3609 ಫಲಾನುಭವಿಗಳಿಗೆ ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಣೆ ವಸತಿ ಯೋಜನೆ ರೂ.7.94ಕೋಟಿ ಸಾಲ ಮನ್ನಾ : ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

   Saala thiruvaliಬೆಳ್ತಂಗಡಿ : ೨೦೦೮-೦೯ನೇ ಸಾಲಿನಲ್ಲಿ ಸರಕಾರದ ವಿವಿಧ ಯೋಜನೆಗಳಲ್ಲಿ ಮನೆ ಪಡೆದುಕೊಂಡವರ ಸಾಲ ಮತ್ತು ಬಡ್ಡಿಯನ್ನು ಸರಕಾರ ಮನ್ನಾ ಮಾಡಿದ್ದು, ಇದರಿಂದ ತಾಲೂಕಿನ ೩೬೦೯ ಮಂದಿಯ ರೂ.೭.೯೪ಕೋಟಿ ಸಾಲ ಮನ್ನಾವಾಗಿದೆ ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು.
ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವಸತಿ ಇಲಾಖೆ, ತಾ.ಪಂ ಬೆಳ್ತಂಗಡಿ ಮತ್ತು ಪಟ್ಟಣ ಪಂಚಾಯತು ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಣಾ ಸಮಾರಂಭ ಸೆ.೭ರಂದು ಇಲ್ಲಿಯ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಜರುಗಿತು.
ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಿಸಿ ಮಾತನಾಡಿದ ಶಾಸಕ ಕೆ.ವಸಂತ ಬಂಗೇರ ಅವರು ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ತಿಯಾಗಿದ್ದು, ಬಡವರಿಗೆ ಆನೇಕ ಯೋಜನೆಗಳನ್ನು ಜಾರಿ ಮಾಡಿದೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರೂ.೧ರದರದಲ್ಲಿ ೩೦ಕೆ.ಜಿ ಅಕ್ಕಿ, ನಂತರ ಉಚಿತವಾಗಿ ೩೦ಕೆ.ಜಿ ಅಕ್ಕಿ, ಎಲ್ಲಾ ಬಡವರಿಗೆ ಬಿಪಿಎಲ್ ನೀಡಲಾಗಿದೆ ಎಂದು ಹೇಳಿದರು.
ಬಡವರಿಗೆ ನೀಡಲಾದ ಬಿಪಿಎಲ್ ಕಾರ್ಡ್‌ನ್ನು ಆನೇಕ ಮಂದಿ ಶ್ರೀಮಂತರು ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಇದನ್ನು ತನಿಖೆ ನಡೆಸಿ ಕೂಡಲೇ ರದ್ದುಪಡಿಸಲಾಗುವುದು. ಬಡವರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಯಾರೂ ಮಾಡಬೇಡಿ, ಕೆಲವೊಂದು ಗ್ರಾಮ ಪಂಚಾಯತದಲ್ಲಿ ಒಂದೇ ಕುಟುಂಬಕ್ಕೆ ನಾಲ್ಕೈದು ಮನೆಗಳು ದೊರಕಿದೆ. ಮತ್ತೆ ಅವರನ್ನೇ ಆಯ್ಕೆ ಮಾಡಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಅಂತಹ ಫಲಾನುಭವಿಗಳಿದ್ದರೆ ಅದನ್ನು ರದ್ದುಗೊಳಿಸಬೇಕು ಎಂದು ಹೇಳಿದರು. ಅಕ್ರಮ-ಸಕ್ರಮ ಯೋಜನೆಯಲ್ಲಿ ಕೆಲ ಕಡತಗಳು ಬಾಕಿಯಾಗಿದ್ದು, ಇದನ್ನು ಕೂಡಲೇ ವಿಲೇ ಮಾಡಲಾಗುವುದು. ೯೪ಸಿಯಲ್ಲಿ ಅರ್ಜಿಕೊಟ್ಟವರಿಗೂ ಹಕ್ಕು ಪತ್ರ ಕೊಡಿಸಲಾಗುವುದು, ಇದರ ಹಕ್ಕು
ಪತ್ರಕ್ಕಾಗಿ ಸಾವಿರಾರು ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ ಯಾರೂ ಹಣ ಕೊಡಬೇಡಿ, ಹಣ ಕೇಳುವವರ ಹೆಸರನ್ನು ನನ್ನ ಗಮನಕ್ಕೆ ತನ್ನಿ ಎಂದು ಬಂಗೇರ ತಿಳಿಸಿ, ಈ ಎಲ್ಲಾ ಬಡವರ ಪರ ಯೋಜನೆಗಳನ್ನು ನಮ್ಮ ಕಾಂಗ್ರೆಸ್ ಸರಕಾರ ಮಾಡಿರುವ ನೆನಪು ಬಡವರಿಗೆ ಇರಬೇಕು ಎಂದರು.
ತಾ.ಪಂ ಅಧ್ಯಕ್ಷೆ ಜಯಂತಿ ಪಾಲೇದು ಅವರು ಮಾತನಾಡಿ ಈ ಯೋಜನೆಯಲ್ಲಿ ಸಾಲ ಕಟ್ಟದವರ ಸಾಲ ಮನ್ನಾ ಮಾಡಲಾಗಿದೆ ಅದರಂತೆ ಪ್ರಾಮಾಣಿಕವಾಗಿ ಸಾಲ ಕಟ್ಟಿದವರಿಗೂ ಈ ಸೌಲಭ್ಯ ದೊರೆಯುವಲ್ಲಿ ಶಾಸಕರು ಪ್ರಯತ್ನಿಸಬೇಕು ಎಂದು ತಿಳಿಸಿದರು. ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ, ನಗರ ಪಂಚಾಯತು ಅಧ್ಯಕ್ಷೆ ನಳಿನಿ ವಿಶ್ವನಾಥ್, ಉಪಾಧ್ಯಕ್ಷೆ ಮಮತಾ ವಿ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಉಪಸ್ಥಿತರಿದ್ದರು. ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಮಹಾಂತೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ನ.ಪಂ ಯೋಜನಾಧಿಕಾರಿ ವೆಂಕಟ್ರಮಣ ಶರ್ಮ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿ, ಮಾಲಾಡಿ ಗ್ರಾ.ಪಂ ಸದಸ್ಯ ಪದ್ಮನಾಭ ಸಾಲ್ಯಾನ್ ವಂದಿಸಿದರು. ನಿಡ್ಲೆಯ ಶಕುಂತಳಾ ಶೆಟ್ಟಿ ಬಳಗ ನಾಡ ಗೀತೆ ಹಾಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.