ಕಿರಿಯಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಕಾರ್ಯಕ್ರಮದ ಉದ್ಘಾಟನೆ

  Astami udgatane kiriyadiಉಜಿರೆ : ಶ್ರೀ ಉಮಾ ಮಹೇಶ್ವರ ಭಜನಾ ಮಂಡಳಿ ಕಿರಿಯಾಡಿ ಇದರ ಆಶ್ರಯದಲ್ಲಿ ದೊಂಪದ ಪಲ್ಕೆಯಲ್ಲಿ ನಡೆದ 25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಾಲಯವನ್ನು ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಉದಯ ಕುಮಾರ್ ಸಂಪಿಗೆತ್ತಾಯರು ಉದ್ಘಾಟಿಸಿದರು. ಓಡಲು ವ್ಯಾಘ್ರ ಚಾಮುಂಡಿ ದೈವಸ್ಥಾನದ ಟ್ರಸ್ಟಿ ಅಧ್ಯಕ್ಷ ಎಂ.ಜಿ. ಶೆಟ್ಟಿ, ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಸಲಹಾ ಅಧ್ಯಕ್ಷ ರವಿಚಂದ್ರ ಚಕ್ಕಿತ್ತಾಯ, ಅಧ್ಯಕ್ಷ ಭಗೀರಥ ಡಿ, ಉಪಾಧ್ಯಕ್ಷ ಕೆ. ಶ್ರೀಧರ ಬಂಗೇರ, ಕಾರ್ಯದರ್ಶಿ ಮಾಧವ ಗೌಡ, ಜೊತೆ ಕಾರ್ಯದರ್ಶಿ ಕೃಷ್ಣ ಪ್ರಸಾದ್, ಕೋಶಾಧಿಕಾರಿ ಸೋಮನಾಥ, ಸಂಜೀವ ಹೆಗ್ಡೆ, ಧರ್ಣಪ್ಪ ಗೌಡ, ರಮೇಶ ಗೌಡ, ಕೆ. ತಾರಾನಾಥ, ಸೀತಾರಾಮ ಗೌಡ, ಯಾದವ ಕುಲಾಲ್, ರಾಘವೇಂದ್ರ ಕಾರಂತ, ಚೀಂಕ್ರ ಗೌಡ, ಸಂಜೀವ ಗೌಡ, ವಿಠಲ ನಾಯ್ಕ, ಯಶೋಧರ ಗೌಡ, ನಿರಂಜನ್ ಬಳಂಜ, ಎಸ್.ವಿ. ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಪ್ರಧಾನ ಸಂಚಾಲಕ ಪರಮೇಶ್ವರ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.