HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ : ನಿವೃತ್ತರಿಗೆ, ಸಾಧಕರಿಗೆ ಸನ್ಮಾನ ಶಿಕ್ಷಕರು ದೇಶ ಕಟ್ಟುವವರು: ಶಾಸಕ ಬಂಗೇರ

  shikshakara dinacharanashiksakara dinacharana samithi belt teachers day SHIKSHAKARA DINACHARAANE (1)ಬೆಳ್ತಂಗಡಿ : ಜಿಲ್ಲಾ ಪಂಚಾಯತ್ ಮಂಗಳೂರು, ತಾ.ಪಂ. ಬೆಳ್ತಂಗಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಹಾಗೂ ನ.ಪಂ. ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾಭವನದಲ್ಲಿ ಸೆ.೫ರಂದು ಆಚರಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಅಧ್ಯಕ್ಷತೆಯನ್ನು ನ.ಪಂ. ಅಧ್ಯಕ್ಷೆ ನಳಿನಿ ವಿಶ್ವನಾಥ ವಹಿಸಿದ್ದರು. ಪುತ್ತೂರು ವಿವೇಕಾನಂದ ಸ್ವಾಮಿ ಮಹಾವಿದ್ಯಾಲಯ ನಿವೃತ್ತ ಪ್ರಾಂಶುಪಾಲ ಡಾ| ಮಾಧವ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ಜಯಂತಿ ಪಾಲೇದು, ನಗರ ಪಂಚಾಯತ್ ಉಪಾಧ್ಯಕ್ಷೆ ಮಮತಾ ಶೆಟ್ಟಿ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ. ಉಪಾಧ್ಯಕ್ಷ ವಿಷ್ಣು ಮರಾಠೆ, ಗ್ರೇಟ್ ೨ ತಹಶಿಲ್ದಾರ್ ಚೆನ್ನಪ್ಪ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಪಿ. ಕುಚಿನಾಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್, ಜಿ. ಪಂ. ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ. ಆರ್ ನರೇಂದ್ರ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಾಧಾಕೃಷ್ಣ ಟಿ, ತಾ| ದೈಹಿಕ ಶಿಕ್ಷಣ ನಿರ್ದೇಶಕ ಭುವನೇಶ್, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಜ್‌ಗುರು ಹೆಬ್ಬಾರ್, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಮಯ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಕೊಕ್ರಾಡಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಧ್ಯಕ್ಷೆ ಶೀಲಾ ಎಸ್ ಹೆಗ್ಡೆ, ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸ್ಥರದ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಪ್ರಶಸ್ತಿ ವಿಜೇತ ಶಿಕ್ಷಕರಾದ ಸೋಮಶೇಖರ ಶೆಟ್ಟಿ ಉಜಿರೆ, ವೆಂಕಟೇಶ್ ತುಳಪುಳೆ, ರತ್ನಾಕರ್, ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟ ಶಿಕ್ಷಕರಾದ ಜಯ ಕೆ ಬಡಗಕಾರಂದೂರು, ಯಾಕೂಬ್ ನಡ, ಸದಾಶಿವ ಪೂಜಾರಿ ಉಜಿರೆ, ರವೀಂದ್ರ ರಾವ್
ಹೊಕ್ಕಾಡಿಗೋಳಿ, ಪ್ರಭಾಕರ ಹೆಗ್ಡೆ, ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ನಿವೃತ್ತರಿಗೆ ಗೌರವಾರ್ಪಣೆ:
ಪ್ರಸ್ತುತ ವರ್ಷ ಕರ್ತವ್ಯದಿಂದ ನಿವೃತ್ತಿ ಹೊಂದಿದ ಶಿಕ್ಷಕರಾದ ಜಾನಕಿ ಬಡಗಕಾರಂದೂರು, ಯಮುನಾ ಎಸ್ ಕನ್ಯಾಡಿ ||, ಅಶೋಕ್ ಶಿರ್ಲಾಲು, ಜಗನ್ನಾಥ ಸಫಲಿಗ ಅಂಡಿಂಜೆ, ಶಿವಾನಂದ ಆಚಾರ್ ಕಾಶಿಪಟ್ನ, ರಮೇಶ್ ಮೂಲ್ಯ ಪುಂಜಾಲಕಟ್ಟೆ, ಬಿ ಸುಬ್ರಹ್ಮಣ್ಯ ರಾವ್ ಅಂಡೆತ್ತಡ್ಕ, ಪುಷ್ಪಲತಾ ಕೆ. ಪಿ, ಜಯರಾಮ ಶೆಟ್ಟಿ, ರುಕ್ಮಯ್ಯ ಪೂಜಾರಿ, ಶಿವರಾಮ, ಮೋಹನ್ ಉಪಾಧ್ಯಾಯ ಪೆರ್ಲ, ಆಶಾಲತಾ ಕಲ್ಲೇರಿ, ಬೆನೆಡಿಕ್ಟಾ ಮಿಲ್ಡ್ರೆಡ್ ನೊರೋನ್ಹಾ ಮಡಂತ್ಯಾರು, ಬೆನೆಡಿಕ್ಟಾ ಡಿಸಿಲ್ವ, ಎಂ ಪ್ರಸನ್ನ ಕುಮಾರ್, ಡಿ ರತ್ನಾವತಿ ಧರ್ಮಸ್ಥಳ, ಆಂಟೊನಿ ಲೋಬೋ ಮಡಂತ್ಯಾರು, ಲಿಡ್ವಿನ್ ಡಿಸೋಜಾ, ಕೆ ರತ್ನಾಕರ ನೂರಿತ್ತಾಯ ಗರ್ಡಾಡಿ, ಸುಲೋಚನಾ ಬಿ. ಹೆಗ್ಡೆ ವೇಣೂರು, ಬಿ. ಸೋಮಶೇಖರ ಶೆಟ್ಟಿ ಧರ್ಮಸ್ಥಳ, ಮುರಳೀಧರ ರಾವ್ ವೈ, ನಿರ್ಮಲಾ ನಾಯಕ್ ಧರ್ಮಸ್ಥಳ, ಎನ್. ಗಂಗಾಧರ್ ಬೆಳ್ತಂಗಡಿ, ನ್ಯಾನ್ಸಿ ನೆರಿಯ, ರಘುನಾಥನ್ ರೈ ಪುಂಜಾಲಕಟ್ಟೆ ಇವರನ್ನು ಸನ್ಮಾನಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು. ಸೋಮ ಶೇಖರ್ ಶೆಟ್ಟಿ ಮತ್ತು ಜಗನ್ನಾಥ ಸಫಲಿಗ ಅಂಡಿಂಜೆ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ದಿನಾಚರಣೆ ಬಾಬ್ತು ಧತ್ತಿನಿಧಿ ವಿಸ್ತರಣೆಗೆ ನಿವೃತ್ತ ಶಿಕ್ಷಕರು ದೇಣಿಗೆಗಳನ್ನು ಶಾಸಕರ ಮೂಲಕ ಹಸ್ತಾಂತರಿಸಿದರು.

ವೃತ್ತಿದ್ರೋಹ ಮಾಡದೆ ಕರ್ತವ್ಯ ಮಾಡುವವರು ಶಿಕ್ಷಕರು : ಬಂಗೇರ
ಶಿಕ್ಷಕರು ಜವಾಬ್ಧಾರಿಯಿಂದ ವರ್ತಿಸುವವರು, ದೇಶ ಕಟ್ಟುವ ನಿಜವಾದ ಕಾಯಕ ನಿರತರು, ಸಮಾಜದ ಬೇರೆಬೇರೆ ಸಮುದಾಯದ ಮಕ್ಕಳನ್ನು ತನ್ನ ಮಕ್ಕಳಂತೆ ಕಂಡು ಅವರನ್ನು ತಿದ್ದಿತೀಡಿ ಸರಿದಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವವರು. ಎಂದೂ ಕೂಡ ವೃತ್ತಿದ್ರೋಹ ಮಾಡದ್ದರಿಂದ ಇಂದಿಗೂ ಗುರುಪರಂಪರೆಗೆ ಗೌರವ ಕೊಡುವ ಪರಂಪರೆ ಚಾಲ್ತಿಯಲ್ಲಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಸಂತ ಬಂಗೇರ ಹೇಳಿದರು. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆ ಒಂದೆಡೆಯಾದರೆ ಇನ್ನೊಂದೆಡೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂಬುದೂ ಗಂಭೀರ ಸಮಸ್ಯೆ. ಸರಕಾರ ಎಲ್ಲಾ ಸೌಲಭ್ಯಗಳನ್ನೂ ಸರಕಾರಿ ಶಾಲೆಗಳಿಗೆ ಕೊಡುತ್ತಿದ್ದು ಆ ನಿಟ್ಟಿನಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವಲ್ಲಿ ಹಿಂಜರಿಯಬಾರದು ಎಂದರು.
ಚಿತ್ರ: ವಿಲ್ಸ್ ಬೆಳ್ತಂಗಡಿ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.