ಉಜಿರೆ : 25ನೇ ರಜತ ಸಂಭ್ರಮದ ಮೊಸರುಕುಡಿಕೆ ಉತ್ಸವ ಮನುಷ್ಯತ್ವದಿಂದ ದೇವತ್ವದೆಡೆಗೆ ಸಾಗುವುದೇ ಧರ್ಮದ ಉದ್ದೇಶ

  Mosaru kudike samaropa Mosaru kudike udgatane ujireಉಜಿರೆ : ನಮ್ಮ ಧರ್ಮದ ತಿರುಳನ್ನು ಅರ್ಥೈಸಿ ಅದರಂತೆ ನಡೆದರೆ ಸಮಾಜದಲ್ಲಿ ಯಾವುದೇ ಸಮಸ್ಯೆಯುಂಟಾಗದು. ದಾನವತ್ವದಿಂದ ಮಾನವತ್ವದೆಡೆಗೆ ಹಾಗೂ ಮನುಷ್ಯತ್ವದಿಂದ ದೇವತ್ವದೆಡೆಗೆ ಸಾಗುವುದೇ ಧರ್ಮದ ಉದ್ದೇಶ, ನಮ್ಮನ್ನು ನಾವು ಶುದ್ಧೀಕರಿಸಿಕೊಂಡು ಸಮಾಜದಲ್ಲಿ ಧಾರ್ಮಿಕ ಭಾವನೆ ಬೆಳೆಸಿ, ಧರ್ಮದ ಬಗೆಗೆ ಜ್ಞಾನ, ಚಿಂತನೆ, ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕೆಂದು ಎಸ್.ಡಿ.ಎಂ. ಕಾಲೇಜು ಪ್ರಾಚಾರ್ಯ ಡಾ| ಬಿ. ಯಶೋವರ್ಮ ನುಡಿದರು.
ಅವರು ಸೆ.೫ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ ೨೫ನೇ ರಜತ ಸಂಭ್ರಮದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿ ಎಸ್.ಡಿ.ಎಂ. ವಸತಿ ಪ.ಪೂ. ಕಾಲೇಜು ಉಪನ್ಯಾಸಕ ಸುನಿಲ್ ಪಂಡಿತ್ ಪಂಚ ಮಹಾಯಜ್ಞಗಳನ್ನು ಸರಿಯಾಗಿ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುವುದು. ಮಾನವನನ್ನು ಮಾಧವನನ್ನಾಗಿ ಮಾಡುವ ಸಾಧನವೇ ಧರ್ಮ. ಧರ್ಮದ ಅರಿವಿನ ಕೊರತೆಯೇ ಅಧರ್ಮ ತಾಂಡವವಾಡಲು ಕಾರಣ ಎಂದರು. ಮಂಗಳೂರು ನ್ಯಾಷನಲ್ ಟ್ಯುಟೋರಿಯಲ್ ಕಾಲೇಜು ಪ್ರಾಚಾರ್ಯ ಯು.ಹೆಚ್. ಖಾದರ್ ಭಗವದ್ಗೀತೆಯ ಸಾರ ಕುರಾನ್, ಬೈಬಲ್‌ನಲ್ಲಿಯೂ ಇದೆ. ಪ್ರತಿ ಸಮಾರಂಭದಲ್ಲಿ ಸರ್ವ ಧರ್ಮಿಯರ ಸಭೆ ನಡೆಸಿದರೆ ದೇಶ ಒಂದಾಗುವುದು ಎಂದರು. ಇಂದಬೆಟ್ಟು ಸೈಂಟ್ ಪ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಧರ್ಮಗುರು ರೆ| ಫಾ| ಸೈಮನ್ ಡಿಸೋಜ ಎಲ್ಲಿ ಪ್ರೀತಿ, ಶಾಂತಿ ಸ್ನೇಹವಿರುವುದೋ ಅಲ್ಲಿ ದೇವರು ನೆಲೆಸಿರುತ್ತಾನೆ. ಧರ್ಮಗಳು ಯಾವತ್ತೂ ನಮ್ಮನ್ನು ಬೇರ್ಪಡಿಸದೆ ಒಂದುಗೂಡಿಸುತ್ತದೆ. ಎಲ್ಲ ಧರ್ಮಗಳ ಒಳ್ಳೆಯ ವಿಚಾರಗಳನ್ನು ಹೃದಯ -ಮನಸ್ಸು- ಜೀವಗಳ ಪರಿವರ್ತನೆ, ದ್ವೇಷದಿಂದ ಪ್ರೇಮದೆಡೆಗೆ ಸಾಗುವ. ಪರಸ್ಪರ ಪ್ರೀತಿ, ಸಹಬಾಳ್ವೆ, ಸಹಿಷ್ಣುತೆಗೆ ಕಾರಣವಾಗಬೇಕೆಂದರು. ಸಿವಿಲ್ ಇಂಜಿನಿಯರ್ ಜಗದೀಶ ಪ್ರಸಾದ್ ಎಲ್ಲಾ ಧರ್ಮಗಳನ್ನು ಪರಸ್ಪರ ಗೌರವಿಸಿ ನಮ್ಮ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸಬೇಕೆಂದರು. ಇದೇ ಸಂದರ್ಭದಲ್ಲಿ ಸಮಿತಿಯ ಸ್ಥಾಪಕಾಧ್ಯಕ್ಷ ರವೀಂದ್ರ ಒಪ್ಪಂತಾಯ ಹಾಗೂ ಹಿರಿಯ ಸಮಾಜ ಸೇವಕ ಸುಬ್ರಾಯ ಶೆಣೈಯವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ಅರುಣ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಬಾಲಕೃಷ್ಣ ಗೌಡ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾಗೇಶ್ ಸ್ವಾಗತಿಸಿ, ಸಮಿತಿ ಅಧ್ಯಕ್ಷ ಶಶಿಧರ ಬೆಡಿಗುತ್ತು ವಂದಿಸಿದರು. ಕೋಶಾಧಿಕಾರಿ ಎಚ್.ಎನ್. ನಾಗರಾಜ್, ಸ್ಟಾನ್ಲಿ ಜಯಕರ್ ಮೊದಲಾ ದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮದಂಗವಾಗಿ ಒರಿಯಡ್ದ್ ಒರಿ ಅಸಲ್ ಹಾಸ್ಯಮಯ ತುಳು ನಾಟಕ ಪ್ರದರ್ಶಿಸಲ್ಪಟ್ಟಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.