HomePage_Banner_
HomePage_Banner_

ಮರೋಡಿ ನಡುಚ್ಚೂರು ಬಳಿ ಚಿರತೆ ದಾಳಿಗೆ ಹಸು ಬಲಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮರೋಡಿ: ಇಲ್ಲಿಯ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿಗೆ ಹಸುವೊಂದು ಬಲಿಯಾದ ಘಟನೆ ಅ. 19 ರಂದು ವರದಿಯಾಗಿದೆ.
ಸ್ಥಳೀಯ ನಿವಾಸಿ ದಿವಾಕರ ಹೆಗ್ಡೆಯವರ ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯು ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲದಿನಗಳ ಹಿಂದೆ ಹರೀಶ್ ಹೆಗ್ಡೆ ಅವರ ಕರುವೊಂದನ್ನು ಚಿರತೆ ತಿಂದು ಹಾಕಿದ್ದು ವರದಿಯಾಗಿದೆ

 

ಈ ಬಗ್ಗೆ ಮರೋಡಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದು, ತಕ್ಷಣ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಮೂರು ದಿನಗಳ ಹಿಂದೆ ಕುತ್ಲೂರಿನ ಬಜಿಲಪಾದೆ ಪರಿಸರದಲ್ಲಿ ಚಿರತೆಯೊಂದು ಪತ್ತೆಯಾಗಿದ್ದು, ಇದು ಅದೇ ಚಿರತೆಯೇ ಎಂಬ ಶಂಕೆಯಿದೆ.
ಈಗಾಗಲೇ ಬಜಿಲಪಾದೆಯಲ್ಲಿ ಬೋನು ಇಟ್ಟಿದ್ದು, ಶೀಘ್ರವೇ ನಡುಚ್ಚೂರು ಪರಿಸರದಲ್ಲಿಯೂ ಬೋನು ಇಟ್ಟು, ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸುವುದಾಗಿ ವೇಣೂರು ವಲಯ ಅರಣಾಧಿಕಾರಿ ಮಹೀಂ ಜನ್ ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.