HomePage_Banner_
HomePage_Banner_

ಮಡಂತ್ಯಾರು: ೨೬ನೇ ವರ್ಷದ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಹಬ್ಬಗಳ ಸಾಮೂಹಿಕ ಆಚರಣೆ ಸೌರ್ಹಾದತೆಯ ಸಂಕೇತ : ಜೋಸೆಫ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

madanthyaru krshnaastami samaropa copy

ಮಡಂತ್ಯಾರು : ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮಡಂತ್ಯಾರು ಇದರ ಆಶ್ರಯದಲ್ಲಿ ೨೬ನೇ ವರ್ಷದ ಮೊಸರು ಕುಡಿಕೆ ಉತ್ಸವವು ಮಡಂತ್ಯಾರು ಗಣಪತಿ ಮಂಟಪದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸೆ.೬ರಂದು ವೈಭವ ಪೂರ್ಣವಾಗಿ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಡಂತ್ಯಾರು ಸೇ.ಹಾ. ಕಾಲೇಜಿನ ಉಪನ್ಯಾಸಕ ಜೋಸೆಫ್ ಎನ್.ಎಂ. ಅವರು ವಹಿಸಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಹಿಂದೂಸ್ಥಾನದಲ್ಲಿ ಹಿಂದುಗಳು, ಕ್ರೈಸ್ತರು, ಮುಸ್ಲಿಮರು, ಜೈನರು ಸೇರಿದಂತೆ ಎಲ್ಲಾ ಧರ್ಮಿಯರು ಜಾತಿ ಮತ ಬೇಧವನ್ನು ಮರೆತು ಭಾಗವಹಿಸುತ್ತಾರೆ. ಇಂತಹ ಆಚರಣೆಗಳಿಂದ ಊರಲ್ಲಿ ಸೌಹಾರ್ದತೆ, ಒಗ್ಗಟ್ಟು ಮೂಡುತ್ತದೆ ಇದು ಈ ಭೂಮಿಯ ಸಂಸ್ಕೃತಿಯಾಗಿದೆ ಎಂದು ಹೇಳಿದರು.
ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ ಅವರು ಮಾತನಾಡಿ ಮಡಂತ್ಯಾರುನಲ್ಲಿ ನಡೆಯುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು ಅವರು ಮಾತನಾಡಿ ಊರಿನ ಜನರಲ್ಲಿ ಸಂಘಟನೆ ಮತ್ತು ಸಹೋದರತೆಯನ್ನು ನಿರ್ಮಾಣ ಮಾಡಿ ಊರಿನಲ್ಲಿ ನೆಮ್ಮದಿಯನ್ನು ಉಂಟು ಮಾಡಲು ಇಂತಹ ಆಚರಣೆಗಳು ಪ್ರೇರಣೆ ನೀಡುತ್ತದೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಆನಂದಿ ಟೀಚರ್, ವಿಜಯ ಬಾಂಕ್ ಸಿದ್ಧಕಟ್ಟೆ ಮೇನೇಜರ್ ಬೇಬಿ ಕುಂದರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಬಂಗೇರ, ಮಡಂತ್ಯಾರು ಗ್ರಾ.ಪಂ. ಪಿಡಿಒ ನಾಗೇಶ್, ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಜೀವ ಶೆಟ್ಟಿ ಮೊಗೇರೋಡಿ, ಸಮಿತಿ ಅಧ್ಯಕ್ಷ ಶ್ರೀನಿವಾಸ ಕುಲಾಲ್, ಗೌರವಾಧ್ಯಕ್ಷ ಪ್ರಶಾಂತ್ ಎಂ. ಪ್ರತಿಮ ನಿಲಯ, ಕಾರ್ಯದರ್ಶಿ ವೆಂಕಟರಮಣ ಗೌಡ, ಕೋಶಾಧಿಕಾರಿ ರೂಪೇಶ್ ಆಚಾರ್ಯ ಉಪಸ್ಥಿತರಿದ್ದರು. ಶಿಲ್ಪ, ಚಿತ್ರ, ಶುಭಲತಾ ಇವರ ಪ್ರಾರ್ಥನೆ ಬಳಿಕ ಪುನಿತ್ ಕುಮಾರ್ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಪದ್ಮನಾಭ ಸುವರ್ಣ ಬಳ್ಳಮಂಜ ಕಾರ್ಯಕ್ರಮ ನಿರೂಪಿಸಿ, ಸ್ಥಾಪಕಾಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ ವಂದಿಸಿದರು.
ಚಿಕಿತ್ಸೆಗೆ ನೆರವು ಹಸ್ತಾಂತರ:
ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಮಡಂತ್ಯಾರು ಇವರು ಪುಟ್ಟ ಮಗು ದಿತಿ ಇವಳ ಚಿಕಿತ್ಸೆಗೆ ರೂ.೩೭,೭೫೦ ಮತ್ತು ಓಂ ಶಕ್ತಿ ಗೆಳೆಯರ ಬಳಗ ಮಡಂತ್ಯಾರು ಇವರು ರೂ.೧೫ ಸಾವಿರ ಸೇರಿದಂತೆ ಒಟ್ಟು ರೂ.೫೦ ಸಾವಿರವನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಕುಲಾಲ್ ಅವರಿಗೆ ಈ ಸಂದರ್ಭ ಹಸ್ತಾಂತರಿಸಿ ಮಾನವೀಯತೆ ಮೆರೆದರು.
ವಿವಿಧ ಸ್ಪರ್ಧೆ:
ಈ ಸಂದರ್ಭದಲ್ಲಿ ಬೆಳಗ್ಗಿನಿಂದಲೇ ಸಾರ್ವಜನಿಕರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಬೈಕ್ ರೇಸ್, ಗೋವಿಂದ ಸ್ಪರ್ಧೆ, ಶ್ರೀ ಕೃಷ್ಣ ವೇಷ ಸ್ಪರ್ಧೆ ವಿಶೇಷ ಆಕರ್ಷಣೆ ಪಡೆಯಿತು. ಸಂಜೆ ಶ್ರೀ ಕೃಷ್ಣನ ವೈಭವದ ಮೆರವಣಿಗೆ ನಡೆಯಿತು. ರಾತ್ರಿ ಸಿಟಿ ಗಾಯ್ಸ್ ಡ್ಯಾನ್ಸ್ ಅಕಾಡೆಮಿ ಗುರುಪುರ ಇವರಿಂದ ಡ್ಯಾನ್ಸ್ ನೈಟ್ ಮನರಂಜಿಸಿತು.
ಕಾರ್ಯಕ್ರಮಕ್ಕೆ ಸಮಿತಿಯ ಪದಾಧಿಕಾರಿಗಳಾದ ನವಿನ್ ಶ್ರೀನಿಧಿ, ಕುಶಾಲಪ್ಪ ಗೌಡ, ಜಯ, ನಾರಾಯಣ ನಾವಡ, ಪ್ರಕಾಶ್ ಕೆ.ಸುವರ್ಣ, ವೀರೇಂದ್ರ ಕುಮಾರ್, ಗಿರಿಯಪ್ಪ ಪೂಜಾರಿ, ಶಂಕರ ಶೆಟ್ಟಿ, ಪ್ರಮೋದ್ ಕುಮಾರ್, ತುಳಸಿ ಹಾರಬೆ, ನಾರಾಯಣ ಪೂಜಾರಿ ಬಳ್ಳಮಂಜ, ಪುರುಷೋತ್ತಮ ಶೆಟ್ಟಿ ಸೋಣಂದೂರು, ಲಕ್ಷ್ಮಣ ಮೆಸ್ಕಾಂ, ಉಮೇಶ್ ಸುವರ್ಣ, ದಯಾನಂದ ಶೆಟ್ಟಿ, ಹರೀಶ್ ಶೆಟ್ಟಿ, ದಿನೇಶ್ ಕರ್ಕೆರಾ, ಹರೀಶ್ ಕುಮಾರ್ ಭಾಸ್ಕರ್ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಪೂರ್ಣ ಸಹಕಾರ ನೀಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.