HomePage_Banner_
HomePage_Banner_

ಪಿಲಿಗೂಡು: ಅಭಯವೃಕ್ಷ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಿಲಿಗೂಡು: ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಲ್ಯಾಂಪ್ಸ್ ಇದರ ವತಿಯಿಂದ ಅಭಯ ವೃಕ್ಷ ಕಾರ್ಯಕ್ರಮ ಅ.17 ರಂದು ಪಿಲಿಗೂಡು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ವಠಾರದಲ್ಲಿ ಜರುಗಿತು.
ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಕೃಷಿಯಿಂದ ಗೌರವದಿಂದ ಬದುಕಲು ಸಾಧ್ಯ. ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ದೇಹ ಮತ್ತು ಮನಸ್ಸು ಆರೋಗ್ಯವಾಗಿ ಬದುಕಬಹುದು ಎಂದರು.


ಲ್ಯಾಂಪ್ ಸೊಸೈಟಿ ಅಧ್ಯಕ್ಷ ಲಿಂಗಪ್ಪ ನಾಯ್ಕ ಉರುವಾಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಯವೃಕ್ಷ ಕಾರ್ಯಕ್ರಮ ನಮ್ಮ ಯೋಚನೆಯಾಗಿದ್ದು, ಅದನ್ನು ಯೋಜನೆಯಾಗಿ ಪರಿವರ್ತಿಸಿದ್ದೇವೆ. ಜಂಗಲ್ ಬಚಾವ್ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಮಾಡಿರುತ್ತೇವೆ ಎಂದರು.
ಕಣಿಯೂರು ಮಹಮ್ಮಾಯಿ ಮರಾಠಿ ಸೇವಾ ಸಂಘದ ಅಧ್ಯಕ್ಷ ಪುತ್ತು ನಾಯ್ಕ ಕುಡುವಂತಿ, ಪದ್ಮುಂಜ ಸಿ.ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಚಾಮುಂಡೇಶ್ವರಿ ಶಿಲ್ಪಕಲಾ ಕೇಂದ್ರದ ಪದ್ಮನಾಭ ಮೇಸ್ತ್ರಿ, ಕಣಿಯೂರು ಗಾ.ಪಂ ಮಾಜಿ ಅಧ್ಯಕ್ಷ ಸುನೀಲ್ ಸಾಲ್ಯಾನ್ ಎ, ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಂಘದ ಉಪಾಧ್ಯಕ್ಷೆ ಸುನಂದ, ಲ್ಯಾಂಪ್ಸ್‌ನ ನಿರ್ದೇಶಕ ತಿಮ್ಮಪ್ಪ ನಾಯ್ಕ್ ಪ್ರಶಾಂತ್ ಉಪಸ್ಥಿತರಿದ್ದರು.
ಕಣಿಯೂರು ಮೂಲ್ಯರ ಯಾನೆ ಕುಲಾಲರ ಸಂಘ, ಕಣಿಯೂರು ಮರಾಠಿ ಸಂಘ, ಪಿಲಿಗೂಡು ಅಟೋ ಚಾಲಕರ ಸಂಘ, ಹಲೇಜಿ ಜೈ ಶಿವಾಜಿ ಗೆಳೆಯರ ಬಳಗ, ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು,
ಕು.ನಿಶ್ಮಿತಾ ಮತ್ತು ಭೂಮಿಕಾ ಪ್ರಾರ್ಥಿಸಿ, ನಿನ ಕುಮಾರ್ ಸ್ವಾಗತಿಸಿ, ಶ್ವೇತಾ ಕೆ ಕಾರ್ಯಕ್ರಮ ನಿರೂಪಿಸಿ, ಸುಧೀರ್ ಕೆ.ಎನ್ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.