ದಾಖಲೆಪತ್ರಗಳನ್ನು, ಆಧಾರ್ ಕಾರ್ಡ್‌ನಂತಹ ಆಮೂಲ್ಯ ದಾಖಲೆಗಳನ್ನು ಇದೇ ರೀತಿ ಅವರೇ ಗುರುತಿಸಿದ ಜಾಗದಲ್ಲಿ ಇರಿಸಿಹೋದ ಬಗ್ಗೆಯೂ ನಾಗರಿಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.