HomePage_Banner_
HomePage_Banner_

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ವೈದ್ಯಕೀಯ ನೆರವು

ಬೆಳ್ತಂಗಡಿ: ಮಡಂತ್ಯಾರು ನಿವಾಸಿ ರವಿ ಪೂಜಾರಿ ಮತ್ತು ಪೂರ್ಣಿಮಾ ದಂಪತಿ ಪುತ್ರಿ ಆರಾಧ್ಯ ರವರು ಶ್ರವಣ ದೋಷ ಹಾಗೂ ವಾಕ್ ದೋಷದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಇವರ ಕುಟುಂಬಕ್ಕೆ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಘಟಕದ ಸದಸ್ಯರಿಂದ ಒಟ್ಟುಗೂಡಿಸಿದ ಸಹಾಯಧನವನ್ನು ಅ.25 ರಂದು ಗುರುವಾಯನಕೆರೆಯ ಗೆಳೆಯರ ಬಳಗ ಶಾರದಾ ಮಂಟಪದಲ್ಲಿ ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್ ವಿತರಿಸಿದರು.
ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ, ಕೋಶಾಧಿಕಾರಿ ಸಂತೋಷ್ ಸಾಲ್ಯಾನ್ ಅರಳಿ, ಸಮಾಜಸೇವಾ ನಿರ್ದೇಶಕ ಮನೋಜ್ ಕುಂಜರ್ಪ, ಸಲಹೆಗಾರ ರವಿ ಕುಮಾರ್ ಬರೆಮೇಲು, ನಿರ್ದೇಶಕ ಕಿಶೋರ್ ಪೆರ್ಲ, ಸಂಘಟನಾ ಕಾರ್ಯದರ್ಶಿ ಸುರೇಂದ್ರ ಕೋಟ್ಯಾನ್, ರಮೇಶ್ ಬಂಗೇರಾ, ನಾಗೇಶ್ ಆದೇಲು, ಸದಸ್ಯರಾದ ಸುರೇಶ್ ಪೆರ್ಲ, ಹರೀಶ್ ಪೆರ್ಲ, ಪ್ರಶಾಂತ್ ಬರೆಮೇಲು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.