ಅರಸಿನಮಕ್ಕಿ: ಬಕೆಟ್ ನ ನೀರಿನೊಳಗೆ ಬಿದ್ದು ಮಗು ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ: ಇಲ್ಲಿಯ ಕಲ್ಲಕೋಟೆ ನಿವಾಸಿ ಜಗದೀಶ್ ಆಚಾಯ೯ ಮತ್ತು ವಿದ್ಯಾ ದಂಪತಿಯ   8 ತಿಂಗಳ ಹೆಣ್ಣು ಮಗು ಆಜ್ಞಾ ಬಕೇಟ್ ನೀರಿಗೆ ಬಿದ್ದು ಅಸುನೀಗಿದ ಘಟನೆ ಅ.18 ರಂದು ಸಂಜೆ ನಡೆದಿದೆ.
ಮಗುವಿನ ತಾಯಿ ಬಟ್ಟೆ ಒಗೆಯುತ್ತಿದ್ದ ಸಂದಭ೯ ಲೋಟ ಹಿಡಿದುಕೊಂಡಿದ್ದ ಮಗು ಟಾಯ್ಲೆಟ್ ಗೆ ಹೋಗಿ ಬಕೆಟ್ ನಲ್ಲಿದ್ದ ನೀರಿಗೆ ಲೋಟವನ್ನು ಹಾಕಿ ತೆಗೆಯಲು ಯತ್ನಿಸಿದಾಗ ಕಾಲು ಜಾರಿ ಬಕೆಟ್ ರೊಳಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.

ಸ್ವಲ್ಪ ಹೊತ್ತಿನಲ್ಲಿ ಮಗು ಕಾಣದಿದ್ದಾಗ ತಾಯಿ ಮಗುವನ್ನು ಹುಡುಕುತ್ತಾ   ಟಾಯ್ಲೆಟ್ ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಗದೀಶ್ ಆಚಾರ್ಯರವರು ಅರಸಿನಮಕ್ಕಿ-ಕೊಕ್ಕಡ ನಡುವೆ ಜೀಪು ಸವೀ೯ಸ್ ಮಾಡುತ್ತಿದ್ದು, ಘಟನೆ ನಡೆದಾಗ ಅವರು ಶಿವಮೊಗ್ಗ ಬಳಿಯ ಜೋಗಕ್ಕೆ ಬಾಡಿಗೆಗೆ ತೆರಳಿದ್ದರು ಎಂದು ತಿಳಿದುಬಂದಿದೆ

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.