HomePage_Banner_
HomePage_Banner_

ಗುರುವಾಯನಕೆರೆಯಲ್ಲಿ ಶ್ರೀ ಮೂಕಾಂಬಿಕಾ ಫರ್ನಿಚರ್ಸ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು: ಗುರುವಾಯನಕೆರೆ ಸರಕಾರಿ ಹೈಸ್ಕೂಲ್ ಹತ್ತಿರ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಮೂಕಾಂಬಿಕಾ ಪರ್ನಿಚರ್ಸ್ ಇದರ ಉದ್ಘಾಟನೆಯು ಅ.19 ರಂದು ಜರುಗಿತು. ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಕೃಷ್ಣ ಗ್ಲಾಸ್ & ಪ್ಲೈವುಡ್ ಮಾಲಕ ಭಾಸ್ಕರ ರೈ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀದೇವಿ ಕಾಂಪ್ಲೇಕ್ಸ್ ಮಾಲಕ ತಾರಾನಾಥ, ಗೇರುಕಟ್ಟೆ ಬದ್ರಿಯಾ ಕಾಂಪ್ಲೆಕ್ಸ್ ಮಾಲಕ ಉಸ್ಮಾನ್ ಹಾಜಿ, ಬೆಳ್ತಂಗಡಿ ಸೂಪರ್ ಬಜಾರ್ ಮಾಲಕ ಕೆ.ಎಂ. ಅಬ್ದುಲ್ ಹಾಜಿ, ರುಕ್ಮಯ್ಯ ಗೌಡ ಬಿರ್ಮಕೋಡಿ ,ಕೆನರಾ ಸ್ಟೈನ್ ಲೆಸ್ ಮಾಲಕ ವಿನಯಚ್ಚಂದ್ರ, ಸಂಸ್ಥೆಯ ಮಾಲಕರ ಮಾತಾ ಪಿತರಾದ ಅಣ್ಣು ಮೂಲ್ಯ ಪುಷ್ಪಾವತಿ ದಂಪತಿ, ಕವಿತಾ,ಸುದರ್ಶನ್, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಮರದ ಟೇಬಲ್, ಕಪಾಟುಗಳು, ದಾರಂದ ಬಾಗಿಲು, ಮಂಚ, ಡೈನಿಂಗ್ ಟೇಬಲ್, ಟಿಪಾಯಿ, ವುಡ್ ಪ್ಲೈನಿಂಗ್, ವುಡ್ ಟರ್ನಿಂಗ್, ವುಡ್ ಡಿಸೈನ್, ಸ್ಟೀಲ್ ಡೋರ್, ಸ್ಟೀಲ್ ದಾರಂದ ಹಾಗೂ ಎಲ್ಲಾ ರೀತಿಯ ಮರದ ಪೀಠೋಪಕರಣಗಳು ತಯಾರಿಸಿ ಕೊಡಲಾಗುವುದೆಂದು ಸಂಸ್ಥೆಯ ಮಾಲಕ ಯಶೋಧರ ತಿಳಿಸಿ, ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.