ಈದು ಶ್ರೀ ಮುಜಿಲ್ನಾಯ ದೈವಸ್ಥಾನ ಬ್ರಹ್ಮಕಲಶೋತ್ಸವ- ಸಭಾ ಕಾರ್ಯಕ್ರಮ

Advt_NewsUnder_1
Advt_NewsUnder_1

edu 1

edu 2

edu 3

edu 4

  ಶ್ರೀ ಕ್ಷೇತ್ರ ಈದು ಶ್ರೀ ಮುಜಿಲ್ನಾಯ ದೈವಸ್ಥಾನ ಇದರ ಮುಜಿಲ್ನಾಯ ಹಾಗೂ ಪರಿವಾರ ದೈವಗಳ ನೂತನ ಶಿಲಾಮಯ ಗರ್ಭಗುಡಿಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಎ.೧ರಂದು ಆರಂಭಗೊಂಡಿದ್ದು, ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ ಗೇಹ ಪ್ರತಿಗ್ರಹ, ಋತ್ವಿಜರ ಸ್ವಾಗತ, ಸ್ವಸ್ತಿ ಪುಣ್ಯಾಹ ವಾಚನ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಆದ್ಯಗಣ ಯಾಗ, ಸಂಜೀವಿನಿ ಯಾಗ ಜರಗಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಪಡ್ಯಾರಮನೆ ಡಾ| ಪಿ. ವಿಜಯಕುಮಾರ್ ಕಾಜವ ನೆರವೇರಿಸಿದರು. ಉಗ್ರಾಣ ಉದ್ಘಾಟನೆಯನ್ನು ಕೊಡಮಣಿತ್ತಾಯ ದೈವಸ್ಥಾನದ ಕೂಡೈಗುಮೈತ್ತು ಆಡಳಿತ ಮೊಕ್ತೇಸರ ರತ್ನರಾಜ ಬಲ್ಲಾಳ್, ಅನ್ನಛತ್ರ ಉದ್ಘಾಟನೆಯನ್ನು ಈದು ಶ್ರೀ ಕ್ಷೇತ್ರ ಮುಜಿಲ್ನಾಯ ದೈವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣತಂತ್ರಿ, ಈದು ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮರಾವ್ ನೆರವೇರಿಸಿದರು. ಕಾರ್ಯಕ್ರಮವನ್ನು ಬಲ್ಯೊಟ್ಟು ಶಿಕ್ಷಕರಾದ ಶಂಕರ್ ಮತ್ತು ರೋಹಿತ್ ಕುಮಾರ್ ನಿರೂಪಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ ಭೂ ಶುದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತುಬಲಿ, ರಾಕ್ಷೋಘ್ನ ಹೋಮ, ಭೂ ವರಹಾ ಶಾಂತಿ, ಚಕ್ರಮಂತ್ರ ಹೋಮ, ಪಾಶುಪತ ಮಂತ್ರಹೋಮ, ದಿಕ್ಷಾಲ ಬಲಿ ನಡೆಯಿತು.

 edu 9

edu 12

edu 11

edu 6

edu 7ಈದು (ಕಾರ್ಕಳ): ಈ ಜಗತ್ತು ಪರಸ್ಪರ ನಂಬಿಕೆಯ ನೆಲೆಗಟ್ಟಿನಲ್ಲಿ ಮತ್ತು ಸನಾತನವಾದ ಪರಂಪರೆಯ ಆಧಾರದ ಮೇಲೆ ಮುನ್ನಡೆಯುತ್ತಿದ್ದು ಅದೇ ನಂಬಿಕೆ ಮತ್ತು ವಿಶ್ವಾಸದ ನೆಲೆಗಟ್ಟಿನಲ್ಲಿ ನಡೆದಾಗ ಸುದೃಢ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ನುಡಿದರು.
ಶ್ರೀ ಕ್ಷೇತ್ರ ಈದು ಶ್ರೀ ಮುಜಿಲ್ನಾಯ ದೈವಸ್ಥಾನ ಇದರ ಮುಜಿಲ್ನಾಯ ಹಾಗೂ ಪರಿವಾರ ದೈವಗಳ ನೂತನ ಶಿಲಾಮಯ ಗರ್ಭಗುಡಿಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಏ. ೧ ರಿಂದ ಏ. ೩ರವರೆಗೆ ಜರುಗಿ ಏ. ೩ ರಂದು ನಡೆದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.
ಒಳ್ಳೆಯ ಹಾದಿಯಲ್ಲಿ ನಡೆಯಲು ಅಪಾರವಾದ ಧರ್ಮಶ್ರದ್ಧೆ ಇರಬೇಕಾಗುತ್ತದೆ. ಹಿಂದಿನ ಕಾಲದ ಜನರು ದೈವ, ದೇವರು, ಆಚರಣೆ, ಇತ್ಯಾಧಿಗಳನ್ನು ಬಿಟ್ಟುಹಾಕಿರಲಿಲ್ಲ. ಹಾಗಾಗಿ ಆಗೋಚರವಾದ ನಂಬಿಕೆ ಶಕ್ತಿಗಳು ಅವನ್ನೂ ಬಿಟ್ಟುಹಾಕಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಮಾತನಾಡಿ, ತುಳುನಾಡ ಜನರಾದ ನಮ್ಮ ಆಚಾರ, ವಿಚಾರ, ವಿಹಾರಗಳು, ಆರಾದನಾ ಪದ್ಧತಿ ಎಲ್ಲವೂ ವೈಶಿಷ್ಟ್ಯಪೂರ್ಣವಾಗಿದ್ದು ಇತರ ನಾಡಿನ ಜನರು ನಮ್ಮ ಈ ಪರಿಯ ಕ್ತಿಯನ್ನು ನೋಡಿ ಭಾವಪರವಶರಾಗುತ್ತಾರೆ. ನಮ್ಮ ಆಚರಣೆಗಳಲ್ಲಿ ಮೂಢ ನಂಬಿಕೆಗೆ ಅವಕಾಶವಾಗಬಾರದು ಎಂದರು.
ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಹಿಸಿದ್ದು, ಸರಕಾರದ ವತಿಯಿಂದ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ೧೩ ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು. ಅಂತೆಯೇ ಈದು ರಸ್ತೆ ಡಾಂಬರೀಕರಣಕ್ಕೆ ೫೦ ಲಕ್ಷ ರೂ. ಅನುದಾನ ಮೀಸಲಿರಿಸುವುದಾಗಿ ತಿಳಿಸಿದರು.
ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಈದು ಗ್ರಾಮದಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣವಾಗಿರುವ ಈ ಕ್ಷೇತ್ರ ನಾಡಿನ ಗೌರವವನ್ನು ಎತ್ತರಿಸಿದೆ ಎಂದರು.
ಮಡಂತ್ಯಾರು ನಡುಬೆಟ್ಟು ಕ್ಷೇತ್ರದ ಧರ್ಮದರ್ಶಿ ರವಿ ಎನ್ ಶುಭ ಕೋರಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ಧನಲಕ್ಷ್ಮೀ ಕ್ಯಾಶ್ಯೂಸ್‌ನ ಶ್ರೀಪತಿ ಭಟ್, ಜಿ.ಪಂ ಸದಸ್ಯ ಉದಯ ಕೋಟ್ಯಾನ್, ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರು, ಲೋಕೋಪಯೋಗಿ ಇಲಾಖಾ ಗುತ್ತಿಗೆದಾರ ಉದಯ ಕುಮಾರ್ ಶೆಟ್ಟಿ, ಪೂನಾದ ಉದ್ಯಮಿ ಶೇಖರ್ ಶೆಟ್ಟಿ, ನಿವೃತ ಶಿಕ್ಷಕ ಸನ್ಮತ್ ಕುಮಾರ್, ಶಿಕ್ಷಕ ನಾಗೇಶ್ ಪೂಜಾರಿ, ಸಿದ್ದಕಟ್ಟೆಯ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರ ನಟರಾಜ್ ಜೈನ್, ಶಾಂತಿರಾಜ್ ಜೈನ್ ಶಿರ್ಲಾಲು, ಸುರೇಂದ್ರ ಶೆಟ್ಟಿ ಮುಂಬೈ, ನವೀಕರಣ ಸಮಿತಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಉದ್ಮಯಮಿ ಅನಿಲ್, ಆಡಳಿತ ಮೊಕ್ತೇಸರ ಅಶೋಕ್ ಕುಮಾರ್, ಆನಂದ ಬಂಗೇರ ಮೊದಲಾದವರು ಉಪಸ್ಥಿತಿರಿದ್ದರು.
ಕೃಷ್ಣ ಕುಮಾರ್ ಸ್ವಾಗತಿಸಿದರು. ಅಶೋಕ್ ಕುಮಾರ್ ಧನ್ಯವಾದವಿತ್ತರು. ನಿರಂಜನ ಹಾಗೂ ಕೃಷ್ಣ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಕಲಶೋತ್ಸವದ ನಿಮಿತ್ತ ಭಕ್ತಾಧಿಗಳು ಹಾಗೂ ಗ್ರಾಮಸ್ಥರಿಂದ ಹಸಿರುವಾಣಿ ಕಾಣಿಕೆಯನ್ನು ಮಾ. ೩೧ರಂದು ಭಕ್ತಿ ಶ್ರದ್ಧೆಯಿಂದ ಸಮರ್ಪಿಸಿದರು. ಈ ಸಂದರ್ಭ ನವೀಕರಣ ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಈದು ಪಡ್ಯಾರ ಮನೆ ಮೊಕ್ತೇಸ ಡಾ| ಪಿ. ವಿಜಯ ಕುಮಾರ್ ಕಾಜವ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿ. ಸುನಿಲ್ ಕುಮಾರ್, ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಜೈನ್, ನವೀಕರಣ ಸಮಿತಿ ಗೌರವಾಧ್ಯಕ್ಷ ವಸಂತ ಭಟ್, ಕಾರ್ಯಾಧ್ಯಕ್ಷ ಎನ್. ಪ್ರೇಮ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಎನ್.ಇ., ಕೋಶಾಧಿಕಾರಿ ಸುರೇಂದ್ರ ಶೆಟ್ಟಿ ಸೂರ್ಯಶ್ರೀ, ಕಾರ್ಯದರ್ಶಿ ಮಿತ್ರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರಾಜು ಪೂಜಾರಿ, ಜತೆ ಕಾರ್ಯದರ್ಶಿ ಪೆರ್ನುಮಲ್ಲಡೆ, ಜಯವರ್ಮ ಜೈನ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸರ್ವಸದಸ್ಯರು, ನವೀಕರಣ ಸಮಿತಿಯ ಸರ್ವಸದಸ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.